ಸೌದಿ ಅರೇಬಿಯಾದಲ್ಲಿ ಕೇವಲ ಒಂದು ವಾರದಲ್ಲಿ 13,186 ವೀಸಾ ನಿಯಮ ಉಲ್ಲಂಘಿಸಿದವರು, 5,427 ಗಡಿ ಭದ್ರತಾ ನಿಯಮ ಉಲ್ಲಂಘಿಸಿದವರು ಮತ್ತು 3,358 ಕಾರ್ಮಿಕ ಕಾನೂನು ಉಲ್ಲಂಘಿಸಿದವರನ್ನು ಬಂಧಿಸಲಾಗಿದೆ.
ರಿಯಾದ್ (ಅ.20): ಕಳೆದ ವಾರದಲ್ಲಿ ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಕಾರ್ಮಿಕ, ವೀಸಾ ಮತ್ತು ಗಡಿ ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ 21,971 ವಿದೇಶಿಯರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಭದ್ರತಾ ಪಡೆಗಳು ಮತ್ತು ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಕ್ಷೇತ್ರ ಭದ್ರತಾ ತಪಾಸಣೆಯ ಸಂದರ್ಭದಲ್ಲಿ ಈ ಬಂಧನಗಳು ನಡೆದಿವೆ. 13,186 ವೀಸಾ ನಿಯಮ ಉಲ್ಲಂಘಿಸಿದವರು, 5,427 ಗಡಿ ಭದ್ರತಾ ನಿಯಮ ಉಲ್ಲಂಘಿಸಿದವರು ಮತ್ತು 3,358 ಕಾರ್ಮಿಕ ಕಾನೂನು ಉಲ್ಲಂಘಿಸಿದವರನ್ನು ಬಂಧಿಸಲಾಗಿದೆ.
ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ 1421 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಶೇ.34ರಷ್ಟು ಯೆಮೆನ್ ಪ್ರಜೆಗಳು, ಶೇ.64ರಷ್ಟು ಇಥಿಯೋಪಿಯನ್ ಪ್ರಜೆಗಳು ಮತ್ತು ಶೇ.2ರಷ್ಟು ಇತರ ದೇಶಗಳ ಪ್ರಜೆಗಳಾಗಿದ್ದಾರೆ. ಅಕ್ರಮವಾಗಿ ದೇಶದಿಂದ ಹೊರಹೋಗಲು ಯತ್ನಿಸುತ್ತಿದ್ದ 53 ಜನರನ್ನು ಬಂಧಿಸಲಾಗಿದೆ. ಒಟ್ಟು 15,775 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ, ಇದರಲ್ಲಿ 13,885 ಪುರುಷರು ಮತ್ತು 1,890 ಮಹಿಳೆಯರಿದ್ದಾರೆ.
undefined
ಒಟ್ಟು 8,370 ಕಾನೂನು ಉಲ್ಲಂಘಿಸಿದವರನ್ನು ಪ್ರಯಾಣ ದಾಖಲೆಗಳನ್ನು ಪಡೆಯಲು ಅವರ ದೂತಾವಾಸಗಳಿಗೆ ಉಲ್ಲೇಖಿಸಲಾಗಿದೆ. 2,054 ಕಾನೂನು ಉಲ್ಲಂಘಿಸಿದವರನ್ನು ಅವರ ಪ್ರಯಾಣ ಮೀಸಲಾತಿಯನ್ನು ಪೂರ್ಣಗೊಳಿಸಲು ಉಲ್ಲೇಖಿಸಲಾಗಿದೆ. 12,355 ಕಾನೂನು ಉಲ್ಲಂಘಿಸಿದವರನ್ನು ನಾಡಿನಿಂದ ಹೊರಹಾಕಲಾಗಿದೆ.
ಇದನ್ನೂ ಓದಿ: ದಿ ಗೋಟ್ ಲೈಫ್ (ಆಡು ಜೀವಿತಂ): ಸೌದಿಗೆ ಹೋಗಿ ನೋವು ಅನುಭವಿಸಿದ ಭಾರತೀಯರ ಕಥೆ!
ಇತ್ತೀಚೆಗೆ ಪಾಕಿಸ್ತಾನದಲ್ಲಿ ತಲೆದೋರಿದ ಭೀಕರ ಆರ್ಥಿಕ ಅಸ್ತಿರತೆ ಮತ್ತು ಆಹಾರ ಸಮಸ್ಯೆಯಿಂದಾಗಿ ಅಲ್ಲಿನ ಜನರು ವಿವಿಧ ದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ. ಅದರಲ್ಲಿ ಭಾರತವೂ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಇದೀಗ ಪಾಕಿಸ್ತಾನಿಗಳು ಅಕ್ರಮವಾಗಿ ನೆಲೆಸಿದ್ದಾರೆ. ಇನ್ನು ಕಳೆದೊಂದು ತಿಂಗಳ ಹಿಂದಷ್ಟೇ ಸೌದಿ ಅರೇಬಿಯಾದ ಎಲ್ಲೆಂದರಲ್ಲಿ ಭಿಕ್ಷೆ ಬೇಡುತ್ತಿದ್ದವರನ್ನು ಬಂಧಿಸಿದ ಸೌದಿ ಅರೇಬಿಯಾ ಪೊಲೀಸರು ಅವರು ಎಲ್ಲಿಯವರು ಎಂದು ಪರಿಶೀಲನೆ ಮಾಡಿದಾಗ ಪಾಕಿಸ್ತಾನದವರು ಎಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲಿಯೇ ಪಾಕಿಸ್ತಾನದಿಂದ ಭಿಕ್ಷುಕರನ್ನು ಸೌದಿ ಅರೇಬಿಯಾಕ್ಕೆ ಕಳಿಸದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ರವಾನಿಸಲಾಗಿತ್ತು.ಇನ್ನು ಸೌದಿಯಲ್ಲಿ ಅನಧೀಕೃತವಾಗಿ ವಲಸೆ ಬಂದು ಸಿಕ್ಕಿದ್ದ ಎಲ್ಲ ಪಾಕಿಸ್ತಾನಿಗಳನ್ನು ವಾಪಸ್ ಅವರ ದೇಶಕ್ಕೆ ಕಳುಹಿಸಲಾಗಿತ್ತು. ಜೊತೆಗೆ, ಮತ್ತೊಮ್ಮೆ ಇಂತಹ ಕೃತ್ಯಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ರವಾನಿಸಲಾಗಿತ್ತು.
ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ ಸೌದ್ ರಾಜಮನೆತನ, ಆದರೆ ವಿವಾದಗಳು ಒಂದೆರಡಲ್ಲ!
ಹಜ್ ವೀಸಾದರಿ ಸೌದಿಗೆ ಭಿಕ್ಷುಕರ ರವಾನೆ:
ಪಾಕಿಸ್ತಾನದ ಪ್ರಜೆಗಳು ತಮ್ಮ ದೇಶದ ಪರಿಸ್ಥಿತಿಗೆ ಬೇಸತ್ತು ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳಗಳಿಗೆ ಹೋಗಲು ಅಂತಾರಾಷ್ಟ್ರಿಯವಾಗಿ ನೀಡಲಾಗುವ ಉಮ್ರಾ ಮತ್ತು ಹಜ್ ಯಾತ್ರೆಯ ವೀಸಾವನ್ನು ಪಡೆದುಕೊಂಡು ಸೌದಿಗೆ ಹೋಗುತ್ತಿದ್ದರು. ಅಲ್ಲಿಂದ ಇವರು ಮೆಕ್ಕಾ, ಮದೀನಾಗೆ ತೆರಳಿ ಅಲ್ಲಿನ ಬೀದಿ, ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಏಕಾಏಕಿ ಎಲ್ಲ ರಸ್ತೆಗಳನ್ನು ಭಿಕ್ಷುಕರನ್ನು ನೋಡಿದ ಸೌದಿ ಪ್ರಾಧಿಕಾರಕ್ಕೆ ತಲೆನೋವು ಶುರುವಾಗಿತ್ತು. ಇದರ ಬೆನ್ನಲ್ಲಿಯೇ ಎಲ್ಲ ಭಿಕ್ಷಕರನ್ನು ಎತ್ತಿಕೊಂಡು ಹೋಗಿ ಗಡಿಪಾರು ಮಾಡಲಾಗಿತ್ತು. ಇದಾದ ನಂತರ ಪಾಕಿಸ್ತಾನದಿಂದ ಉಮ್ರಾ ಮತ್ತು ಹಜ್ ವೀಸಾದಡಿ ಭಿಕ್ಷುಕರನ್ನು ಸೌದಿ ಅರೇಬಿಯಾಗೆ ಕಳಿಸದಂತೆ ಹಾಗೂ ಅಂಥವರಿಗೆ ವೀಸಾ ನೀಡದಂತೆ ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಲಾಗಿತ್ತು. ಆದರೂ ಅಲ್ಲಿ ಉಳಿದುಕೊಂಡಿದ್ದ ಅಕ್ರಮ ವಲಸಿಗರನ್ನು ಇದೀಗ ಸೌದಿ ಪ್ರಾಧಿಕಾರದಿಂದ ಗುರುತಿಸಿ ಗಡಿಪಾರು ಮಾಡಲಾಗುತ್ತಿದೆ.