Putin Helath ವ್ಲಾದಿಮಿರ್ ಪುಟಿನ್‌ಗೆ ಕ್ಯಾನ್ಸರ್, ರಹಸ್ಯ ತಾಣದಲ್ಲಿ ಶಸ್ತ್ರಕಿತ್ಸೆಗೆ ತಯಾರಿ

By Suvarna News  |  First Published May 2, 2022, 3:45 PM IST
  • ಭದ್ರತಾ ಕಾರ್ಯದರ್ಶಿ ನಿಕೊಲಾಯ್‌ಗೆ ರಷ್ಯಾ ಜವಾಬ್ದಾರಿ
  • ಪುಟಿನ್ ಆರೋಗ್ಯ ಸಮಸ್ಯೆ ಕುರಿತು ಮಾಜಿ ಇಂಟಿಲಿಜೆನ್ಸಿ ಅಧಿಕಾರಿ ಮಾಹಿತಿ
  • ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾಗೆ ಹಿನ್ನಡೆ

ಮಾಸ್ಕೋ(ಮೇ.02 ): ಉಕ್ರೇನ್(Ukraine Crisis) ವಿರುದ್ಧ ಯುದ್ಧ ಸಾರಿ ಇಡೀ ವಿಶ್ವದ ವಿರೋಧ ಕಟ್ಟಿಕೊಂಡಿರುವ ರಷ್ಯಾ(Russia) ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಮೂರೇ ದಿನದಲ್ಲಿ ಉಕ್ರೇನ್ ಕೈವಶ ಮಾಡಲು ಹೋದ ರಷ್ಯಾಗೆ ತೀವ್ರ(Vladimir Putin Health) ಹಿನ್ನಡೆಯಾಗಿದೆ. ಇದರ ನಡುವೆ ರಷ್ಯಾಗೆ ಮತ್ತೊಂದು ಆಘಾತ ಎದುರಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಗ್ಯ ಕುರಿತು ಹಲವು ಊಹಾಪೋಹಗಳು ಎದಿತ್ತು. ಇದೀಗ ಈ ಮಾತುಗಳು ನಿಜವಾಗುತ್ತಿದೆ.ಪುಟಿನ್‌‌ಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಹೀಗಾಗಿ ರಹಸ್ಯ ಸ್ಥಳದಲ್ಲಿ ಪುಟಿನ್‌ಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನೀಡಲು ತಯಾರಿ ನಡೆದಿದೆ ಎಂದು ಮಾಜಿ ಇಂಟಿಲಿಜೆನ್ಸ್ ಅಧಿಕಾರಿ ಹೇಳಿದ್ದಾರೆ.

ಮಾಜಿ ಕೆಜಿಬಿ ಕೌಂಟರ್ ಇಂಟೆಲಿಜೆನ್ಸಿ ಅಧಿಕಾರಿ ಪುಟಿನ್ ಕ್ಯಾನ್ಸರ್ ಚಿಕಿತ್ಸೆ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕಳೆದ 18 ತಿಂಗಳಿನಿಂದ ಪುಟಿನ್‌ ಕ್ಯಾನ್ಸರ್(Cance) ಹಾಗೂ ಪಾರ್ಕಿಸನ್ಸ್(Parkinson’s) ಚಿಕಿತ್ಸೆ ಪಡೆಯುತ್ತಿದ್ದಾರೆ.  ಹೀಗಾಗಿ ಪುಟಿನ್ ರಹಸ್ಯ ತಾಣದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಕೆಲ ಕಾಲ ಪುಟಿನ್ ಅಧಿಕಾರ, ಜವಾಬ್ದಾರಿಯಿಂದ ದೂರ ಉಳಿಯಲಿದ್ದಾರೆ. 

Tap to resize

Latest Videos

ಉಕ್ರೇನಿಗೆ ಅಮೆರಿಕ ಸಚಿವ ಬ್ಲಿಂಕನ್‌ ರಹಸ್ಯ ಭೇಟಿ

ಪುಟಿನ್ ಅನುಪಸ್ಥಿತಿಯಲ್ಲಿ ಭದ್ರತಾ ಮಂಡಳಿಯ ಭದ್ರತಾ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೆವ್ ಅವರನ್ನು ರಹಸ್ಯವಾಗಿ ನಾನನಿರ್ದೇಶನ ಮಾಡಲಾಗಿದೆ ಎಂದು ಇಂಟಿಲಿಜೆನ್ಸ್ ಅಧಿಕಾರಿ ಹೇಳಿದ್ದಾರೆ.

ಉಕ್ರೇನ್ ಯುದ್ಧದ ಆರಂಭವಾದ ಕೆಲ ದಿನಗಳಲ್ಲೇ ಪುಟಿನ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ ಉಕ್ರೇನ್ ಸಂಪೂರ್ಣ ಕೈವಶ ಮಾಡಿ ಚಿಕಿತ್ಸೆ ಪಡೆಯಲು ಪುಟಿನ್ ನಿರ್ಧರಿಸಿದ್ದರು. ಆದರೆ ಉಕ್ರೇನ್ ಕೈವಶ ಸಾಧ್ಯವಾಗಲೇ ಇಲ್ಲ. ಇತ್ತ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿತು. ಕೊನೆಗೆ ವೈದ್ಯರ ಸೂಚನೆಯಂತೆ ಶಸ್ತ್ರಚಿಕಿತ್ಸೆಗೆ ಸಮ್ಮತಿಸಿದ್ದಾರೆ.

ಉಕ್ರೇನ್ ಮೇಲೆ ಯುದ್ಧ ಸಾರಿದ ಮೇಲೆ ಪುಟಿನ್ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಪುಟಿನ್ ಅಂದುಕೊಂಡಂತೆ ಯಾವುದೂ ನಡೆದಿಲ್ಲ. ಸಂಪೂರ್ಣ ಉಕ್ರೇನ್ ಧ್ವಂಸ ಮಾಡಿದ್ದರೂ, ಕೈವಶ ಮಾಡಲು ಸಾಧ್ಯವಾಗಿಲ್ಲ. ಉಕ್ರೇನ್ ಶರಣಾಗಲಿದೆ ಅನ್ನೋ ಲೆಕ್ಕಾಚಾರವೂ ನಡೆದಿಲ್ಲ. ಇತ್ತ ವಿಶ್ವದ ಪ್ರಬಲ ರಾಷ್ಟ್ರಗಳು ರಷ್ಯಾ ವಿರುದ್ಧ ತಿರುಗಿ ಬಿದ್ದಿದೆ

ಹಲವು ದಿನಗಳಿಂದ ಕೇಳಿಬರುತ್ತಿದೆ ಪುಟಿನ್ ಆರೋಗ್ಯ ಸಮಸ್ಯೆ
ರಷ್ಯಾ-ಉಕ್ರೇನ್‌ ನಡುವಣ ಯುದ್ಧವು ತೀವ್ರಗೊಳ್ಳುತ್ತಿರುವ ನಡುವೆಯೇ ಮತ್ತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯ ಹದಗೆಟ್ಟಿದೆ ಎಂಬ ವದಂತಿ ಆರಂಭವಾಗಿತ್ತು. ಇತ್ತೀಚೆಗೆ ಸಾರ್ವಜನಿಕ ಕಾರ‍್ಯಕ್ರಮಗಳಲ್ಲಿ ಭಾಗಿಯಾದ ಪುಟಿನ್‌ ಹಾವಭಾವಗಳನ್ನು ಗಮನಿಸಿ ತಜ್ಞರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

World War III ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ ರಷ್ಯಾ, ರಾತ್ರೋರಾತ್ರಿ ತಲ್ಲಣ!

ಹಲವು ಕಾರ‍್ಯಕ್ರಮಗಳಲ್ಲಿ ಪುಟಿನ್‌ ಅವರ ಕೈಗಳು ಕಂಪಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಅವರ ಮುಖವು ಕೆಲವು ಕಾಸ್ಮೆಟಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾದಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಸಿಡ್ನಿಯ ಕಾಸ್ಮೆಟಿಕ್‌ ವೈದ್ಯರೊಬ್ಬರು ಪುಟಿನ್‌ ಅವರ ಹಿಂದಿನ ಮತ್ತು ಈಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ ‘ಪುಟಿನ್‌ ತೀವ್ರ ಫಿಲ್ಟರ್‌ಗೆ ಒಳಗಾದಾಗ ವಯಸ್ಸಾದ ಬೆಕ್ಕಿನಂತೆ ಕಾಣುತ್ತಾರೆ’ ಎಂದಿದ್ದಾರೆ.

ಪುಟಿನ್‌ ತಾವು ಬಲಶಾಲಿ ವ್ಯಕ್ತಿ ಎಂಬ ಇಮೇಜ್‌ ವರ್ಧನೆಗಾಗಿ ವಯಸ್ಸನ್ನು ಮರೆಮಾಚುವ ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ದೇಶದ ಓಲಂಪಿಕ್‌ ಅಥ್ಲೆಟಿಕ್‌ಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಪುಟಿನ್‌ ಮುಖ ಊದಿಕೊಂಡಿದ್ದನ್ನು ನ್ಯೂಯಾರ್ಕ್ ಪೋಸ್ಟ್‌ ಗುರುತಿಸಿದೆ. ಬೆಲಾರಸ್‌ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಪುಟಿನ್‌ ಟೇಬಲ್‌ ಸಹಾಯದ ಮೇಲೆ ನಿಂತಿದನ್ನು ನ್ಯೂಸ್‌ವೀಕ್‌ ಗುರುತಿಸಿದೆ.

ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೆರಿಕ ಮಾಧ್ಯಮ ಕಾರ‍್ಯದರ್ಶಿ ಜೆನ್‌ ಸಾಕಿ ತಿಳಿಸಿದ್ದಾರೆ.

click me!