Russia Ukraine War: ರಷ್ಯಾ ದಾಳಿಗೆ ಖಾರ್ಕೀವ್‌ ನಗರವೇ ಧ್ವಂಸ: ಉಕ್ರೇನ್‌ ಮಕ್ಕಳು ಮಾನವ ತಡೆಗೋಡೆಯಾಗಿ ಬಳಕೆ?

Published : Mar 12, 2022, 07:53 AM IST
Russia Ukraine War: ರಷ್ಯಾ ದಾಳಿಗೆ ಖಾರ್ಕೀವ್‌ ನಗರವೇ ಧ್ವಂಸ: ಉಕ್ರೇನ್‌ ಮಕ್ಕಳು ಮಾನವ ತಡೆಗೋಡೆಯಾಗಿ ಬಳಕೆ?

ಸಾರಾಂಶ

*ಶೆಲ್‌, ಕ್ಷಿಪಣಿ, ಬಾಂಬ್‌ ದಾಳಿಗೆ ಇಡೀ ನಗರವೇ ಸರ್ವನಾಶ *ಯುದ್ಧ ನಿಂತರೂ ವಾಸಿಸಲು ಮನೆಯಿಲ್ಲ: ಸ್ಥಳೀಯರ ಅಳಲು *ವಶಪಡಿಸಿಕೊಂಡ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು ರಷ್ಯಾ ಸೇನೆ ವಶಕ್ಕೆ

ಕೀವ್‌ (ಮಾ. 12) : ಉಕ್ರೇನಿನ ಎರಡನೇ ಅತಿದೊಡ್ಡ ನಗರವಾದ ಖಾರ್ಕೀವ್‌ ಮೇಲೆ ರಷ್ಯಾದ ಭೀಕರ ದಾಳಿ ಮುಂದುವರೆದಿದ್ದು, ಇಡೀ ನಗರವೇ ಸ್ಮಶಾನವಾಗಿ ಪರಿಣಮಿಸಿದೆ. ರಷ್ಯಾ ದಾಳಿಯ ಸಾಧ್ಯತೆ ಹಿನ್ನೆಲೆಯಲ್ಲಿ ಜನರೆಲ್ಲಾ ಬಂಕರ್‌ಗಳಲ್ಲಿ ನೆಲೆಯೂರಿದ್ದಾರೆ. ಈ ಕುರಿತು ಮಾಹಿತಿ ಹೊಂದಿರುವ ರಷ್ಯಾ ಸೇನೆ, ನಗರದ ಶಾಲೆ, ಆಸ್ಪತ್ರೆ, ಬೃಹತ್‌ ಕಟ್ಟಡಗಳು ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ಕಳೆದ 2 ವಾರದಿಂದ ಸತತವಾಗಿ ಶೆಲ್‌, ಬಾಂಬ್‌, ಕ್ಷಿಪಣಿಗಳ ಮೂಲಕ ಸತತವಾಗಿ ದಾಳಿ ನಡೆಸುತ್ತಿದೆ. ಪರಿಣಾಮ ಬಹುತೇಕ ಕಟ್ಟಡಗಳು ಮರಳಿ ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ.

ಹೀಗಾಗಿ ಮುಂದೆ ಯುದ್ಧ ನಿಂತರೂ ತಮಗೆ ವಾಸಿಸಲು ಮನೆಯೇ ಇಲ್ಲ ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಖಾರ್ಕೀವ್‌ ನಗರವನ್ನು ಪುನಾನಿರ್ಮಾಣ ಮಾಡದ ಹೊರತು ಮತ್ತೆ ಜನರು ವಸತಿ ಹೂಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಗರಕ್ಕೆ ಹಾನಿಯಾಗಿದೆ.

ಉಕ್ರೇನ್‌ ಮಕ್ಕಳು ಮಾನವ ತಡೆಗೋಡೆಯಾಗಿ ಬಳಕೆ?: ಉಕ್ರೇನ್‌ನಲ್ಲಿ ತಾವು ಈಗಾಗಲೇ ವಶಪಡಿಸಿಕೊಂಡ ಪ್ರದೇಶಗಳಲ್ಲಿನ ಮಹಿಳೆಯರು ಮತ್ತು ಮಕ್ಕಳನ್ನು ರಷ್ಯಾ ಸೇನೆ ತನ್ನ ವಶಕ್ಕೆ ಪಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯುದ್ಧದ ವೇಳೆ ಅವರನ್ನು ಮಾನವ ತಡೆಗೋಡೆಯಾಗಿ ಬಳಸುವ ಸಂಚಿನ ಭಾಗವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Russia Ukraine Chemical War: ಉಕ್ರೇನ್‌ ಮೇಲೆ ವಿಷಾನಿಲ ದಾಳಿಗೆ ರಷ್ಯಾ ರಹಸ್ಯ ಯೋಜನೆ?

ರಾಜಧಾನಿ ಕೀವ್‌ನಿಂದ 25 ಕಿಮೀ ದೂರದಲ್ಲಿದ್ದ ಡಿಮೇರ್‌ ಎಂಬ ಹಳ್ಳಿಯಲ್ಲಿ ನೆಲೆಸಿದ ಮಹಿಳೆಯೊಬ್ಬಳು ತನ್ನ ಪುತ್ರ ಸೇರಿದಂತೆ ಇನ್ನಿಬ್ಬರನ್ನು ರಷ್ಯಾದ ಯೋಧರು ಬಂಧಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ. ಶೆಲ್‌ ದಾಳಿಯಿಂದ ರಕ್ಷಿಸಿಕೊಳ್ಳಲು ಮನೆಯ ಬೇಸ್‌ಮೆಂಟ್‌ನಲ್ಲಿ ಅಡಗಿದ್ದ 33 ವರ್ಷದ ಉದ್ಯಮಿಯನ್ನೂ ರಷ್ಯನ್‌ ಪಡೆಗಳು ಬಂಧಿಸಿದ್ದಾರೆ ಎಂದು ಬಂಧಿತನ ಪತ್ನಿಯೇ ಮಾಹಿತಿ ನೀಡಿದ್ದಾಳೆ.

‘ರಷ್ಯನ್‌ ಪಡೆಗಳು ಬೇಸ್‌ಮೆಂಟ್‌ಗೆ ಬಂದು ಮಹಿಳೆ ಹಾಗೂ ಮಕ್ಕಳನ್ನು ಅಲ್ಲಿಂದ ಹೊರಡಲು ತಿಳಿಸಿದರು. ನಡೆಯಲಾಗದ ವೃದ್ಧರು ಹಾಗೂ ಪುರುಷರನ್ನು ಬಂಧಿಸಿದರು. ಹಿಂದೆ ನಾಝೀ ಜರ್ಮನಿಯವರಂತೆ ನಾಗರಿಕರನ್ನು ಮಾನವ ಶೀಲ್ಡ್‌ನಂತೆ ಬಳಸುತ್ತಿದ್ದರು. ರಷ್ಯಾದ ಯೋಧರು ಇದಕ್ಕಾಗಿಯೇ ನಾಗರಿಕರನ್ನು ಬಂಧಿಸುತ್ತಿರಬೇಕು’ ಎಂದು ಮಹಿಳೆ ಭೀತಿ ವ್ಯಕ್ತಪಡಿಸಿದ್ದಾಳೆ.

ಯುರೋಪ್‌ ಒಕ್ಕೂಟದ ನೆಚ್ಚಿನ ದೇಶದ ಪಟ್ಟಿಯಿಂದ ರಷ್ಯಾಕ್ಕೆ ಕೊಕ್‌ಗೆ ನಿರ್ಧಾರ:  ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಯೂರೋಪಿಯನ್‌ ಒಕ್ಕೂಟದ ದೇಶಗಳು ವ್ಯಾಪಾರದ ಉದ್ದೇಶದಲ್ಲಿ ರಷ್ಯಾಕ್ಕೆ ನೀಡಿದ್ದ ಅತ್ಯಾಪ್ತ ದೇಶದ ಸ್ಥಾನಮಾನ ಹಿಂತೆಗೆದಕೊಳ್ಳಲು ನಿರ್ಧರಿಸಿದೆ ಎಂದು ಅಮೆರಿಕ ತಿಳಿಸಿದೆ.

ಇದನ್ನೂ ಓದಿ: Russia Ukraine War 8 ಜನರಲ್‌ಗಳಿಗೆ ಪುಟಿನ್‌ ವಜಾ ಶಿಕ್ಷೆ

ರಷ್ಯಾವನ್ನು ನೆಚ್ಚಿನ ರಾಷ್ಟ್ರಗಳ ಪಟ್ಟಿಯಿಂದ ತೆಗೆಯುವುದರಿಂದ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ಅಮದು ಸುಂಕ ಹೇರಿಕೆಗೆ ಸಹಾಯವಾಗುತ್ತದೆ, ಇದರಿಂದಾಗಿ ರಷ್ಯಾದ ಆರ್ಥಿಕತೆಗೆ ಹೊಡೆತ ಬೀಳುತ್ತದೆ, ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಮಿತ್ರ ರಾಷ್ಟ್ರಗಳಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಬಿಡೆನ್‌ ಈ ನಿರ್ಣಯಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಉಕ್ರೇನ್‌ ಅಧ್ಯಕ್ಷ ರಷ್ಯಾದ ಮೇಲಿನ ವ್ಯಾಪರ ಸಂಬಂಧಗಳನ್ನು ಕಡಿತುಕೊಳ್ಳುವಂತೆ ಅಮೆರಿಕ ಮತ್ತು ಇತರೆ ಮಿತ್ರ ರಾಷ್ಟ್ರಗಳಿಗೆ ಒತ್ತಡ ಹೇರಿದ್ದರು ಈ ಹಿನ್ನೆಲೆಯಲ್ಲಿ ಹಲು ದೇಶಗಳು ರಷ್ಯಾದ ತೈಲೋತ್ಪನ್ನಗಳನ್ನು ನಿಷೇಧಿಸಿವೆ.

ರಷ್ಯಾ ಸೇನೆಗೂ ಸ್ವಯಂಸೇವಕ ಯೋಧರ ಸೇರ್ಪಡೆಗೆ ಅವಕಾಶ: ರಷ್ಯಾ ವಿರುದ್ದದ ಯುದ್ಧದಲ್ಲಿ ಉಕ್ರೇನ್‌ ಸೈನ್ಯಕ್ಕೆ ಸ್ವಯಂಸೇವಕ ಯೋಧರು ಸೇರಿರುವ ಬೆನ್ನಲ್ಲೇ ಇತ್ತ ರಷ್ಯಾ ಕೂಡ ತನ್ನ ಸೈನ್ಯಕ್ಕೆ ಸ್ವಯಂಸೇವಕ ಯೋಧರ ಸೇರ್ಪಡೆಗೆ ಅವಕಾಶ ನೀಡಿದೆ. ಈ ಬಗ್ಗೆ ರಷ್ಯಾ ರಕ್ಷಣಾ ಸಚಿವ ಸೆರ್ಗಯ್‌ ಶೋಯಿಗು ಮಾಹಿತಿ ನೀಡಿದ್ದು, ರಷ್ಯಾ ಸೇನೆ ಸೇರಲು ಈಗಾಗಲೇ 16000 ಅರ್ಜಿಗಳು ಬಂದಿವೆ ಎಂದು ತಿಳಿಸಿದ್ದಾರೆ. ಈ ಹಿಂದೆ ಐಸಿಸ್‌ ವಿರುದ್ಧ ಹೋರಾಡಲು ರಷ್ಯಾ ಸೇನೆಗೆ ನೆರವಾಗಿದ್ದ ಮಧ್ಯಪ್ರಾಚ್ಯ ದೇಶಗಳ ಸಾವಿರಾರು ಈಗ ಉಕ್ರೇನ್‌ ವಿರುದ್ಧದ ಹೋರಾಟಕ್ಕೂ ಕೈಜೋಡಿಸಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ