Russia Ukraine Crisis: ಉಕ್ರೇನ್ ಗೆ 65 ಕೋಟಿ ದೇಣಿಗೆ ನೀಡಿದ ಜಪಾನ್ ಉದ್ಯಮಿ!

Suvarna News   | Asianet News
Published : Feb 27, 2022, 04:53 PM IST
Russia Ukraine Crisis: ಉಕ್ರೇನ್ ಗೆ 65 ಕೋಟಿ ದೇಣಿಗೆ ನೀಡಿದ ಜಪಾನ್ ಉದ್ಯಮಿ!

ಸಾರಾಂಶ

ಮಾನವೀಯ ಕೆಲಸಗಳಿಗಾಗಿ ದೇಣಿಗೆ ನೀಡಿದ ಹಿರೋಶಿ ಮಿಕಿತಾನಿ 1 ಬಿಲಿಯನ್ ಯೆನ್ ಮೊತ್ತದ ದೇಣಿಗೆ ನೀಡಿದ ಉದ್ಯಮಿ ರಷ್ಯಾದ ಆಕ್ರಮಣವು ಪ್ರಜಾಪ್ರಭುತ್ವಕ್ಕೆ ಒಡ್ಡಿರುವ ಸವಾಲು ಎಂದ ಉದ್ಯಮಿ

ಟೋಕಿಯೋ (ಫೆ. 27): ಜಪಾನ್  (Japan) ದೇಶದ ಕೋಟ್ಯಧಿಪತಿ ಉದ್ಯಮಿಗಳಲ್ಲಿ  ಒಬ್ಬರಾಗಿರುವ ಹಿರೋಶಿ "ಮಿಕಿ" ಮಿಕಿತಾನಿ (Hiroshi "Mickey" Mikitani ) ಭಾನುವಾರ ಉಕ್ರೇನ್ (Ukraine) ಸರ್ಕಾರಕ್ಕೆ 8.7 ಮಿಲಿಯನ್ ಅಮೇರಿಕನ್ ಡಾಲರ್ (ಅಂದಾಜು 65 ಕೋಟಿ ರೂಪಾಯಿ) ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದೇ ವೇಳೆ ರಷ್ಯಾದ ಆಕ್ರಮಣವನ್ನು ಪ್ರಜಾಪ್ರಭುತ್ವಕ್ಕೆ ಒಡ್ಡಿರುವ ಸವಾಲು ಎಂದು ಅವರು ಟೀಕೆ ಮಾಡಿದ್ದಾರೆ.

ಇ-ಕಾಮರ್ಸ್ ದೈತ್ಯ ರಕುಟೆನ್‌ನ ಸಂಸ್ಥಾಪಕ (founder of e-commerce giant Rakuten) ಮಿಕಿತಾನಿ,  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ  (Ukraine President Volodymyr Zelensky) ಈ ಕುರಿತಾಗಿ ಪತ್ರವನ್ನೂ ಬರೆದಿದ್ದು, "ಹಿಂಸಾಚಾರಕ್ಕೆ ಬಲಿಯಾದ ಜನರಿಗೆ ಸಹಾಯ ಮಾಡಲು ಮಾನವೀಯ ಚಟುವಟಿಕೆಗಳಿಗೆ ಸಹಾಯ ಮಾಡುವ ಸಲುವಾಗಿ 1 ಬಿಲಿಯನ್ ಯೆನ್ (8.7 ಮಿಲಿಯನ್ ಅಮೇರಿಕನ್ ಡಾಲರ್) ಮೊತ್ತವನ್ನು ದೇಣಿಗೆಯಾಗಿ ನೀಡಿದ್ದೇನೆ' ಎಂದು ಹೇಳಿದ್ದಾರೆ. 2019ರಲ್ಲಿ ತಾವು ಉಕ್ರೇನ್ ದೇಶದ ರಾಜಧಾನಿ ಕೈವ್ ಗೆ ಭೇಟಿ ನೀಡಿದ್ದೆ ಈ ವೇಳೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದೆ ಎಂದೂ ನೆನಪಿಸಿಕೊಂಡಿದ್ದಾರೆ. "ನನ್ನೆಲ್ಲಾ ಪ್ರಾರ್ಥನೆಗಳು ಉಕ್ರೇನ್ ದೇಶದ ಜನರ ಕುರಿತಾಗಿ ಇರಲಿದೆ ' ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ. ಶಾಂತಿಯುತ ದೇಶ ಹಾಗೂ ಪ್ರಜಾಸತಾತ್ಮಕ ರಾಷ್ಟ್ರವಾಗಿರುವ ಉಕ್ರೇನ್ ಅನ್ನು ನ್ಯಾಯಸಮ್ಮತವಲ್ಲದ ಬಲದಿಂದ ತುಳಿಯುವುದು ಪ್ರಜಾಪ್ರಭುತ್ವಕ್ಕೆ ಎದುರಾದ ದೊಡ್ಡ ಸವಾಲೆಂದು ನಾನು ನಂಬುತ್ತೇನೆ ಎಂದು ಮಿಕಿತಾನಿ ಪತ್ರದಲ್ಲಿ ಬರೆದಿದ್ದಾರೆ.

"ರಷ್ಯಾ ಮತ್ತು ಉಕ್ರೇನ್ ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹಸಿಕೊಳ್ಳಬಹುದು ಮತ್ತು ಉಕ್ರೇನ್ ಜನರು ಆದಷ್ಟು ಬೇಗ ಮತ್ತೆ ಶಾಂತಿಯ ನಿರಾಳತೆಯನ್ನು ಹೊಂದಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ" ಎಂದು ಅವರು ಬರೆದಿದ್ದಾರೆ.

Russia Ukraine Crisis: ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಇಲ್ಲದೆ ಪೋಲೆಂಡ್ ಗೆ ತೆರಳಲು ಅನುಮತಿ!
ಸಾರ್ವಭೌಮ ರಾಷ್ಟ್ರ ಉಕ್ರೇನ್ ನ ಮೇಲೆ ರಷ್ಯಾ ದೇಶ ಮಾಡಿರುವ ಆಕ್ರಮಣವನ್ನು ವಿಶ್ವದ ಪ್ರಮುಖ ದೇಶಗಳು ಖಂಡಿಸಿವೆ. ಇದರ ಬೆನ್ನಲ್ಲಿಯೇ ರಷ್ಯಾವನ್ನು ವಿಶ್ವದಲ್ಲಿ ಏಕಾಂಗಿಯಾಗಿರುವ ಪ್ರಕ್ರಿಯೆಗಳೂ ನಡೆದಿದ್ದು, ಎಲ್ಲಾ ರೀತಿಯ ಆರ್ಥಿಕ ದಿಗ್ಭಂದನಗಳನ್ನು ರಷ್ಯಾದ ಮೇಲೆ ಹೇರಿದೆ. ಅದಲ್ಲದೆ, ರಷ್ಯಾ ದೇಶದ ಹಾಗೂ ರಷ್ಯಾ ಮೂಲದ ಬ್ಯಾಂಕ್ ವ್ಯವಹಾರಗಳಿಗೂ ನಿರ್ಬಂಧ ವಿಧಿಸಿದೆ. ಇನ್ನೊಂದೆಡೆ ಉಕ್ರೇನ್ ದೇಶಕ್ಕೆ ವಿಶ್ವದಿಂದ ದೊಡ್ಡ ಮಟ್ಟದ ಬೆಂಬಲವು ವ್ಯಕ್ತವಾಗಿದೆ. ಪ್ರಪಂಚದಾದ್ಯಂತ ವ್ಯಕ್ತಿಗಳು ಮತ್ತ ಸಂಸ್ಥೆಗಳು ಉಕ್ರೇನ್ ಗೆ ಸಹಾಯ ಮಾಡುವ ನಿಟ್ಟಿನಲ್ಲಿ ದೇಣಿಗೆಗಳನ್ನೂ ಕೋರಿದ್ದಾರೆ.
ಇನ್ನೊಂದೆಡೆ ನೆರೆಯ ದೇಶ ಜಪಾನ್ (Japanese government ) ಕೂಡ ರಷ್ಯಾದ ಮೇಲೆ ಕೆಲ ನಿರ್ಬಂಧಗಳನ್ನು  ವಿಧಿಸಿದೆ. ರಷ್ಯಾ ದೇಶದ ಸ್ವತ್ತುಗಳನ್ನು ಫ್ರೀಜ್ ಮಾಡುವುದು ಮಾತ್ರವಲ್ಲದೆ, ರಷ್ಯಾದ ಮಿಲಿಟರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸೆಮಿಕಂಡಕ್ಟರ್ ಗಳ ರಫ್ತನ್ನು ನಿಷೇಧಿಸುವಂಥ ದೊಡ್ಡ ಕ್ರಮಗಳನ್ನು ಕೈಗೊಂಡಿದೆ.

Russia-Ukraine Crisis: ಹೇಗಿತ್ತು 'ಆಪರೇಷನ್ ಗಂಗಾ' ಕಾರ್ಯಾಚರಣೆ.? ವಿದ್ಯಾರ್ಥಿನಿಯರ ಮಾತು
ಜಪಾನ್ ದೇಶದ ಕಾರ್ಗೋ ಹಡಗಿನ ಮೇಲೆ ರಷ್ಯಾ ದಾಳಿ: ಉಕ್ರೇನ್‌ನ ದಕ್ಷಿಣ ಭಾಗದಲ್ಲಿರುವ ಕಪ್ಪು ಸಮುದ್ರದಲ್ಲಿ ಜಪಾನ್ ಒಡೆತನದ ಸರಕು ಹಡಗಿನ ಮೇಲೆ ಶೆಲ್ ದಾಳಿ ನಡೆಸಲಾಗಿದ್ದು, ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ಕ್ಷಿಪಣಿಯು ಹಡಗಿನ ಹಿಂಭಾಗಕ್ಕೆ ಅಪ್ಪಳಿಸಿದ್ದು, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತಂತೆ ಉಕ್ರೇನ್ ದೇಶದ ರಕ್ಷಣಾ ಸಚಿವಾಲಯವು ತನ್ನ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದು ಪನಾಮ ನೋಂದಾಯಿತ ಸರಕು ಸಾಗಣೆ ನೌಕೆ ನಮುರಾ ಕ್ವೀನ್ ಮೇಲೆ ಶುಕ್ರವಾರ ಕಪ್ಪು ಸಮುದ್ರದಲ್ಲಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು