ಲಕ್ಸುರಿ ಕಾರಿಗಿಂತಲೂ ದುಬಾರಿ: 2 ರಿಂದ 3 ಗ್ರಾಂ ತೂಗುವ ಈ ಕೀಟದ ಬೆಲೆ ಒಂದೆರಡು ಲಕ್ಷ ಅಲ್ಲ: ಏನಿದರ ವಿಶೇಷತೆ?

ಜೀರುಂಡೆಯಂತಹ ಸಣ್ಣದೊಂದು ಕೀಟಕ್ಕೆ ಒಂದು ಲಕ್ಸುರಿ ಕಾರಿಗಿಂತಲೂ ಅಧಿಕ ಬೆಲೆ ಇದೆ ಅಂದ್ರೆ ನೀವು ನಂಬ್ತೀರಾ? ನಂಬ್ತೀರೋ ಬಿಡ್ತಿರೋ ಆದ್ರೆ ಇಂತಹ ಸುದ್ದಿಯೊಂದು ಈಗ ಸಂಚಲನ ಸೃಷ್ಟಿಸಿದೆ..

Stag beetle Weighing 2 to 3 grams this insect Price More expensive than a luxury car What makes it special here detail akb

ಜೀರುಂಡೆಯಂತಹ ಸಣ್ಣದೊಂದು ಕೀಟಕ್ಕೆ ಒಂದು ಲಕ್ಸುರಿ ಕಾರಿಗಿಂತಲೂ ಅಧಿಕ ಬೆಲೆ ಇದೆ ಅಂದ್ರೆ ನೀವು ನಂಬ್ತೀರಾ? ನಂಬ್ತೀರೋ ಬಿಡ್ತಿರೋ ಆದ್ರೆ ಇಂತಹ ಸುದ್ದಿಯೊಂದು ಈಗ ಸಂಚಲನ ಸೃಷ್ಟಿಸಿದೆ.. ಮರ ಕೊರೆಯುವ ಕೀಟದಂತೆ ಕಾಣುವ ಈ ಸ್ಟಾಗ್ ಬೀಟಲ್‌ನ ಬೆಲೆ ಒಂದೆರಡು ರೂಪಾಯಿ ಅಲ್ಲ, ಬರೋಬ್ಬರಿ 75 ಲಕ್ಷ ಅಂದ್ರೆ ಅಚ್ಚರಿ ಆಗೋದಂತೂ ಗ್ಯಾರಂಟಿ.  ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಬೆಲೆಯ ಕೀಟವಂತೆ.

ಕೀಟಕ್ಕೂ ಬೆಲೆನಾ? ಏನಿದರ ವಿಶೇಷತೆ ಎಂಬ ಅಚ್ಚರಿ ನಿಮಗಾಗಬಹುದು. ಆದರೆ ಈ ಅಪರೂಪದ ಕೀಟವನ್ನು ಅದೃಷ್ಟ ಎಂದು ನಂಬಲಾಗುತ್ತದೆಯಂತೆ. ಇದನ್ನು ತಮ್ಮ ಬಳಿ ಇಟ್ಟುಕೊಂಡರೆ ರಾತ್ರೋರಾತ್ರಿ ಶ್ರೀಮಂತರಾಗಬಹುದು ಎಂಬುದು ಜನರ ನಂಬಿಕೆ ಇದೇ ಕಾರಣಕ್ಕೆ ಈ ಸಾರಂಗ ಜೀರುಂಡೆ ಅಥವಾ ಸ್ಟಾಗ್ ಬೀಟಲ್ ಎಂದು ಕರೆಯಲ್ಪಡುವ ಈ ಕೀಟಕ್ಕೆ ಬರೋಬ್ಬರಿ 75 ಲಕ್ಷ ರೂಪಾಯಿ ಬೆಲೆ ಇದೆ. 

ಹೋಗಿದ್ದು ಕ್ಯಾನ್ಸರ್ ಪರೀಕ್ಷೆಗೆ, ಹೊಟ್ಟೇಲಿದ್ದ ಜೀವಂತ ಕೀಟ ನೋಡಿ ಡಾಕ್ಟರ್ಸ್ ಶಾಕ್!

ಅದರ ಜೀವನಚಕ್ರದ ಕೆಲವು ಭಾಗದಲ್ಲಿ ಮರಗಳ ಸತ್ತ ಅಥವಾ ಸಾಯುತ್ತಿರುವ ಮರದ ಮೇಲೆ ಅವಲಂಬಿತವಾಗಿರುವ ಜಾತಿಗಳು ಮತ್ತು ಅರಣ್ಯ ಜೀವವೈವಿಧ್ಯಕ್ಕೆ ಕೊಡುಗೆ ನೀಡುತ್ತವೆ. ಈ ಕೀಟಗಳು ಪರಿಸರ ವ್ಯವಸ್ಥೆಗಳಲ್ಲಿ ಗಮನಾರ್ಹವಾದ ಸ್ಯಾಪ್ರೊಕ್ಸಿಲಿಕ್ ಸಂಯೋಜನೆಯನ್ನು (saproxylic assemblage) ಪ್ರತಿನಿಧಿಸುತ್ತವೆ. (ಸ್ಯಾಪ್ರೊಕ್ಸಿಲಿಕ್ ಸಂಯೋಜನೆ ಎಂದರೆ ಕೀಟವೂ ತನ್ನ ಜೀವನಚಕ್ರದ ಕೆಲವು ಅವಧಿಯಲ್ಲಿ ಸತ್ತ ಮರಗಳ ಅಥವಾ ಸಾಯುತ್ತಿರುವ ಮರದ ಮೇಲೆ ಅವಲಂಬಿತವಾಗಿರುವ ಮೂಲಕ ಅರಣ್ಯ ಜೀವವೈವಿಧ್ಯಕ್ಕೆ ಕೊಡುಗೆ ನೀಡುವುದಾಗಿದೆ.) ಮತ್ತು ಈ ಕೀಟಗಳ ವಿಸ್ತರಿಸಿದ ದವಡೆಗಳು ಮತ್ತು ಪುರುಷ ಬಹುರೂಪತೆಗೆ(male polymorphism)  ಹೆಸರುವಾಸಿಯಾಗಿದೆ ಎಂದು ವೈಜ್ಞಾನಿಕ ಮಾಹಿತಿ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿ ಹೇಳಿದೆ.

ಸೈಬರ್‌ ಕೆಫೆ, ಕಾಫಿ ಕೆಫೆ ಗೊತ್ತು: ಆದರೆ ಕೀಟಗಳಿಗೂ ಕೆಫೆನಾ, ಏನಿದು 'ಇನ್‌ಸೆಕ್ಟ್‌ ಕೆಫೆ'

ಲಂಡನ್ ಮೂಲದ ಜೈವಿಕ ಇತಿಹಾಸ ಸಂಗ್ರಹಾಲಯದ ಪ್ರಕಾರ, ಈ ಕೀಟಗಳು 2 ರಿಂದ 6 ಗ್ರಾಂನಷ್ಟು ತೂಗುತ್ತವೆ. ಹೆಚ್ಚೆಂದರೆ 3 ರಿಂದ 7 ವರ್ಷಗಳ ಕಾಲ ಜೀವಿತಾವಧಿಯನ್ನು ಹೊಂದಿರುತ್ತವೆ. ಅದರಲ್ಲಿ ಗಂಡು ಕೀಟಗಳು 35 ರಿಂದ 75 ಮಿಲಿ ಮೀಟರ್ ಉದ್ದವಿದ್ದರೆ ಹೆಣ್ಣು ಕೀಟಗಳು 30 ರಿಂದ 50 ಮಿಲಿ ಮೀಟರ್‌ನಷ್ಟು ಉದ್ದವಿರುತ್ತೆ. ಇವುಗಳನ್ನು ಔಷಧೀಯ ಕಾರಣಕ್ಕೂ ಬಳಸಲಾಗುತ್ತದೆ. 

ಸ್ಟೇಗ್ ಬಿಟಲ್‌ ಎಂಬ ಹೆಸರು ಬಂದಿದ್ದು ಹೇಗೆ?

ಗಂಡು ಜೀರುಂಡೆಯ ದವಡೆಯ ಮೇಲೆ ಸಾರಂಗಗಳ ಕೊಂಬುಗಳನ್ನು ಹೋಲುವ ವಿಶಿಷ್ಟವಾದ ರಚನೆ ಇರುವ ಕಾರಣಕ್ಕೆ ಈ ಕೀಟಗಳಿಗೆ ಸ್ಟೇಗ್ ಬಿಟಲ್‌ ಎಂಬ ಹೆಸರು ಬಂದಿದೆ. ಈ ಕೊಂಬುಗಳಂತಿರುವ ದವಡೆಯನ್ನು ಸಾರಂಗ ಜೀರುಂಡೆಗಳು ತಮ್ಮ ಸಂತಾನಾಭಿವೃದ್ಧಿಯ ಕಾಲದಲ್ಲಿ ಹೆಣ್ಣು ಕೀಟದೊಂದಿಗೆ ಸೇರುವುದಕ್ಕಾಗಿ ಹೋರಾಡುವ ಸಮಯದಲ್ಲಿ ಪರಸ್ಪರ ಕಾದಾಡುವುದಕ್ಕಾಗಿ ಬಳಸುತ್ತವೆಯಂತೆ.

ಇವುಗಳ ವಾಸ ಸ್ಥಾನವೆಲ್ಲಿ?

ಈ ಸಾರಂಗ ಜೀರುಂಡೆಗಳು ಬೆಚ್ಚಗಿನ, ಉಷ್ಣವಲಯದ ಪರಿಸರದಲ್ಲಿ ಬೆಳೆಯುತ್ತವೆ ಮತ್ತು ಶೀತ ತಾಪಮಾನದಲ್ಲಿ ಸೂಕ್ಷ್ಮವಾಗಿರುತ್ತವೆ. ಅವು ನೈಸರ್ಗಿಕವಾಗಿ ಕಾಡುಪ್ರದೇಶಗಳಲ್ಲಿ ವಾಸಿಸುತ್ತವೆ. ಮುಳ್ಳುಗಿಡಗಳು, ಸಾಂಪ್ರದಾಯಿಕ ತೋಟಗಳು ಮತ್ತು ಉದ್ಯಾನವನಗಳು ಮತ್ತು ಉದ್ಯಾನಗಳಂತಹ ನಗರ ಪ್ರದೇಶಗಳಲ್ಲಿಯೂ ಹೀಗೆ ಸತ್ತ ಮರಗಳು ಎಲ್ಲಿರುತ್ತವೋ ಅಲ್ಲೆಲ್ಲಾ ಸಹಜವಾಗಿ ಕಂಡುಬರುತ್ತವೆ.

ಅವುಗಳ ಆಹಾರವೇನು?
ಸಾರಂಗ ಜೀರುಂಡೆಗಳಲ್ಲಿ ವಯಸ್ಕ ಕೀಟಗಳು ಕೊಳೆಯುತ್ತಿರುವ ಹಣ್ಣಿನ ರಸದಂತಹ ಸಿಹಿದ್ರವಗಳನ್ನು ತಿನ್ನುತ್ತವೆ. 

Latest Videos
Follow Us:
Download App:
  • android
  • ios