ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆಗೆ ವೇದಿಕೆ ಸಿದ್ಧ
ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸಲು ಒಪ್ಪಿಗೆ ನೀಡಿದ ಉಕ್ರೇನ್
ರಷ್ಯಾ-ಉಕ್ರೇನ್ ನಡುವೆ ಕದನ ವಿರಾಮದ ಸೂಚನೆ
ಮಾಸ್ಕೋ/ಕೈವ್ (ಫೆ.27): ರಷ್ಯಾ ಹಾಗೂ ಉಕ್ರೇನ್ ನಡುವಿನ ಭೀಕರ ಸಮರಕ್ಕೆ ಕದನ ವಿರಾಮದ ಲಕ್ಷಣ ತೋರಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಮರು ದಿನವೇ, ಉಕ್ರೇನ್ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದರು.
ಉಭಯ ದೇಶಗಳ ಮಾತುಕತೆಯ ವಿಚಾರದಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳು ತಲೆದೋರಿದ್ದರಿಂದ ಮಾತುಕತೆಗೆ ವೇದಿಕೆ ಸಿದ್ಧವಾಗಿಲ್ಲ. ಭಾನುವಾರ ಬೆಲಾರಸ್ ನಲ್ಲಿ ಉಕ್ರೇನ್ ಜೊತೆಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾ ಹೇಳಿದ್ದರೂ, ಉಕ್ರೇನ್ ಇದನ್ನು ನಿರಾಕರಿಸಿತ್ತು.
ಆದರೆ, ಕೊನೆಗೂ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಮಾತುಕತೆಗೆ ಒಪ್ಪಿಗೆ ನೀಡಿದ್ದು, ಬೆಲಾರಸ್ ಹಾಗೂ ಉಕ್ರೇನ್ ದೇಶದ ಗಡಿಯಲ್ಲಿ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ದೇಶದ ಮೇಲೆ ಆಕ್ರಮಣ ಮಾಡುವ ವಿಚಾರದಲ್ಲಿ ರಷ್ಯಾದೊಂದಿಗೆ ಬೆಲಾರಸ್ ಕೂಡ ಕೈಜೋಡಿಸಿದ್ದರಿಂದ ಬೆಲಾರಸ್ ನಲ್ಲಿ ಮಾತುಕತೆಗೆ ಸಿದ್ಧವಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದರು. ಆದರೆ, ಸಾಕಷ್ಟು ಚರ್ಚೆಯ ಬಳಿಕ ಬೆಲಾರಸ್ ನ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಮಾಸ್ಕೋದ ಮಾಧ್ಯಮಗಳು ವರದಿ ಮಾಡಿವೆ.
Ukraine says it will hold talks with Russia at its border with Belarus -- near the Chernobyl exclusion zone -- after a phone call between President Volodymyr Zelensky and Belarusian leader Alexander Lukashenko pic.twitter.com/A4dLmWuu1N
— AFP News Agency (@AFP)
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿ ಕೂಡ ಈ ಕುರಿತಾಗಿ ಮಾಹಿತಿ ನೀಡಿದ್ದು, ಬೆಲಾರಸ್ ನ ಗಡಿಯಲ್ಲಿರುವ ಅನಿರ್ದಿಷ್ಟ ಸ್ಥಳದಲ್ಲಿ ಎರಡು ದೇಶದ ನಾಯಕರು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದು, ಸಭೆಗೆ ನಿಖರವಾದ ಸಮಯವನ್ನು ಈವರೆಗೂ ಘೋಷಣೆ ಮಾಡಿಲ್ಲ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿ ಕೂಡ ಈ ಕುರಿತಾಗಿ ಮಾಹಿತಿ ನೀಡಿದ್ದು, ಬೆಲಾರಸ್ ನ ಗಡಿಯಲ್ಲಿರುವ ಅನಿರ್ದಿಷ್ಟ ಸ್ಥಳದಲ್ಲಿ ಎರಡು ದೇಶದ ನಾಯಕರು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದು, ಸಭೆಗೆ ನಿಖರವಾದ ಸಮಯವನ್ನು ಈವರೆಗೂ ಘೋಷಣೆ ಮಾಡಿಲ್ಲ. ಬಹುತೇಕವಾಗಿ ಚರ್ನೋಬಿಲ್ ಅಣುಸ್ಥಾವರ ಪ್ರದೇಶದಲ್ಲಿ ಭೇಟಿ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಬೆಲಾರಸ್ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಈ ನಿರ್ಧಾರ ಹೊರಬಿದ್ದಿದೆ. ಉಕ್ರೇನ್ ಯಾವುದೇ ಕಾರಣಕ್ಕೂ ತನ್ನ ರಾಜ್ಯವನ್ನು ಕಳೆದುಕೊಳ್ಳುವುದಿಲ್ಲ ಅದಕ್ಕಾಗಿ ರಷ್ಯಾದೊಂದಿಗೆ ಕುಳಿತು ಮಾತುಕನೆ ನಡೆಸುವಂತೆ ಲುಕಾಶೆಂಕೊ ಕೇಳಿಕೊಂಡ ಬಳಿಕ ಝೆಲೆನ್ಸ್ಕಿ ಈ ನಿರ್ಧಾರ ಮಾಡಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
Russia Ukraine Crisis: ಸಾಕು ನಾಯಿ ಬಿಟ್ಟು ಬರಲು ಒಪ್ಪುತ್ತಿಲ್ಲ ಭಾರತೀಯ ವಿದ್ಯಾರ್ಥಿ
ಇನ್ನೊಂದೆಡೆ ವಿಶ್ವದ ಪ್ರಮುಖ ನ್ಯಾಟೋ ದೇಶಗಳಿಂದ ಆಕ್ರಮಣಕಾರಿ ಹೇಳಿಕೆಗಳು ಬಂದ ಬೆನ್ನಲ್ಲಿಯೇ ದೇಶದ ಪರಮಾಣು ಪಡೆಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೆಚ್ಚಿನ ಜಾಗರೂಕತೆಯಲ್ಲಿ ಇರುವಂತೆ ಹೇಳಿದ ಬೆನ್ನಲ್ಲಿಯೇ ಉಭಯ ದೇಶಗಳ ನಡುವಿನ ಮಾತುಕತೆ ಖಚಿತವಾಗಿರುವ ಮಾಹಿತಿ ಹೊರಬಿದ್ದಿದೆ.
PM Modi Meeting ಯುಪಿ ರ‍್ಯಾಲಿ ಮುಗಿಸಿದ ಬೆನ್ನಲ್ಲೇ ಉಕ್ರೇನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!
ಬೆಲಾರಸ್ ನಲ್ಲಿ ಮಾತುಕತೆಗೆ ಉಕ್ರೇನ್ ಒಪ್ಪದಿರಲು ಕಾರಣವೇನು:
ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ದಿನದಿಂದಲೂ ರಷ್ಯಾದೊಂದಿಗೆ ಬೆಲಾರಸ್ ಕೂಡ ಕೈಜೋಡಿಸಿದೆ ಎಂದು ವರದಿಯಾಗಿತ್ತು. ಆದರೆ, ನೇರವಾಗಿ ಎಲ್ಲೂ ಪಾಲ್ಗೊಳ್ಳದ ಬೆಲಾರಸ್ ದೇಶವು, ರಷ್ಯಾದೊಂದಿಗೆ ಕೈಜೋಡಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಇದಕ್ಕಾಗಿ ಕೆಲವು ಯುರೋಪ್ ದೇಶಗಳು ಬೆಲಾರಸ್ ಮೇಲೂ ತನ್ನ ನಿರ್ಬಂಧವನ್ನು ಹೇರಿದೆ. ತನ್ನ ದೇಶದ ನೆಲವನ್ನು ರಷ್ಯಾದ ಸೇನೆಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವ ಮೂಲಕ ನೇರವಾಗು ಉಕ್ರೇನ್ ನ ವಿರುದ್ಧವಾಗಿ ನಿಂತಿತ್ತು. ಬೆಟ್ಟಗುಡ್ಡಗಳಿಂದಲೇ ಸುತ್ತುವರಿದಿರುವ ಪೂರ್ವ ಯುರೋಪ್ ನ ಬೆಲಾರಸ್ ದೇಶದಲ್ಲಿ ಈ ಹಿಂದೆಯೂ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆಗಳನ್ನು ನಡೆಸಿತ್ತು. ಈ ಬಾರಿ ಬೆಲಾರಸ್ ನ ಗೋಮಲ್ ಪಟ್ಟಣದಲ್ಲಿ ಸಭೆ ನಡೆಸಲು ನಿರ್ಧಾರ ಮಾಡಲಾಗಿತ್ತು.