ಟ್ರಂಪ್ ಜತೆ ಸೇರಿಕೊಂಡ ಪುಟಿನ್, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹೆಸರು

By Suvarna NewsFirst Published Sep 25, 2020, 5:26 PM IST
Highlights

ಟ್ರಂಪ್ ಜತೆ ಸೇರಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್/ ನೊಬೆಲ್ ಶಾಂತಿ ಪುರಸ್ಕಾರಕ್ಕೆ ವ್ಲಾಡಿಮಿರ್‌ ಪುಟಿನ್‌ ಹೆಸರು ನಾಮನಿರ್ದೇಶನ/ ರಷ್ಯಾದ ಬರಹಗಾರ ಸೆರ್ಗೈ ಕೊಮ್ಕೊವ್ ನೇತೃತ್ವದ ಗುಂಪಿನಿಂದ ಹೆಸರು ಸೂಚನೆ

ಮಾಸ್ಕೋ(ಸೆ. 25)   ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ಸಹ ನೊಬೆಲ್  ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

ರಷ್ಯಾದ ಬರಹಗಾರ ಸೆರ್ಗೈ ಕೊಮ್ಕೊವ್ ನೇತೃತ್ವದ ಗುಂಪೊಂದು ಪ್ರತಿಷ್ಠಿತ ಪ್ರಶಸ್ತಿಗೆ 67 ವರ್ಷದ ಪುಟಿನ್ ನಾಮನಿರ್ದೇಶನ ಮಾಡಿದೆ. ಶಾಸಕರು, ಪ್ರಾಧ್ಯಾಪಕರು ಮತ್ತು ಶೈಕ್ಷಣಿಕ ಗುಂಪುಗಳು ನೊಬೆಲ್ ಪ್ರಶಸ್ತಿಗೆ ಹೆಸರು ತಿಳಿಸಬಹುದು ಎಂದು ನಿಯಮಾವಳಿ ಹೇಳುತ್ತದೆ.

ಈಗ ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್ ನಾಮನಿರ್ದೇಶನಗೊಂಡಂತೆ ಆಗಿದೆ. ಟ್ರಂಪ್ ಅವರನ್ನು ಮತ್ತು ನಾರ್ವೇಜಿಯನ್ ರಾಜಕಾರಣಿ ಟೈಬ್ರಿಂಗ್-ಗೆಜೆಡೆ  ಶಾಂತಿ ಪುರಸ್ಕಾರಕ್ಕೆ ನಾಮಿನೇಟ್ ಮಾಡಿದ್ದರು.

ರಷ್ಯಾ ಅಧ್ಯಕ್ಷರಿಂದ ವಿಶ್ವಸಂಸ್ಥೆಗೆ ಬಿಗ್ ಆಫರ್ 

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ನಾಮನಿರ್ದೇಶನ ಮಾಡಲು ಅರ್ಹ ಎನಿಸಿದರೆ ಯಾರಾದರೂ ನಾಮನಿರ್ದೇಶನ ಮಾಡಬಹುದು ಎಂದು ನೊಬೆಲ್ ಸಮಿತಿಯ ಮಾರ್ಗಸೂಚಿಗಳು ಹೇಳುತ್ತವೆ.

ನಾರ್ವೇಜಿಯನ್ ನೊಬೆಲ್ ಸಮಿತಿ ಮಾನದಂಡಗಳ ಪ್ರಕಾರ ಬರುವ ಸಲ್ಲಿಕೆ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. 2020 ರ ನೊಬೆಲ್ ಶಾಂತಿ ಪ್ರಶಸ್ತಿಗೆ 300 ಕ್ಕೂ ಹೆಚ್ಚು ಜನರನ್ನು ನಾಮನಿರ್ದೇಶನ ಮಾಡಲಾಗಿದೆ. ನೊಬೆಲ್ ಸಮಿತಿ ಈ ವರ್ಷದ ನೊಬೆಲ್ ಪ್ರಶಸ್ತಿ ವಿಜೇತರನ್ನು ಅಕ್ಟೋಬರ್ 9 ರಂದು ಪ್ರಕಟಿಸಲಿದೆ.

 

click me!