ಯುದ್ಧ ಸೋಲು ಭೀತಿಯಲ್ಲಿ ಪುಟಿನ್, ಪೋರ್ನ್ ಹಬ್ ವೀಕ್ಷಿಸುವ ಯುವಕರ ರಷ್ಯಾ ಸೇನೆಗೆ ನೇಮಿಸಲು ಆದೇಶ!

Published : Mar 18, 2023, 03:39 PM IST
ಯುದ್ಧ ಸೋಲು ಭೀತಿಯಲ್ಲಿ ಪುಟಿನ್, ಪೋರ್ನ್ ಹಬ್ ವೀಕ್ಷಿಸುವ ಯುವಕರ ರಷ್ಯಾ ಸೇನೆಗೆ ನೇಮಿಸಲು ಆದೇಶ!

ಸಾರಾಂಶ

ಉಕ್ರೇನ್ ಯುದ್ಧದಿಂದ ರಷ್ಯಾಗೆ ಸೈನಿಕರ ಕೊರತೆ ಎದುರಾಗಿದೆ. ಯುದ್ಧದಿಂದ ಯುವಕರು ಸೈನ್ಯ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪುಟಿನ್ ಸೇನಾ ನೇಮಕಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಅಶ್ಲೀಲ ಚಿತ್ರ ತಾಣದ ಮೂಲಕ ಯುವಕರನ್ನು ಸೆಳೆಯಲು ಮುಂದಾಗಿದ್ದಾರೆ.

ಮಾಸ್ಕೋ(ಮಾ.18): ಕಳೆದ ಒಂದು ವರ್ಷದಿಂದ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರಷ್ಯಾಗೆ ಇದುವರೆಗೂ ಗೆಲುವು ಸಿಕ್ಕಿಲ್ಲ. ಇತ್ತ ರಷ್ಯಾದ ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲಿ ಹುತಾತ್ಮರಾಗಿದ್ದಾರೆ. ಇತ್ತ ಸೈನಿಕರು ಸ್ವದೇಶಕ್ಕೆ ಮರಳಲು ಬಯಸುತ್ತಿದ್ದಾರೆ. ರಜೆ ಮೇಲೆ ಹೋದವರು ಮರಳಿ ಬರುತ್ತಿಲ್ಲ. ಮತ್ತೆ ಸೇವೆಯಲ್ಲಿ ಮುಂದುವರಿಯಲು ಇಷ್ಟಪಡುತ್ತಿಲ್ಲ. ಇತ್ತ ಯುವಕರು ಯುದ್ಧದ ಉಸಾಬರಿ ಬೇಡ ಎಂದು ರಷ್ಯಾ ಸೇನೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಣ ರಷ್ಯಾ ಸೈನ್ಯ ಬರಿದಾಗುತ್ತಿದೆ. ಯುದ್ಧ ಮಾಡಲು ಸೈನಿಕರೇ ಇಲ್ಲದಾಗಿದೆ. ಇತ್ತ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದೆ. ಆರ್ಥಿಕ ಸಂಕಷ್ಟವೂ ಎದುರಾಗಿದೆ. ಇದರ ನಡುವೆ ರಷ್ಯಾ ಸೇನೆಗೆ ಯುವಕರ ನೇಮಕ ಮಾಡಲು ಹೊಸ ಪ್ಲಾನ್ ಮಾಡಲಾಗಿದೆ. ಪೋರ್ನ್ ಹಬ್ ವೀಕ್ಷಣೆ ಮಾಡುವ ಯುವಕರನ್ನೇ ಸೈನ್ಯಕ್ಕೆ ಸೇರಿಸಲು ಆದೇಶ ನೀಡಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭದ್ರತೆ ನೇಮಕಗೊಂಡಿರುವ ಸೇನಾಪದಿ ವ್ಯಾಗ್ನರ್ ಪಡೆ ಮೇಲೆ ಎರಡೆರಡು ಹೊಸ ಜವಾಬ್ದಾರಿ ಹೊರಿಸಲಾಗಿದೆ. ಅಶ್ಲೀಲ ಚಿತ್ರ ಅಥವಾ ನೀಲಿ ಚಿತ್ರಗಳ ತಾಣಗಳಿಗೆ ಭೇಟಿ ನೀಡುವ ಯುವಕರ ಮಾಹಿತಿ ಸಂಗ್ರಹಿಸಿ ಅವರನ್ನು ಒತ್ತಾಯಪೂರ್ವಕವಾಗಿ ಸೇನೆಗೆ ಸೇರಿಸಿಕೊಳ್ಳಲು ರಷ್ಯಾ ಮುಂದಾಗಿದೆ. ಪೋರ್ನ್ ಹಬ್‌ನಲ್ಲಿ ಕಾಲ ಕಳೆಯುವ ಯುವಕರ ಮಾಹಿತಿ ಪಡೆದು ಅವರನ್ನು ಸೇನೆಗೆ ಸೇರಿಸಿಕೊಳ್ಳುವ ಯೋಜನೆ ಜೊತೆಗೆ, ಇದೇ ಪೋರ್ನ್ ಹಬ್‌ನಲ್ಲೂ ಅಷ್ಟೇ ಪ್ರಚೋದನಕಾರಿ ಅಶ್ಲೀಲ ಜಾಹೀರಾತನ್ನು ನೀಡಲಾಗಿದೆ. ಈ ಜಾಹಿರಾತು ನೋಡಿ ಸೇನೆಗೆ ಸೇರಲು ಯುವಕರನ್ನು ಪ್ರಚೋದಿಸುವ ಮಾಸ್ಟರ್ ಪ್ಲಾನ್ ಮಾಡಲಾಗಿದೆ.

ಉಕ್ರೇನ್ ವಿರುದ್ಧ ಯುದ್ಧ, ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್!

ಉಕ್ರೇನ್ ಮಾಧ್ಯಮಗಳು ರಷ್ಯಾದ ಪೋರ್ನ್ ಹಬ್ ಸೇನಾ ನೇಮಕ ಕುರಿತು ವಿಸ್ತೃತ ವರದಿ ಪ್ರಕಟಿಸಿದೆ. ಉಕ್ರೇನ್ ಮೇಲೆ ಯುದ್ಧ ಸಾರಿ ರಷ್ಯಾ ದಯನೀಯ ಸ್ಥಿತಿಗೆ ತಲುಪಿದೆ. ರಷ್ಯಾದ ಬಳಿಕ ಪ್ರತಿಷ್ಠೆ ಹೊರತುಪಡಿಸಿ ಇನ್ನೇನು ಉಳಿದಿಲ್ಲ ಎಂದು ಹೇಳಿದೆ. ಪೋರ್ನ್ ಹಬ್ ಮೂಲಕ ರಷ್ಯಾ ಸೇನಾ ನೇಮಕವನ್ನು ಉಕ್ರೇನ್ ಅಣಕಿಸಿದೆ. ಇದೀಗ ಈ ಪ್ರಯತ್ನ ಜಾಗತಿಕ ಮಟ್ಟದಲ್ಲಿ ರಷ್ಯಾಗೆ ತೀವ್ರ ಹಿನ್ನಡೆ ತಂದಿದೆ. ವ್ಲಾದಿಮಿರ್ ಪುಟಿನ್ ದಯನೀಯ ಸ್ಥಿತಿಗೆ ತಲುಪಿದ್ದಾರೆ ಎಂದು ಉಕ್ರೇನ್ ಮಾಧ್ಯಮಗಳು ಹೇಳಿವೆ.

 

 

ರಷ್ಯಾ ಸೈನಿಕರು ಯುದ್ಧದ ವಿರುದ್ಧವಾಗಿದ್ದಾರೆ. ಕಳೆದೊಂದು ವರ್ಷದಿಂದ ದೇಶ ಬಿಟ್ಟು ಉಕ್ರೇನ್‌ನಲ್ಲಿ ಯುದ್ಧ ಮಾಡುತ್ತಿದ್ದಾರೆ. ಹಲವರು ಅದೇ ಯುದ್ಧಭೂಮಿಯಲ್ಲಿ ಬಲಿಯಾಗಿದ್ದಾರೆ. ಕುಟುಂಬ ಸದಸ್ಯರನ್ನು ಬಿಟ್ಟು, ಯಾವುದೇ ರಜೆ ತೆಗೆದುಕೊಳ್ಳದೇ ಪ್ರತಿ ದಿನ ಹೋರಾಟ ಮಾಡುತ್ತಲೇ ಇದ್ದಾರೆ. ಇತ್ತ ಪುಟಿನ್ ಯುದ್ಧವಿರಾಮ ಘೋಷಿಸುತ್ತಿಲ್ಲ. ಅತ್ತ ಉಕ್ರೇನ್ ಸೋಲುತ್ತಿಲ್ಲ. ಇದರ ನಡುವೆ ಸೈನಿಕರು ಹತಾಶರಾಗಿದ್ದಾರೆ. ಈಗಾಗಲೇ ರಷ್ಯಾದ ಬಹುತೇಕ ಸೈನ್ಯ ಉಕ್ರೇನ್ ಯುದ್ಧಕ್ಕೆ ನಿಯೋಜನೆ ಗೊಂಡಿದೆ. ರಷ್ಯಾದ ಆತಂರಿಕ ಭದ್ರತೆಯೂ ಇದೀಗ ಸವಾಲಾಗಿದೆ. 

ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಆಪ್ತರೇ ಹತ್ಯೆ ಮಾಡ್ತಾರೆ: ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಭವಿಷ್ಯ

ಇದರ ನಡುವೆ ಉಕ್ರೇನ್‌ನಲ್ಲಿ ಮಕ್ಕಳ ಮೇಲಿನ ಯುದ್ಧ ಆಪರಾಧಕ್ಕೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಉಕ್ರೇನ್ ಮೇಲೆ ಯುದ್ಧ ಸಾರಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ರಷ್ಯಾ ಇದೀಗ ಖಜಾನೆ, ಸೈನ್ಯ, ಸಂಪತ್ತು ಖಾಲಿ ಮಾಡಿ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ