ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರ ಹಾಗೂ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮೆಕ್ಕಾ-ಮದೀನಾ ಇರುವ ದೇಶವಾದ ಸೌದಿ ಅರೇಬಿಯಾದಲ್ಲಿ ಐತಿಹಾಸಿಕ ಬದಲಾವಣೆ ಕಾಣುತ್ತಿದೆ. ಶುಕ್ರವಾರ ಸೌದಿ ಅರೇಬಿಯಾ ತನ್ನ ಮೊಟ್ಟಮೊದಲ ಸ್ವಿಮ್‌ವೇರ್ ಫ್ಯಾಶನ್ ಶೋ ನಡೆಸಿದೆ.
ನವದೆಹಲಿ (ಮೇ.18): ಒಂದೆಡೆ ಭಾರತದ ಶಾಲೆಗಳಲ್ಲಿ ಬುರ್ಖಾ ಬಡಿದಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರ ಹಾಗೂ ಮೆಕ್ಕಾ-ಮದೀನಾ ಇರುವ ದೇಶವಾದ ಸೌದಿ ಅರೇಬಿಯಾ ದೊಡ್ಡ ಮಟ್ಟದ ಬದಲಾವಣೆಗೆ ತನ್ನನ್ನು ತೆರೆದುಕೊಂಡಿದೆ. ಶುಕ್ರವಾರ ಸೌದಿ ಅರೇಬಿಯಾ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಒಂದು ದಶಕದ ಹಿಂದೆ ಇದೇ ದೇಶಸಲ್ಲಿ ಮಹಿಳೆಯರು ಸಂಪೂರ್ಣ ದೇಹವನ್ನು ಮುಚ್ಚುವಂಥ ಅಬಯಾ ಡ್ರೆಸ್‌ಗಳನ್ನು ಧರಿಸುವುದು ಕಡ್ಡಾಯವಾಗಿತ್ತು. ಆದರೆ, ಶುಕ್ರವಾರ ಇದೇ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಸ್ವಿಮ್‌ವೇರ್ ಫ್ಯಾಶನ್ ಶೋ ನಡೆದಿದೆ. ಸ್ವಿಮ್‌ವೇರ್ ಧರಿಸಿದ ಮಾಡೆಲ್‌ಗಳು ಸೌದಿ ನೆಲದಲ್ಲಿ ಭಾಗಿಯಾಗಿದ್ದಾರೆ. ಈ ಫ್ಯಾಶನ್ ಶೋ ಸೌದಿ ಅರೇಬಿಯಾದಂತಹ ದೇಶದಲ್ಲಿ ದೊಡ್ಡ ಬದಲಾವಣೆಯ ಸಂಕೇತವಾಗಿದೆ. ಪೂಲ್‌ಸೈಡ್‌ನಲ್ಲಿ ಆಯೋಜನೆ ಮಾಡಲಾಗಿದ್ದ ಈ ಫ್ಯಾಶನ್ ಶೋನಲ್ಲಿ ಮೊರಾಕ್ಕೊದ ಡಿಸೈನರ್ ಯಾಸ್ಮಿನಾ ಕಂಜಾಲ್ ವಿನ್ಯಾಸ ಮಾಡಿದ ಸ್ವಿಮ್‌ವೇರ್‌ಗಳನ್ನು ಧರಿಸಿ ಮಾಡೆಲ್‌ಗಳು ಪೋಸ್ಟ್ ನೀಡಿದರು.
ಹೆಚ್ಚಿನ ವಿನ್ಯಾಸಗಳು ಕೆಂಪು, ಬೀಜ್ ಉಣ್ಣೆ ಬಟ್ಟೆ, ನೀಲಿ ಬಣ್ಣದ ಒನ್ ಪೀಸ್ ಸೂಟ್‌ಗಳನ್ನು ಒಳಗೊಂಡಿತ್ತು. ಫ್ಯಾಶನ್ ಶೋನಲ್ಲಿ ಭಾಗಿಯಾಗಿದ್ದ ಹೆಚ್ಚಿನ ಮಾಡೆಲ್‌ಗಳ ಭುಜಗಳ ಮೇಲೆ ಬಟ್ಟೆ ಇದ್ದಿರಲಿಲ್ಲ. ಇನ್ನು ಕೆಲವರು ಸೊಂಟ, ಹೊಕ್ಕುಳ ಭಾಗವನ್ನು ನಿರಾಳವಾಗಿ ತೋರಿಸಿದ್ದರು. 'ನಾವು ಇಲ್ಲಿಗೆ ಬಂದಾಗ, ಸೌದಿ ಅರೇಬಿಯಾದಲ್ಲಿ ಸ್ವಿಮ್‌ವೇರ್ ಫ್ಯಾಶನ್ ಶೋ ಐತಿಹಾಸಿಕ ಕ್ಷಣ ಎನ್ನುವುದನ್ನು ಅರ್ಥ ಮಾಡಿಕೊಂಡೆವು. ಇಲ್ಲಿ ಈವರೆಗೂ ಇಂಥ ಫ್ಯಾಶನ್ ಶೋ ನಡೆದಿರಲಿಲ್ಲ' ಎಂದು ಕಂಜಲ್ ಹೇಳಿದ್ದು, ಇಂಥ ಶೋನಲ್ಲಿ ಭಾಗಿಯಾಗಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.
ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯಲ್ಲಿರುವ ಸೇಂಟ್ ರೆಗಿಸ್ ರೆಡ್ ಸೀ ರೆಸಾರ್ಟ್‌ನಲ್ಲಿ ಉದ್ಘಾಟನಾ ರೆಡ್ ಸೀ ಫ್ಯಾಶನ್ ವೀಕ್‌ನ ಎರಡನೇ ದಿನದಂದು ಫ್ಯಾಷನ್ ಶೋ ನಡೆಯಿತು. ರೆಸಾರ್ಟ್ ರೆಡ್ ಸೀ ಗ್ಲೋಬಲ್‌ನ ಭಾಗವಾಗಿದೆ, ಸೌದಿ ಅರೇಬಿಯಾದ ವಿಷನ್ 2030 ಸಾಮಾಜಿಕ ಮತ್ತು ಆರ್ಥಿಕ ಸುಧಾರಣಾ ಕಾರ್ಯಕ್ರಮದ ಅಡಿಯಲ್ಲಿ ಗಿಗಾ-ಪ್ರಾಜೆಕ್ಟ್‌ಗಳೆಂದು ಕರೆಯಲ್ಪಡುತ್ತದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪುಗೊಂಡಿದೆ.
ಸೌದಿ ಅರೇಬಿಯಾದಲ್ಲಿ, ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ 2017 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಏರಿದರು. ಸೌದಿ ಅರೇಬಿಯಾದ ಐತಿಹಾಸಿಕವಾಗಿ ಪ್ರಚಲಿತದಲ್ಲಿರುವ ವಹಾಬಿಸಂ ಎಂದು ಕರೆಯಲ್ಪಡುವ ಕಟ್ಟುನಿಟ್ಟಾದ ಇಸ್ಲಾಮಿಕ್ ಚಿತ್ರಣವನ್ನು ಮೃದುಗೊಳಿಸಲು ಅವರು ದೊಡ್ಡಮಟ್ಟದ ಸಾಮಾಜಿಕ ಸುಧಾರಣೆಗಳನ್ನು ಯೋಜನೆ ಮಾಡಿದ್ದಾರೆ.
ಈ ಬದಲಾವಣೆಗಳ ಅಡಿಯಲ್ಲಿ, ಸೌದಿ ಅರೇಬಿಯಾದಲ್ಲಿ ಲಾಠಿ ಬಲವನ್ನು ಬಳಸುವ ಧಾರ್ಮಿಕ ಪೋಲೀಸರನ್ನು ಬದಿಗಿಡಲಾಯಿತು. ಇದೇ ಪೊಲೀಸರು ಮಾಲ್‌ನಿಂದ ಜನರನ್ನು ಪ್ರಾರ್ಥನೆ ಮಾಡಲು ಕರೆತರುತ್ತಿದ್ದರು. ದೇಶದಲ್ಲಿ ಸಿನಿಮಾ ಹಾಲ್‌ಗಳನ್ನು ಮತ್ತೆ ತೆರೆಯಲಾಗಿದೆ ಮತ್ತು ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಸಂಗೀತ ಕಚೇರಿಗಳು ಪ್ರಾರಂಭವಾಗುತ್ತಿದೆ. ಅಂತಹ ಕ್ರಮಗಳನ್ನು ವಿರೋಧಿಸುವ ಸಂಪ್ರದಾಯವಾದಿ ಧರ್ಮಗುರುಗಳು ಸೇರಿದಂತೆ ಭಿನ್ನಾಭಿಪ್ರಾಯವನ್ನು ಹೆಚ್ಚು ಗುರಿಯಾಗಿಸಿಕೊಂಡ ಆಡಳಿತಕ್ಕೆ ರಾಜಕುಮಾರ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಿದ್ದಾರೆ.
undefined
ಶಾಲೆಗಳಲ್ಲಿ ಬುರ್ಖಾ ನಿಷೇಧಿಸಿದ ಸಚಿವ ಗೇಬ್ರಿಯಲ್ ಇದೀಗ ಫ್ರಾನ್ಸ್‌ನ ನೂತನ ಪ್ರಧಾನಿ!
ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದ ಸಿರಿಯಾದ ಫ್ಯಾಷನ್ ಪ್ರಭಾವಿ ಶೌಕ್ ಮೊಹಮ್ಮದ್, ಸೌದಿ ಅರೇಬಿಯಾವು ಜಗತ್ತಿಗೆ ತೆರೆದುಕೊಳ್ಳಲು ಮತ್ತು ಅದರ ಫ್ಯಾಷನ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಗಮನಿಸಿದರೆ ಆಶ್ಚರ್ಯವೇನಿಲ್ಲ ಎಂದು ಹೇಳಿದರು.
ಬುರ್ಖಾ ತೆಗೆಸಿ ಐಡಿ ಚೆಕ್ ಮಾಡಿದ ಮಾಧವಿ ಲತಾ, ಚುನಾವಣಾ ಆಯೋಗದಿಂದ ಕೇಸ್!