ನವದೆಹಲಿ(ಮಾ.12): ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ಮಾಸ್ಕೋದಿಂದ ತೈಲ ಆಮದುಗಳನ್ನು ಅಮೆರಿಕ ನಿಷೇಧಿಸಿದ್ದು, ಹೀಗಾಗಿ ರಷ್ಯಾ ಭಾರತಕ್ಕೆ ಹೆಚ್ಚಿನ ತೈಲ ರಪ್ತು ಮಾಡುವ ಆಫರ್ ನೀಡಿದೆ. ಯುದ್ಧದಿಂದಾಗಿ ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳ ನಿರ್ಬಂಧ ಹೇರಿದ್ದು, ಜೊತೆಗೆ ಅಮೆರಿಕಾ ರಷ್ಯಾದ ತೈಲಕ್ಕೆ ನಿಷೇಧ ಹೇರಿರುವುದರಿಂದ ನಲುಗಿರುವ ರಷ್ಯಾ, ಭಾರತಕ್ಕೆ ತನ್ನ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಮತ್ತು ರಷ್ಯಾದ ತೈಲ ವಲಯದಲ್ಲಿ ಭಾರತದ ಹೂಡಿಕೆಯನ್ನು ಹೆಚ್ಚಿಸಲು ಉತ್ಸುಕವಾಗಿದೆ ಎಂದು ರಷ್ಯಾದ ಉಪ ಪ್ರಧಾನಿ (Deputy Prime Minister) ಅಲೆಕ್ಸಾಂಡರ್ ನೊವಾಕ್ (Alexander Novak) ಭಾರತದ ಪೆಟ್ರೋಲಿಯಂ ಸಚಿವರಿಗೆ ಹರ್‌ದೀಪ್ ಪುರಿ (Hardeep Puri) ಅವರಿಗೆ ಈ ವಿಚಾರ ತಿಳಿಸಿದ್ದಾರೆ.
ರಷ್ಯಾ ಸರ್ಕಾರ ಹೊರಡಿಸಿದ ಹೇಳಿಕೆಯ ಪ್ರಕಾರ, ರಷ್ಯಾದ ಮಾಜಿ ಇಂಧನ ಸಚಿವರು ಆಗಿದ್ದ ಉಪ ಪ್ರಧಾನಿ ನೊವಾಕ್ ಅವರು ಭಾರತದ ಇಂಧನ ಸಚಿವರಾದ ಹರ್‌ದೀಪ್ ಪುರಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಇಂಧನ ವಲಯದಲ್ಲಿ ಭಾರತ-ರಷ್ಯಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಸಾಧ್ಯತೆಗಳ ಮಾತನಾಡಿದ್ದಾರೆ. ಭಾರತಕ್ಕೆ ರಷ್ಯಾ $1 ಬಿಲಿಯನ್ ಡಾಲರ್ ನಷ್ಟು ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನ ರಫ್ತು ಮಾಡುವ ಬಗ್ಗೆ ಮಾತುಕತೆ ನಡೆಸಿದೆ. ಮತ್ತು ಈ ಅಂಕಿಅಂಶವನ್ನು ಹೆಚ್ಚಿಸಲು ಸ್ಪಷ್ಟ ಅವಕಾಶಗಳಿವೆ ಎಂದು ಮಾಸ್ಕೋದಲ್ಲಿ ನೀಡಿದ ಹೇಳಿಕೆ ಧೃಡಪಡಿಸಿದೆ. ಇದು ಇಂಧನ ಮತ್ತು ಶಕ್ತಿ ಉದ್ಯಮದಲ್ಲಿ ಪ್ರಸ್ತುತ ಮತ್ತು ಸಂಭಾವ್ಯ ಜಂಟಿ ಯೋಜನೆಗಳನ್ನು ಚರ್ಚಿಸಿದೆ. ಜೊತೆಗೆ ಪ್ರಸ್ತುತ ಯೋಜನೆಗಳನ್ನು ಸ್ಥಿರವಾಗಿ ಕಾರ್ಯಗತಗೊಳಿಸುವುದನ್ನು ಮುಂದುವರೆಸಿದೆ ಎಂದು ತಿಳಿದು ಬಂದಿದೆ.
Petrol Diesel Price ಯುದ್ಧ, ರೂಪಾಯಿ ಮೌಲ್ಯ ಕುಸಿತ,ಮಧ್ಯರಾತ್ರಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ!
ರಷ್ಯಾದ ತೈಲ ಮತ್ತು ಅನಿಲ ವಲಯಕ್ಕೆ ಭಾರತೀಯ ಹೂಡಿಕೆಯನ್ನು ಮತ್ತಷ್ಟು ಆಕರ್ಷಿಸಲು ಮತ್ತು ಭಾರತದಲ್ಲಿ ರಷ್ಯಾದ ಕಂಪನಿಗಳ ಮಾರಾಟ ಜಾಲಗಳನ್ನು ವಿಸ್ತರಿಸಲು ನಾವು ಆಸಕ್ತಿ ಹೊಂದಿದ್ದೇವೆ ಎಂದು ನೊವಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಸಂಭವನೀಯ ಪಾವತಿ ವಿಧಾನಗಳು ಸೇರಿದಂತೆ ಪ್ರಸ್ತಾವನೆಗಳನ್ನು ಅಧಿಕಾರಿಗಳು ಚರ್ಚಿಸಲು ಅವಕಾಶ ಮಾಡಿಕೊಡಲು ಸಚಿವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಭಾರತವು ರಷ್ಯಾದಿಂದ ರಿಯಾಯಿತಿ ದರದ ಕಚ್ಚಾ ತೈಲದ ಪ್ರಸ್ತಾಪವನ್ನು ಸ್ವೀಕರಿಸಿದೆ ಎಂದು ಸೂಚಿಸಿದ ವರದಿಗಳನ್ನು ದೃಢೀಕರಿಸಲು ಈ ಮಾತುಕತೆಗಳು ನಡೆದಿವೆ. ರಷ್ಯಾ ಕಳೆದ ಎರಡು ವಾರಗಳಲ್ಲಿ ಪ್ರಮುಖ ಖರೀದಿದಾರರನ್ನು ಕಳೆದುಕೊಂಡಿದೆ, ಅಮೆರಿಕಾ ಹಾಗೂ ಯುರೋಪಿಯನ್ ಯೂನಿಯನ್ ಮತ್ತು ಇತರ ದೇಶಗಳು ಉಕ್ರೇನ್ ಮೇಲಿನ ದಾಳಿಗಾಗಿ ರಷ್ಯಾಗೆ ನಿರ್ಬಂಧಗಳನ್ನು ವಿಧಿಸಿವೆ.
Rahul Gandhi Taunt "ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ" ಚುನಾವಣೆಯ ಆಫರ್ ಕ್ಲೋಸ್ ಆಗಲಿದೆ!
ರಷ್ಯಾದ ತೈಲದ ಮೇಲೆ ಭಾರೀ ಅವಲಂಬನೆಯಿಂದಾಗಿ ಇಂಧನ ವ್ಯಾಪಾರದಲ್ಲಿ ತೊಡಗಿರುವ ರಷ್ಯಾದ ಬ್ಯಾಂಕುಗಳಿಗೆ ಯುರೋಪಿಯನ್ ರಾಷ್ಟ್ರಗಳು ತಮ್ಮ ನಿರ್ಬಂಧಗಳಿಂದ ವಿನಾಯಿತಿ ನೀಡಿದ್ದರೂ, ಅಮೆರಿಕಾ ಮಾರ್ಚ್ 8 ರಿಂದ ರಷ್ಯಾದ ಎಲ್ಲಾ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಆಮದಿನ ಮೇಲೆ ಸಂಪೂರ್ಣ ನಿಷೇಧವನ್ನು ಘೋಷಿಸಿದೆ. ಈ ನಿರ್ಧಾರವು ತೈಲ ಬೆಲೆ ಏರಿಕೆಯ ತೀವ್ರತೆಗೆ ಕಾರಣವಾಯಿತು. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್‌ಗೆ ಕಚ್ಚಾ ತೈಲಕ್ಕೆ $139 ಡಾಲರ್ ದಾಟುತ್ತದೆ ಎನ್ನಲಾಗಿತ್ತು. ಆದಾಗ್ಯೂ ಪ್ರತಿ ಬ್ಯಾರೆಲ್‌ಗೆ ಪ್ರಸ್ತುತ $100 ಡಾಲರ್‌ಗಿಂತ ಹೆಚ್ಚಿನ ದರವಿದೆ. ಇದು ಹಣದುಬ್ಬರದ ಮೇಲೆ ಜಾಗತಿಕ ಭಯವನ್ನು ಉಂಟುಮಾಡುತ್ತಿದೆ.
ಈ ವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಮಾರಾಟ ಮಾಡಲು ರಷ್ಯಾ ಭಾರತಕ್ಕೆ ಮುಕ್ತ ಕೊಡುಗೆ ನೀಡಿದೆ, ಆದರೆ ಸಾಗಣೆ ವೆಚ್ಚ ಉಲ್ಲೇಖಿಸಿ ಹಲವು ಅಂಶಗಳು ಸರ್ಕಾರದ ಅಂತಿಮ ನಿರ್ಧಾರವನ್ನು ನಿರ್ಧರಿಸುತ್ತವೆ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ