
ವಾಷಿಂಗ್ಟನ್: ವೆನಿಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋರನ್ನು ಸೆರೆ ಹಿಡಿದ ಘಟನೆ ಬಗ್ಗೆ ಚೀನಾ, ರಷ್ಯಾ ಕಿಡಿಕಾರಿದ್ದರೆ, ಈ ಬೆಳವಣಿಗೆ ಭಾರತದ ಪಾಲಿಗೆ 9000 ಕೋಟಿ ರು. ಮೊತ್ತದ ತೈಲ ವಾಪಸ್ ಮತ್ತು ತೈಲ ಖರೀದಿಗೆ ಹೊಸ ಮೂಲವನ್ನು ಸೃಷ್ಟಿಸುವ ಸಾಧ್ಯತೆ ಸೃಷ್ಟಿಸಿದೆ.
ವಿನಿಜುವೆಲಾದ ಕ್ರಿಸ್ಟೋಬಲ್ ತೈಲ ನಿಕ್ಷೇಪಗಳಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ವಿದೇಶ್ ಲಿ. ಭಾರೀ ಹೂಡಿಕೆ ಮಾಡಿದೆ. ಆದರೆ ಆ ದೇಶದ ಮೇಲೆ ಅಮೆರಿಕದ ನಿರ್ಭಂದದ ಬಳಿಕ ಭಾರತದ ಕಂಪನಿಗಳಿಗೆ ಹೂಡಿಕೆ ಮೇಲಿನ ಆದಾಯದ ಪಾಲನ್ನು ವೆನಿಜುವೆಲಾ ಸ್ಥಗಿತಗೊಳಿಸಿತ್ತು. ಅದು ಹೆಚ್ಚು ಕಡಿಮೆ 9000 ಕೋಟಿ ರು.ನಷ್ಟಿದೆ. ಇದೀಗ ಅಲ್ಲಿ ಮತ್ತೆ ಹೊಸ ತೈಲ ಬಾವಿಗಳು ತೆರೆದರೆ, ಭಾರತಕ್ಕೆ ಅಷ್ಟು ಹಣ ಇಲ್ಲವೇ, ಆ ಮೊತ್ತದ ತೈಲ ಆಮದಿನ ನಿರೀಕ್ಷೆ ವ್ಯಕ್ತವಾಗಿದೆ.
ಮತ್ತೊಂದೆಡೆ ನಿರ್ಬಂಧದ ಹೊರತಾಗಿಯೂ ವೆನಿಜುವೆಲಾದಿಂದ ತೈಲ ಖರೀದಿಗೆ ಭಾರತದ ರಿಲಯನ್ಸ್ ಅನುಮತಿ ಪಡೆದುಕೊಂಡಿತ್ತು. ಆದರೆ ನಾನಾ ಕಾರಣಗಳಿಂದ ಅದು ಕಾರ್ಯಸಾಧುವಾಗಿರಲಿಲ್ಲ. ಆದರೆ ಇದೀಗ ತೈಲ ಬಾವಿಗಳು ಅಮೆರಿಕದ ತೆಕ್ಕೆಗೆ ಬಂದರೆ ರಿಲಯನ್ಸ್ ತೈಲ ಖರೀದಿಗೆ ಅವಕಾಶ ಸಿಗಲಿದೆ. ಜೊತೆಗೆ ಮಧ್ಯಪ್ರಾಚ್ಯ ದೇಶಗಳನ್ನು ಹೊರತುಪಡಿಸಿ, ಭಾರತಕ್ಕೆ ತೈಲ ಆಮದಿಗೆ ಹೊಸದೊಂದು ಮೂಲ ಸಿಕ್ಕಿದಂತೆ ಆಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ