Russia Ukraine War: ರಷ್ಯಾ ಟೀವಿಯಲ್ಲಿ ಯುದ್ಧ ವಿರೋಧಿ ಫಲಕ ಹಿಡಿದ ಪತ್ರಕರ್ತೆಗೆ 15 ವರ್ಷ ಜೈಲು?

Published : Mar 17, 2022, 05:53 AM ISTUpdated : Mar 17, 2022, 07:19 AM IST
Russia Ukraine War: ರಷ್ಯಾ ಟೀವಿಯಲ್ಲಿ ಯುದ್ಧ ವಿರೋಧಿ ಫಲಕ ಹಿಡಿದ ಪತ್ರಕರ್ತೆಗೆ 15 ವರ್ಷ ಜೈಲು?

ಸಾರಾಂಶ

* ರಷ್ಯಾ-ಉಕ್ರೇನ್ ನಡುವೆ ಮಹಾಯುದ್ಧ * ರಷ್ಯಾ ಟೀವಿಯಲ್ಲಿ ಯುದ್ಧ ವಿರೋಧಿ ಫಲಕ ಹಿಡಿದ ಪತ್ರಕರ್ತೆಗೆ 15 ವರ್ಷ ಜೈಲು? * ಮಾಧ್ಯಮದ ನೇರ ಪ್ರಸಾರದಲ್ಲಿ ಭಿತ್ತಿಪತ್ರ 

ಮಾಸ್ಕೋ(ಮಾ. 17) ರಷ್ಯಾದ (Russia) ಸರ್ಕಾರಿ ಸುದ್ದಿವಾಹಿನಿಯ ನೇರ ಪ್ರಸಾರದಲ್ಲಿ ಯುದ್ಧ (War) ವಿರೋಧಿ ಫಲಕವನ್ನು ಪ್ರದರ್ಶಿಸಿದ ಪತ್ರಕರ್ತೆಗೆ (Journalist)15 ವರ್ಷಗಳ ಕಾಲ ಜೈಲು ಶಿಕ್ಷೆ ಘೋಷಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಪತ್ರಕರ್ತೆ ಮರೀನಾ ಒವ್‌ಸ್ಯಾನಿಕೋವಾ ಸೋಮವಾರ ಚ್ಯಾನೆಲ್‌ 1 ಟೀವಿ ವಾಹಿನಿಯಲ್ಲಿ ಉಕ್ರೇನ್‌ ವಿರುದ್ಧ ಯುದ್ಧ ನಿಲ್ಲಿಸಿ ಎಂಬ ಫಲಕ ಹಿಡಿದು ಸುದ್ದಿಯಾಗಿದ್ದರು. ಅಲ್ಲದೇ ರಷ್ಯಾದ ಸುದ್ದಿವಾಹಿನಿಯಲ್ಲಿ ಸುಳ್ಳು ಸುದ್ದಿಯನ್ನು ಬಿತ್ತರಿಸಲಾಗುತ್ತಿದೆ. ರಷ್ಯಾದ ಜನರು ಸರ್ಕಾರದ ಆಕ್ರಮಣಕಾರಿ ಧೋರಣೆ ವಿರೋಧಿಸಬೇಕು ಎಂದು ಕರೆ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಲಾಗಿತ್ತು.

ಈ ಕುರಿತು ಮಾತನಾಡಿದ ಮರೀನಾ ‘ಪೋಲಿಸರು ನನ್ನನ್ನು ಬಂಧಿಸಿ 14 ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕುಟುಂಬದವರಿಗಾಗಲೀ, ಕಾನೂನು ಸಹಾಯ ಪಡೆದುಕೊಳ್ಳಲು ವಕೀಲರನ್ನಾಗಲೀ ಸಂಪರ್ಕಿಸಲು ಅನುಮತಿ ನೀಡಿಲ್ಲ’ ಎಂದಿದ್ದಾರೆ.

ಸರ್ಕಾರದ ನಿಯಮಗಳ ಪ್ರಕಾರ ಮಾಧ್ಯಮದಲ್ಲಿ ಯುದ್ಧ ಸಂಬಂಧೀ ವಿಚಾರಗಳನ್ನು ರಷ್ಯಾ ವಿರೋಧಿ ದೃಷ್ಟಿಕೋನದಲ್ಲಿ ಬಿತ್ತರಿಸಿದ್ದಕ್ಕಾಗಿ ಇವರಿಗೆ 15 ವರ್ಷಗಳ ಕಾಲ ಜೈಲು ಶಿಕ್ಷೆಯಾಗಲಿದೆ ಎನ್ನಲಾಗಿದೆ

Russia-Ukraine War: ಉಕ್ರೇನ್ ಆಸ್ಪತ್ರೆ ವಶಕ್ಕೆ ಪಡೆದು 400 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ರಷ್ಯಾ!

ರಷ್ಯಾದಿಂದ ತೈಲ ಖರೀದಿ: ಭಾರತದ ನಡೆಗೆ ಅಮೆರಿಕ ಆಕ್ಷೇಪ: ‘ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿ ಮಾಡುವ ಭಾರತದ ಚಿಂತನೆಯು, ರಷ್ಯಾದ ಮೇಲೆ ಹೇರಿರುವ ನಿರ್ಬಂಧದ ಉಲ್ಲಂಘನೆಯಾಗುವುದಿಲ್ಲ. ಆದರೆ ಇಂದಿನ ಸನ್ನಿವೇಶದ ಕುರಿತು ಇತಿಹಾಸ ರಚನೆಯಾದಾಗ ನೀವು ಎಲ್ಲಿ ನಿಲ್ಲಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು’ ಎಂದು ಅಮೆರಿಕ ಪರೋಕ್ಷವಾಗಿ ಭಾರತದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ, ‘ರಷ್ಯಾ ಮೇಲೆ ನಾವು ಹೇರಿರುವ ನಿರ್ಬಂಧಗಳನ್ನು ಪಾಲಿಸಿ ಎಂಬುದು ಎಲ್ಲಾ ದೇಶಗಳಿಗೆ ನಮ್ಮ ಸಂದೇಶ ಮತ್ತು ಶಿಫಾರಸ್ಸು. ಆದರೆ ಭಾರತದ ಪ್ರಸ್ತಾಪ ನಮ್ಮ ನಿರ್ಬಂಧದ ಉಲ್ಲಂಘನೆಯಾಗುವುದು ಎಂದು ಅನ್ನಿಸುವುದಿಲ್ಲ. ಆದರೆ ರಷ್ಯಾದ ನಾಯಕತ್ವವನ್ನು ಬೆಂಬಲಿಸುವುದು ಪರೋಕ್ಷವಾಗಿ ಭೀಕರ ಪರಿಣಾಮಗಳಿಗೆ ಕಾರಣವಾದ ದಾಳಿಯನ್ನು ಬೆಂಬಲಿಸಿದಂತೆ’ ಎಂದು ಹೇಳಿದ್ದಾರೆ. 

ತಕ್ಷಣವೇ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಿ, ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ ! : ಮಹತ್ವದ ಆದೇಶದಲ್ಲಿ, ನೆದರ್‌ಲ್ಯಾಂಡ್ಸ್‌ನ ( Netherlands ) ಹೇಗ್‌ನಲ್ಲಿರುವ ( The Hague ) ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)  ರಷ್ಯಾಕ್ಕೆ ಎಚ್ಚರಿಕೆ ನೀಡಿದೆ. 

" ಈ ಪ್ರಕರಣದಲ್ಲಿ ಇನ್ನೂ ಅಂತಿಮ ನಿರ್ಧಾರ ಬಾಕಿ ಉಳಿದಿದ್ದು, ರಷ್ಯಾದ ಒಕ್ಕೂಟವು, ಉಕ್ರೇನ್ ದೇಶದ ಮೇಲೆ ಆರಂಭಿಸಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು" ಎಂದು ಅದೇಶ ನೀಡಿದೆ. "ರಷ್ಯಾದ ಒಕ್ಕೂಟವು ಮಿಲಿಟರಿ (Russia Federation Military ) ಅಥವಾ ಅದು ನಿರ್ದೇಶಿಸುವ ಅಥವಾ ಬೆಂಬಲಿಸುವ ಯಾವುದೇ ಅನಿಯಮಿತ ಸಶಸ್ತ್ರ ಘಟಕಗಳು ಉಕ್ರೇನ್ ನೆಲದಲ್ಲಿ ಇರಬಾರದು ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು