2015ರ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಅಪರಿಚಿತರ ಗುಂಡಿನ ದಾಳಿಗೆ ಮಟಾಷ್

By Mahmad Rafik  |  First Published Jul 8, 2024, 5:56 PM IST

ಬೈಕ್‌ನಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಅಲಿ ರಜಾ ಗಂಭೀರವಾಗಿ ಗಾಯಗೊಂಡಿದ್ದನು. ಅಲಿ ರಜಾ ಹಣೆಗೆ, ಕತ್ತು, ತಲೆ ಮತ್ತು ಕಾಲಿಗೆ ಗುಂಡು ತಗುಲಿತ್ತು ಎಂದು ರಜಾ ಉಮರ್ ಖತ್ತಾಬ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


ಇಸ್ಲಾಮಾಬಾದ್: 2015ರ ಗುರದಾಸಪುರ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಅಲಿ ರಜಾ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಸಾವು ಆಗಿದೆ ಎಂದು ವರದಿಯಾಗಿದೆ. ಜುಲೈ 7ರಂದು ಪಾಕಿಸ್ತಾದ ಕರಾಚಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಮೃತ ಅಲಿ ರಜಾ ಪೊಲೀಸ್ ಅಧೀಕ್ಷಕ (DSP) ಮತ್ತು ISI ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದನು. ಗುಂಡಿನ ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿಗೂ ಗುಂಡು ತಗುಲಿದೆ. ಗುಂಡಿನ ದಾಳಿ ಬಳಿಕ ಅಲಿ ರಜಾ ಮತ್ತು ಭದ್ರತಾ ಸಿಬ್ಬಂದಿಯನ್ನು ಜಿನ್ನಾ ಪೋಸ್ಟ್ ಗ್ರಾಜುಯೆಟ್ ಮೆಡಿಕಲ್ ಸೆಂಟರ್‌ಗೆ (JPMC) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅಲಿ ರಜಾ ಸಾವನ್ನಪ್ಪಿದ್ದಾನೆ. 

ಅಲಿ ರಜಾ ಗುಂಡಿನ ದಾಳಿಯಲ್ಲಿ ಮೃತರಾಗಿದ್ದಾರೆ ಎಂದು CTDಯ ವರಿಷ್ಠ ಅಧಿಕಾರಿ ರಜಾ ಉಮರ್ ಖತ್ತಾಬ್ ಪಾಕಿಸ್ತಾನದ ಡಾನ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮೃತ ತಹರಿಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಾಂಪ್ರದಾಯಿಕ ಸಮೂಹ, ಉಪ ರಾಷ್ಟ್ರವಾದಿ ಸಮೂಹ ಸೇರಿದಂತೆ ಹಲವು ನಿಷೇಧಿತ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದನು. ಅಲಿ ರಜಾ ಬುಲೆಟ್ ಪ್ರೂಫ್ ವಾಹನದಲ್ಲಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಅಲಿ ರಜಾ ಗಂಭೀರವಾಗಿ ಗಾಯಗೊಂಡಿದ್ದನು. ಅಲಿ ರಜಾ ಹಣೆಗೆ, ಕತ್ತು, ತಲೆ ಮತ್ತು ಕಾಲಿಗೆ ಗುಂಡು ತಗುಲಿತ್ತು ಎಂದು ರಜಾ ಉಮರ್ ಖತ್ತಾಬ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಪಾಕಿಸ್ತಾನದಲ್ಲಿ ಪೆಟ್ರೋಲ್‌ಗಿಂತ ದುಬಾರಿಯಾದ ಹಾಲು, ಲೀಟರ್‌ಗೆ 370 ರೂಪಾಯಿ!

ಅಲಿ ರಜಾ ಮೇಲಿನ ಗುಂಡಿನ ದಾಳಿ ಸಂಬಂಧ ಸಿಟಿಡಿಯ ಉಪ ಮಹಾನಿರೀಕ್ಷಕ ಆಸಿಫ್ ಇಜಾಜ್ ಶೇಖ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರ ಪೈಕಿ ಹಿಂದೆ ಕುಳಿತಿದ್ದ ವ್ಯಕ್ತಿ 11 ಬಾರಿ ಗುಂಡಿನ ದಾಳಿ ನಡೆಸಿದ್ದಾನೆ. ಮೃತ ಅಲಿ ರಜಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಇಮಾಮ್ ಬಾರ್ಗಾಹಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದ್ದಾರೆ. ಸಿಂಧ ಸಿಎಂ ಸೈಯದ್ ಮುರಾದ್ ಅಲಿ ಶಾ ಸಂತಾಪ ಸೂಚಿಸಿ, ಅಲಿ ರಜಾ ನಿಧನಕ್ಕೆ ಕಂಬನಿ ಮಿಡಿದು, ಮೃತರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಹತ್ಯೆಯಾದ ಅಧಿಕಾರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಐಜಿಪಿ ಸಿಂಧ್ ಅವರಿಗೆ ಸಿಎಂ ಸೂಚಿಸಿದರು. ಕೂಡಲೇ ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

2015ರಲ್ಲಿ ಉಗ್ರರ ದಾಳಿ 

27 ಜುಲೈ 2015ರಂದು ಪಂಜಾಬ್‌ನ ದಿನಾ ನಗರ ಪೊಲೀಸ್ ಠಾಣೆ ಬಳಿ ಉಗ್ರರು ದಾಳಿ ನಡೆಸಿದ್ದರು. ಆರ್ಮಿ ಸಮವಸ್ತ್ರ ಧರಿಸಿ ಗನ್ ಹಿಡಿದುಕೊಂಡ ಬಂದ ಮೂವರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಎಸ್‌ಪಿ ಸೇರಿದಂತೆ ಮೂವರು ಪೊಲೀಸರು ಮತ್ತು ಮೂರು ಮಂದಿ ಮೃತರಾಗಿದ್ದರು. 

ಹಿಂಬಾಲಕರಿಲ್ಲ, ಬೆಂಗಾವಲು ವಾಹನವಿಲ್ಲ: ಅಧಿಕಾರ ಹಸ್ತಾಂತರಿಸಿ ಸೈಕಲ್‌ ಏರಿ ಡಚ್‌ ಮಾಜಿ ಪ್ರಧಾನಿ ಏಕಾಂಗಿ ಪಯಣ

click me!