ರಷ್ಯಾ ಕಾನೂನು ಬದಲಾಯಿಸಿದ ವ್ಲಾದಿಮಿರ್ ಪುಟಿನ್; 2036ರ ವರಗೆ ಅಧ್ಯಕ್ಷ ಪಟ್ಟ!

By Suvarna NewsFirst Published Apr 6, 2021, 8:06 PM IST
Highlights

ಅಧಿಕಾರ ಅನುಭವಿಸಿದ ಮೇಲೆ ಅಧಿಕಾರ ಕಳೆದುಕೊಳ್ಳಲು, ಅವಧಿ ಮುಗಿದ ಮೇಲೆ ನಿರ್ಗಮಿಸಲು, ಮಾಜಿಯಾಗಲು, ನಿವೃತ್ತಿ ಪಡೆಯಲು ಇಚ್ಚಿಸುವುದಿಲ್ಲ. ಈ ಕುರಿತು ಭಾರತದಲ್ಲಿ ಹೆಚ್ಚು ವಿವರಿಸಬೇಕಾದ ಅಗತ್ಯವೂ ಇಲ್ಲ. ಆದರೆ ರಷ್ಯಾದಲ್ಲಿ ಇದೀಗ ಅಧಿಕಾರದಲ್ಲೇ ಮುಂದುವರಿಯಲು ಇದೀಗ ಕಾನೂನನ್ನೇ ಬದಲಾಯಸಿಲಾಗಿದೆ. ಇದರಿಂದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇನ್ನು 15 ವರ್ಷ ಅಧ್ಯಕ್ಷ.

ರಷ್ಯಾ(ಏ.06): ಒಂದಲ್ಲ, ಎರಡಲ್ಲ, ಇನ್ನು ಬರೋಬ್ಬರಿ 15 ವರ್ಷ ರಷ್ಯಾದ ಅಧ್ಯಕ್ಷನಾಗಿ ವ್ಲಾದಿಮಿರ್ ಪುಟಿನ್ ಮುಂದುವರಿಯಲಿದ್ದಾರೆ. ಅಂದರೆ 2036ರ ವರಗೆ ರಷ್ಯಾಗೆ ವ್ಲಾದಿಮಿರ್ ಪುಟಿನ್ ಅಧ್ಯಕ್ಷ. ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ಪುಟಿನ್ ರಷ್ಯ ಕಾನೂನಿನಲ್ಲೇ ಬದಲಾವಣೆ ತಂದಿದ್ದಾರೆ. ಇದೀಗ ಯಾವುದೇ ಅಡ್ಡಿ ಆತಂಕವಿಲ್ಲದೆ 15 ವರ್ಷ ಆಳ್ವಿಕೆ ನಡೆಸಲು ರೆಡಿಯಾಗಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ನಾಗರೀಕ ದಂಗೆ, 20 ವರ್ಷದ ಸರ್ವಾಧಿಕಾರಕ್ಕೆ ಬೀಳುತ್ತಾ ಬ್ರೇಕ್..?.

ರಷ್ಯಾ ಸಂಸತ್ತು ವ್ಲಾದಿಮಿರ್ ಪುಟಿನ್ 2036ರ ವರೆಗೆ ಅಧ್ಯಕ್ಷನಾಗಿ ಮುಂದುವರಿಯುವ ಕಾನೂನಿಗೆ ಅನುಮೋದನೆ ನೀಡಿದೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಈ ತಿದ್ದುಪಡಿ ಕುರಿತು ವ್ಲಾದಿಮಿರ್ ಪುಟಿನ್ ಸಾರ್ವಜನಿಕ ಮತದಾನಕ್ಕೆ ಅವಕಾಶ ನೀಡಿದ್ದರು. ಈ ವೇಳೆ ಬೆಂಬಲ ವ್ಯಕ್ತವಾಗಿತ್ತು. ಬಳಿಕ ರಷ್ಯಾ ಸಂಸತ್ತಿನ ಅನುಮೋದನೆಗೆ ಕಳುಹಿಸಲಾಗಿತ್ತು.

ಅಧ್ಯಕ್ಷ ಪುಟಿನ್‌ಗೆ ಪಾರ್ಕಿನ್ಸನ್‌ ಕಾಯಿಲೆ: ಶೀಘ್ರ ಪದತ್ಯಾಗ!

ವ್ಲಾದಿಮಿರ್ ಪುಟೀನ್ ಮುಂದಿನ 6 ವರ್ಷಗಳ ಕಾಲ ಅಧ್ಯಕ್ಷನಾಗಿ ಮುಂದುವರಿಯಲು ರಷ್ಯಾ ಸಂಸತ್ತು ಅನುಮೋದನೆ ನೀಡಿದೆ. ಸದ್ಯ ಪುಟಿನ್ ಅಧ್ಯಕ್ಷ ಅಧಿಕಾರ ಅವದಿ 2024ಕ್ಕೆ ಅಂತ್ಯವಾಗಲಿದೆ. ಕಾನೂನಿನಲ್ಲಿ ಗಮನಾರ್ಹ ಬದಲಾವಣೆ ಮಾಡಿರುವ ಪುಟಿನ್, ಮುಂದಿನ ಅಧ್ಯಕ್ಷರ ಅಧಿಕಾರವದಿ ಎರಡು ಅವಧಿಗೆ ಸೀಮಿತವಾಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ. 

68 ವರ್ಷದ ಪುಟಿನ್ ಈಗಾಗಲೇ 20 ವರ್ಷಕ್ಕೂ ಹೆಚ್ಚು ಅಧಿಕಾರ ನಡೆಸಿದ್ದಾರೆ. 2008ರಲ್ಲಿ ರಷ್ಯಾದ ಪ್ರಧಾನಿಯಾಗಿ, 2012ರಲ್ಲಿ ರಷ್ಯಾದ ಅಧ್ಯಕ್ಷರಾಗಿ, 2018ರಲ್ಲಿ ಅಧ್ಯಕ್ಷರಾಗಿ ಮರಳಿ ಆಯ್ಕೆಯಾಗಿದ್ದಾರೆ. ಪುಟಿನ್ ಹೊಸ ಅಧಿಕಾರ ಅವಧಿ ಕಾನೂನಿಗೆ ಪರ ವಿರೋಧಗಳು ವ್ಯಕ್ತವಾಗಿದೆ. 

ಸಾರ್ವಜನಿಕ ಮತದಾನದಲ್ಲಿ ಬೆಂಬಲ ಸಿಕ್ಕಿದೆ. ಜನರೆ ಬಯಸಿದ್ದಾರೆ. ಅತ್ಯುತ್ತಮ ಆಡಳಿತಗಾರನ ಸೇವೆ ದೇಶಕ್ಕೆ ಅಗತ್ಯ ಎಂದು ಪರವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ ಇದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಲಿದೆ. ಈ ರೀತಿಯ ನಿರಂಕುಶಾಧಿಕಾರ ಕೊನೆಯಾಗಲಿ ಎಂದು ಭಾರಿ ಟೀಕೆಗಳು ವ್ಯಕ್ತವಾಗಿದೆ.

click me!