ದೇವಸ್ಥಾನದ ಪವಿತ್ರ ಮರದ ಕೆಳಗೆ ನಗ್ನ ಫೋಟೋ ಶೂಟ್, ಮಹಿಳೆ ಬಂಧನ!

By Suvarna NewsFirst Published Apr 19, 2023, 6:50 PM IST
Highlights

ದೇವಸ್ಥಾನದ ಆವರಣದಲ್ಲಿರುವ ಪವಿತ್ರ ಮರ ಹಿಂದೂಗಳ ಶ್ರದ್ಧಾ ಹಾಗೂ ಭಕ್ತಿಯ ಕೇಂದ್ರ. ಭಾರಿ ಗಾತ್ರದ ಮರದ ಕಳೆಗೆ ಮಹಿಳೆ ನಗ್ನ ಫೋಟೋ ಶೂಟ್ ಮಾಡಿದ್ದಾಳೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ಮಹಿಳೆಯನ್ನು ಗಡೀಪಾರು ಮಾಡಲಾಗಿದೆ.

ಬಾಲಿ(ಏ.19): ಹಿಂದೂ ಧರ್ಮದಲ್ಲಿ ದೇವಸ್ಥಾನದ ಜೊತೆಗೆ ಪ್ರಕೃತಿಯನ್ನು ಪೂಜಿಸಲಾಗುತ್ತದೆ. ದೇವಸ್ಥಾನದ ಆವರಣ, ಆವರಣದ ಹೊರಗಿರುವ ಬನಗಳು ಹಾಗೂ ಹಲವು ಮರಗಳನ್ನು ದೇವರ ಸ್ವರೂಪ ಎಂದು ಪೂಜಿಸಲಾಗುತ್ತದೆ. ಹೀಗೆ ಬಾಲಿ ದೇಶದಲ್ಲಿರುವ ತಬನನ್ ದೇವಸ್ಥಾನ ಆವರಣದಲ್ಲಿರುವ ಪವಿತ್ರ ಮರ ಅತ್ಯಂತ ಜನಪ್ರಿಯವಾಗಿದೆ. ಭಾರಿ ಗಾತ್ರದ ಮರ ಇಲ್ಲಿಗೆ ಆಗಮಿಸುವ ಭಕ್ತರ ಗಮನಸೆಳೆಯುತ್ತದೆ. ಹೀಗೆ ಪ್ರವಾಸಕ್ಕೆ ಬಂದ ರಷ್ಯಾದ ಮಹಿಳೆ, ಇದೇ ಮರದ ಕೆಳಗಿ ನಗ್ನ ಫೋಟೋ ಶೂಟ್ ಮಾಡಿದ್ದಾರೆ. ಇದು ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ, ತೀವ್ರ ಪ್ರತಿಭಟನೆಯಿಂದ ಇಂಡೋನೇಷಿಯಾ ಸರ್ಕಾರ ಮಹಿಳೆಯನ್ನು ಗಡೀಪಾರು ಮಾಡಿದೆ.

ರಷ್ಯಾದ 40ರ ಹರೆಯ ಮಹಿಳೆ ಲೂಯ್ಜಾ ಕೊಶ್ಯಾಕ್ ಬಾಲಿ ಪ್ರವಾಸ ಕೈಗೊಂಡಿದ್ದಾರೆ. ಬಾಲಿಯ ಸುಂದರ ತಾಣಗಳಲ್ಲಿ ಕೆಲ ದಿನಗಳ ಕಾಲ ಕಳೆದ ಕೋಶ್ಯಾಕ್, ಬಾಲಿಯ ತಬನನ್ ದೇವಸ್ಥಾನ ವೀಕ್ಷಣೆಗೆ ಆಗಮಿಸಿದ್ದಾಳೆ. ಈ ವೇಳೆ ಭಾರಿ ಗಾತ್ರದ ಪವಿತ್ರ ಮರ ಈಕೆಯ ಕಣ್ಣಿಗೆ ಬಿದ್ದಿದೆ. ಇದೇ ಮರದ ಬಳಿ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಹಲವು ಫೋಟೋಗಳನ್ನು ತೆಗೆದಿರುವ ಕೋಶ್ಯಾಕ್ ನಗ್ನವಾಗಿ ಫೋಟೋ ತೆಗೆದುಕೊಂಡಿದ್ದಾಳೆ. 

Latest Videos

ರಣ್ವೀರ್ ಸಿಂಗ್‌ರಿಂದ ಲೇಡಿ ಗಾಗಾವರೆಗೆ; ಫೋಟೋಶೂಟ್‌ಗಾಗಿ ಬೆತ್ತಲಾದ ಸೆಲೆಬ್ರಿಟಿಗಳಿವರು

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಬಾಲಿಯ ಹಿಂದೂ ಸಮುದಾಯವನ್ನು ಕೆರಳಿಸಿದೆ. ಬಾಲಿ ಉದ್ಯಮಿ ನಿ ಲು ಡಿಜೆಲಾಂಟಿಕ್ ಈ ಫೋಟೋಗಳನ್ನು ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿಯನ್ನು ಅಗೌರವಿಸುವ ಎಲ್ಲಾ ವಿದೇಶಿಗರೇ ಗಮನಿಸಿ, ಬಾಲಿ ನಮ್ಮ ನೆಲ. ನಿಮ್ಮದಲ್ಲ. ದೇವಸ್ಥಾನದ ಪವಿತ್ರ ಮರದ ಬುಡದಲ್ಲಿ ನಗ್ನ ಚಿತ್ರ ಪ್ರದರ್ಶಿಸಿ ನೀವು ಆರಾಮಾಗಿ ಇಲ್ಲಿ ಕಳೆಯಬಹುದು ಎಂದು ಭಾವಿಸಿದ್ದೀರಾ? ನಮ್ಮ ಸಂಸ್ಕೃತಿ, ಪದ್ಧತಿ, ದೇಶವನ್ನು ಗೌರವಿಸಲು ಸಾಧ್ಯವಿಲ್ಲ ಎಂದಾದರೆ ಹೊರನಡೆಯಿರಿ ಎಂದಿದ್ದಾರೆ.

ಬಾಲಿಯ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ಆರಂಭಿಸಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಇಂಡೋನೇಷಿಯಾ ಅಧಿಕಾರಿಗಳು, ಲೂಯ್ಜಾ ಕೋಶ್ಯಾಕ್ ಬಂಧಿಸಿದ್ದಾರೆ. ಬಳಿಕ ಮಾಸ್ಕೋಗೆ ಗಡಿಪಾರು ಮಾಡಿದ್ದಾರೆ. ಇಷ್ಟೇ ಅಲ್ಲ ಇಂಡೋನೇಷಿಯಾ ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ.  

ಬಾಲಿಗೆ ಆಗಮಿಸುವ ಪ್ರವಾಸಿಗರ ಮೇಲೆ ಸ್ಥಳೀಯರು ಕಣ್ಣಿಡಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಪೊಲೀಸರು, ಅಧಿಕಾರಿಗಳು ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಹಿಂದೂ ಸಮುದಾಯ ಹೇಳಿದೆ. ಇಂಡೋನೇಷಿಯಾ ಪ್ರವಾಸ ಮಾಡುವ ಮೊದಲೇ ಇಲ್ಲಿನ ಸಂಸ್ಕೃತಿ ಕುರಿತು ಅರಿತು ಪ್ರವಾಸ ಮಾಡಬೇಕು. ಇಲ್ಲದಿದ್ದರೆ, ಇಲ್ಲಿನ ಮಾರ್ಗದರ್ಶಕಕ ನೆರವು ಪಡೆದುಕೊಳ್ಳಿ. ನಿಮ್ಮಿಷ್ಟದಂತೆ ಬಂದು, ಇಲ್ಲಿನ ಆಚಾರ ವಿಚಾರಗಳಿಗ ಅಪಚಾರ ಮಾಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.

ರಣವೀರ್‌ ಸಿಂಗ್‌ ಆಯಿತು, ಈಗ ಉರ್ಫಿ ಜಾವೇದ್‌ ನೂಡ್ ಫೋಟೋಶೂಟಿಗೆ ಟ್ರೋಲ್‌

ತಬನನ್ ದೇವಸ್ಥಾನದ ಆವರಣದಲ್ಲಿರುವ ಈ ಪವಿತ್ರ ಮರ 700 ವರ್ಷಗಳಷ್ಟು ಹಳೆಯ ಮರವಾಗಿದೆ.ಕಳೆದ ವರ್ಷ ರಷ್ಯಾದ ಯೋಗಾ ಪಟು ಇದೇ ಮರದ ಬುಡದಲ್ಲಿ ಫೋಟೋ ತೆಗೆದು ವಿವಾದ ಸೃಷ್ಟಿಸಿದ್ದರು

click me!