ಬಡತನ ಹೋಗಲಾಡಿಸಿದರೂ ನಮಗೆ ನೊಬೆಲ್ ಇಲ್ಲ: ಚೀನಾ ಅಳಲು| ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹಾಗೂ ಇನ್ನಿಬ್ಬರಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದಕ್ಕೆ ಆಕ್ರೋಶ
ಬೀಜಿಂಗ್[ಅ.17] : ಭಾರತದ ವಿರುದ್ಧ ಸದಾ ವಕ್ರ ದೃಷ್ಠಿಯಿಂದ ನೋಡುವ ಚೀನಾ, ಬಡತನ ನಿರ್ಮೂಲನೆ ಪ್ರಯತ್ನಿಸಿದ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹಾಗೂ ಇನ್ನಿಬ್ಬರಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದಕ್ಕೆ ಉರಿದು ಬಿದ್ದಿದೆ.
ಚೀನಾ ಎಂಟೂವರೆ ಕೋಟಿ ಜನರನ್ನು ಭಾರೀ ಬಡತನದಿಂದ ಮೇಲೆತ್ತಿದರೂ ನೊಬೆಲ್ ಸಿಕ್ಕಿಲ್ಲ. ಚೀನಾ ಈ ಸಾಧನೆಗೆ ನೊಬೆಲ್ ಸಿಗಬೇಕಿತ್ತು ಎಂದು ಅಲ್ಲಿನ ಜನ ಸಾಮಾಜಿಕ ಜಾಲ ತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ತಮಗೂ ನೊಬೆಲ್ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಚೀನಿಯರು ಚಳುವಳಿಯನ್ನೂ ಆರಂಭಿಸಿದ್ದು, ಭಾರೀ ಟ್ರೆಂಡಿಂಗ್ ಪಡೆದುಕೊಂಡಿದೆ.
ವಿವಿಧ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿರುವ ನೆಟ್ಟಿಗರು, ಚೀನಾದ ಸಹಾಯವಿಲ್ಲದೇ ಯಾವುದೇ ಬಡತನ ನಿರ್ಮೂಲನಾ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.