
ಕಾರಕಸ್: ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕ ಬಂಧಿಸಿ ಕರೆದೊಯ್ದ 2 ದಿನಗಳ ಬಳಿಕ, ಮಡುರೋ ಅವಧಿಯಲ್ಲಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದ ಡೆಲ್ಸಿ ರೋಡ್ರಿಗಸ್ ದೇಶದ ಹಂಗಾಮಿ ಅಧ್ಯಕ್ಷೆಯಾಗಿ ಸೋಮವಾರ ಮಧ್ಯಾಹ್ನ (ವೆನಿಜುವೆಲಾ ಕಾಲಮಾನ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ವೇಳೆ ತಮ್ಮ ಬಲಗೈ ಎತ್ತಿದ ಡೆಲ್ಸಿ, ‘ನಮ್ಮ ತಾಯ್ನಾಡಿನ ಮೇಲೆ ಕಾನೂನುಬಾಹಿರ ಸೇನಾ ದಾಳಿಯ ನಂತರ ಇಲ್ಲಿನ ಜನರಿಗೆ ಉಂಟಾದ ನೋವಿಗಾಗಿ ನಾನು ದುಃಖದಿಂದ ಬರುತ್ತಿದ್ದೇನೆ. ಇಬ್ಬರು ವೀರರ (ಮಡುರೋ ದಂಪತಿ) ಅಪಹರಣಕ್ಕಾಗಿ ನೋವಿನಿಂದಲೇ ಆಗಮಿಸಿದ್ದೇನೆ’ ಎಂದು ಗಮನ ಸೆಳೆದರು.
ಮಡುರೋ ಅವರಂತೆಯೇ, ಪ್ರಸ್ತುತ ವೆನಿಜುವೆಲಾದ ಹಂಗಾಮಿ ಅಧ್ಯಕ್ಷೆ ಪಟ್ಟಕ್ಕೇರಿರುವ ಡೆಲ್ಸಿ ರೋಡ್ರಿಗಸ್ ಕೂಡ ಪುಟ್ಟಪರ್ತಿಯ ಸತ್ಯಸಾಯಿ ಬಾಬಾರ ಪರಮಭಕ್ತೆ. ಅವರು ಇತ್ತೀಚೆಗೆ 2 ಬಾರಿ ಪುಟ್ಟಪರ್ತಿಗೆ ಬಂದು ಆಶೀರ್ವಾದ ಪಡೆದಿದ್ದರು ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ