
ರಿಯಾದ್: ಷರಿಯಾ ಕಾನೂನು ಹೊಂದಿರುವ ಸೌದಿ ಅರೇಬಿಯಾ, ಇದೀಗ ದೇಶದಲ್ಲಿ ಇನ್ನಷ್ಟು ಕಠಿಣ ಷರಿಯಾ ನಿಯಮ ಜಾರಿಗೆ ಮುಂದಾಗಿದೆ. ಈ ಪ್ರಕಾರ ಸಾರ್ವಜನಿಕ ಸ್ಥಳ, ಸಂಸ್ಥೆಗಳಲ್ಲಿ ಅಲ್ಲಾಹುವಿಗೆ ಸೇರಿದ ಕೇವಲ 7 ಹೆಸರುಗಳನಷ್ಟೇ ಕರೆಯಬೇಕು ಎನ್ನುವ ನಿಯಮ ವಿಧಿಸಿದೆ. ಆ ಏಳು ಹೆಸರುಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
ಸೌದಿ ಅರೇಬಿಯಾದ ಸಂಸತ್ ಇದಕ್ಕೆ ಅನುಮೋದನೆ ನೀಡಿದೆ. ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿ ಅಲ್ಲಾಹುವಿನ ಹೆಸರನ್ನು ಕರೆಯುವುದಕ್ಕೆ ಕಡಿವಾಣ ಹೇರುವುದಕ್ಕೆ ಈ ಕಾನೂನು. ಇದರ ಪ್ರಕಾರ ಅಲ್-ಸಲಾಮ್, ಅಲ್-ಅದ್ಲ್, ಅಲ್-ಅವ್ವಲ್, ಅಲ್-ನೂರ್, ಅಲ್-ಹಕ್, ಅಲ್-ಶಾಹಿದ್ ಮತ್ತು ಅಲ್-ಮಲಿಕ್ ಎನ್ನುವ ಹೆಸರುಗಳಿಂದ ಅಲ್ಲಾಹುವಿನ ಹೆಸರನ್ನು ಕರೆಯಬೇಕು ಎನ್ನಲಾಗಿದೆ.
ಮುಂದಿನ 120 ದಿನಗಳಲ್ಲಿ ಈ ನಿಯಮ ಜಾರಿಗೆ ಬರಲಿದ್ದು, ಶಾಲಾ - ಕಾಲೇಜುಗಳು, ವಿಶ್ವವಿದ್ಯಾನಿಲಯ, ಆಸ್ಪತ್ರೆ, ಸಾಂಸ್ಕೃತಿಕ ಕೇಂದ್ರ, ಮಸೀದಿ ಸೇರಿದಂತೆ ಸರ್ಕಾರಕ್ಕೆ ಸಂಬಂಧಿಸಿದ ಕಚೇರಿಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ. ಈ ಪುಸ್ತಕಗಳು ಷರಿಯಾ ಕಾನೂನು, ತಾಲಿಬಾನ್‌ನ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗಾಗಿ ಅವುಗಳ ಬೋಧನೆ ನಿಷೇಧಿಸುವಂತೆ ಎಲ್ಲಾ ವಿವಿಗಳಿಗೆ ಅಲ್ಲಿನ ಶಿಕ್ಷಣ ಸಚಿವ ಸೂಚಿಸಿದ್ದಾರೆ. ಈ ಹಿಂದೆ ಭೀಕರ ಭೂಕಂಪಕ್ಕೆ ಆಫ್ಘಾನ್ ತುತ್ತಾಗಿದ್ದಾಗ, ಮಹಿಳೆಯರ ರಕ್ಷಣೆ ಮೇಲೆ ತಾಲಿಬಾನ್ ನಿಷೇಧ ಹೇರಿತ್ತು. ಜೊತೆಗೆ ಹೆಣ್ಣುಮಕ್ಕಳಿಗೆ 5ನೇ ತರಗತಿಗಿಂತ ಹೆಚ್ಚು ಶಿಕ್ಷಣ, ಪರಪುರುಷರಿಗೆ ಮುಖ ತೋರಿಸುವುದು, ವಿಶ್ವ ವಿದ್ಯಾಲಯಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ