'ಸೇಂಟ್ ಆ್ಯಂಡ್ರ್ಯೂ...' ಹೆಸರಿನ ರಷ್ಯಾದ ಅತ್ಯುಚ್ಚ ನಾಗರಿಕ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ಇಂದು ಪ್ರದಾನ ಮಾಡಲಾಗುತ್ತದೆ.
ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ರಷ್ಯಾ ಪ್ರವಾಸ ನಿನ್ನೆ ಆರಂಭವಾಗಿದೆ. ಮೊದಲ ದಿನ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಖಾಸಗಿ ಔತಣ ನೀಡಿದರು. ಇಂದು ಇಂಡೋ-ರಷ್ಯಾ ಶೃಂಗ ನಡೆಯಲಿದೆ ಹಾಗೂ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇದೇ ವೇಳೆ, 'ಸೇಂಟ್ ಆ್ಯಂಡ್ರ್ಯೂ...' ಹೆಸರಿನ ರಷ್ಯಾದ ಅತ್ಯುಚ್ಚ ನಾಗರಿಕ ಗೌರವವನ್ನು ಪ್ರಧಾನಿ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಸೋಮವಾರ ಸಂಜೆ ಮಾಸ್ಕೋಗೆ ಬಂದಿಳಿದ ಮೋದಿ ಅವರನ್ನು ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮನುಟ್ರೋವ್ ಸ್ವಾಗತಿಸಿದರು. ಈ ಹಿಂದೆ ಚೀನಾ ಪ್ರಧಾನಿ ಕ್ಸಿ ಜಿನ್‌ಪಿಂಗ್ ಅವರನ್ನೂ ಡೆನಿಸ್ ಅವರೇ ಸ್ವಾಗತಿಸಿದ್ದರು. ಈ ವೇಳೆ ರಷ್ಯಾದ ಯುವತಿಯರು ಭರತನಾಟ್ಯ ಮಾಡಿ ಮೋದಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಬಳಿಕ ಪುಟಿನ್ ಅವರು ಮೋದಿ ಅವರಿಗೆ ಖಾಸಗಿ ಔತಣ ಹಮ್ಮಿಕೊಂಡಿದ್ದರು. ಪುಟಿನ್ ತಮ್ಮ ಆಪ್ತರಿಗೆ ಮಾತ್ರ ಈ ಔತಣ ಕೂಟ ನೀಡುತ್ತಾರೆ. ರಷ್ಯಾಗೆ ಬರುವ ಎಲ್ಲ ವಿದೇಶಿ ನಾಯಕರಿಗೆ ಈ ರೀತಿ ಔತಣ ನೀಡುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಈ ವೇಳೆ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಇಬ್ಬರ ನಡುವೆ ಅನೌಪಚಾರಿಕ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.
undefined
ಸೋಲಿನಿಂದ ಧೃತಿಗೆಡಬೇಡಿ: ಸುಧಾಮೂರ್ತಿ ಅಳಿಯನಿಗೆ ಧೈರ್ಯ ತುಂಬಿದ ರಾಹುಲ್!
ಇಂದು ಏನೇನು ಕಾರ್ಯಕ್ರಮ?
ಇಂದು ಭಾರತ-ರಷ್ಯಾ 2ನೇ ವಾರ್ಷಿಕ ಶೃಂಗ ನಡೆಯಲಿದ್ದು, ಈ ವೇಳೆ ಪುಟಿನ್ ಹಾಗೂ ಮೋದಿ ಹಲವು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ. ಬಳಿಕ ಭಾರತೀಯ ಸಮುದಾಯವನ್ನು ಉದ್ದೇಶಿಸಿ ರಸಾಟೋಂ ಪೆವಿಲಿಯನ್ ಸಭಾಂಗಣದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. ರಷ್ಯಾದ ಹುತಾತ್ಮ ಸ್ಮಾರಕಕ್ಕೂ ಮೋದಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಕಳೆದ ವರ್ಷ ಸಾರಲಾಗಿದ್ದ ‘ಆರ್ಡರ್ ಆಫ್ ಸೇಂಟ್ ಆ್ಯಂಡ್ರ್ಯೂ ಅಪಾಸಲ್’ ಹೆಸರಿನ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಮೋದಿ ಪ್ರವಾಸದ ವೇಳೆ ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 31 ಬಲಿ
ಕೀವ್: ರಷ್ಯಾ ನಡೆಸಿದ ಪ್ರತ್ಯೇಕ ಕ್ಷಿಪಣಿ ದಾಳಿಗೆ ಸಿಲುಕಿ 31 ಜನರು ಸಾವನ್ನಪ್ಪಿ 150ಕ್ಕೂ ಅಧಿಕ ಜನ ಗಾಯಗೊಂಡ ಘಟನೆ ಉಕ್ರೇನ್‌ನ ರಾಜಧಾನಿ ಕೀವ್ ಸೇರಿದಂತೆ ವಿವಿಧ ನಗರಗಳಲ್ಲಿ ಸೋಮವಾರ ನಡೆದಿದೆ. ವಸತಿ ಪ್ರದೇಶ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್‌ನ 5 ನಗರಗಳ ಮೆಲೆ 40ಕ್ಕೂ ಅಧಿಕ ಕ್ಷಿಪಣಿಗಳನ್ನು ಬಳಸಿ ರಷ್ಯಾ ದಾಳಿ ಮಾಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೊಪಿಸಿದ್ದಾರೆ. ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸಲಾಗುತ್ತಿದ್ದು, ಸಾವಿನ ಸಂಖ್ಯೆ ನಿಖರವಾಗಿ ತಿಳಿದಿಲ್ಲ. ವಾಷಿಂಗ್ಟನ್‌ನಲ್ಲಿ 3 ದಿನಗಳ ನ್ಯಾಟೋ ಶೃಂಗಸಭೆ ನಡೆದ ಬೆನ್ನಲ್ಲೇ ಘಟನೆ ನಡೆದಿದ್ದು, ಕಳೆದ 4 ತಿಂಗಳಲ್ಲಿ ನಡೆದ ಭಯಂಕರ ದಾಳಿ ಇದಾಗಿದೆ.ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಭೇಟಿ ನೀಡುವ ಮುನ್ನ ಈ ಘಟನೆ ನಡೆದಿದೆ.
ದೇಗುಲ, ಶಾಲೆ, ಹೆಚ್ಚಿನ ವಿಮಾನಕ್ಕೆ ಮೋದಿಗೆ ಭಾರತೀಯರ ಕೋರಿಕೆ
ಮಾಸ್ಕೋ: ರಷ್ಯಾದಲ್ಲಿ ಹಿಂದೂ ದೇಗುಲ, ಭಾರತೀಯ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಹಾಗೂ ಭಾರತಕ್ಕೆ ನೇರವಾಗಿ ತಲುಪಲು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳನ್ನು ಮಂಜೂರು ಮಾಡುವಂತೆ ರಷ್ಯಾದಲ್ಲಿ ನೆಲೆಸಿರುವ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಮಾಸ್ಕೋ ಭೇಟಿ ವೇಳೆ ಮೋದಿ, ಭಾರತೀಯ ಸಮುದಾಯದ ಜನರನ್ನು ಭೇಟಿ ಮಾಡಲಿದ್ದು ಈ ವೇಳೆ ಇಂಥದ್ದೊಂದು ಬೇಡಿಕೆ ಸಲ್ಲಿಸಲು ಅವರು ನಿರ್ಧರಿಸಿದ್ದಾರೆ.
ಲಕ್ಸುರಿ ಕಾರಿಗಿಂತಲೂ ದುಬಾರಿ: 2 ರಿಂದ 3 ಗ್ರಾಂ ತೂಗುವ ಈ ಕೀಟದ ಬೆಲೆ ಒಂದೆರಡು ಲಕ್ಷ ಅಲ್ಲ: ಏನಿದರ ವಿಶೇಷತೆ?
ರಷ್ಯಾ- ಉಕ್ರೇನ್ ಶಾಂತಿ ಪರ ಮೋದಿ ಪರೋಕ್ಷವಾಗಿ ದನಿ
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಸಮರ ಆರಂಭಿಸಿದಾಗಿನಿಂದಲೂ ಅದನ್ನು ಒಮ್ಮೆಯೂ ಖಂಡಿಸದೆ ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಬಿಕ್ಕಟ್ಟು ಬಗೆಹರಿಸಿಕೊಳ್ಳಬೇಕು ಎಂದು ಹೇಳುತ್ತಲೇ ಬಂದಿರುವ ಭಾರತ, ಮತ್ತೊಮ್ಮೆ ಪರೋಕ್ಷವಾಗಿ ಶಾಂತಿ ಪರ ದನಿ ಎತ್ತಿದೆ. ರಷ್ಯಾ ಪ್ರವಾಸಕ್ಕೆ ಹೊರಡುವ ಮುನ್ನ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಶಾಂತಿ ಹಾಗೂ ಸ್ಥಿರತೆಗಾಗಿ ಪೂರಕವಾದ ಪಾತ್ರವನ್ನು ನಿರ್ವಹಿಸಲು ಭಾರತ ಬಯಸುತ್ತದೆ ಎಂದು ಹೇಳಿದ್ದರು. ಎರಡು ದಿನಗಳ ರಷ್ಯಾ ಪ್ರವಾಸಕ್ಕೆ ಹೊರಡುವ ಮುನ್ನ ಸೋಮವಾರ ಹೇಳಿಕೆ ನೀಡಿದ್ದ ಅವರು, ಕಳೆದ 10 ವರ್ಷಗಳ ಅವಧಿಯಲ್ಲಿ ಇಂಧನ, ಭದ್ರತೆ, ವ್ಯಾಪಾರ, ಹೂಡಿಕೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಜನರು- ಜನರ ವಿನಿಮಯ ಸೇರಿದಂತೆ ಎಲ್ಲ ವಲಯಗಳಲ್ಲಿ ಭಾರತ ರಷ್ಯಾದ ವಿಶೇಷ ಪಾಲುದಾರಿಕಾ ಬಾಂಧವ್ಯ ಮುಂದುವರಿದಿದೆ. ದ್ವಿಪಕ್ಷೀಯ ಸಹಕಾರದ ಎಲ್ಲ ಕೋನಗಳನ್ನೂ ನನ್ನ ಸ್ನೇಹಿತ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗೂಡಿ ಪರಿಶೀಲಿಸಲು ಎದುರು ನೋಡುತ್ತಿದ್ದೇನೆ ಎಂದಿದ್ದರು.