Russia Ukraine Crisis ವಿದಾಯ ಹೇಳುವಾಗ ಪುತ್ರಿ ಅಪ್ಪಿ ಹಿಡಿದು ಕಣ್ಣೀರು ಹಾಕಿದ ಯೋಧ, ಉಕ್ರೇನ್ ವಿಡಿಯೋ ವೈರಲ್

By Suvarna News  |  First Published Feb 26, 2022, 6:19 PM IST
  • ರಷ್ಯಾ ದಾಳಿಗೆ ಉಕ್ರೇನ್‌ ಬೀದಿ ಬೀದಿಯಲ್ಲಿ ಹೆಣ
  • ಉಕ್ರೇನ್ ತೊರೆಯುತ್ತಿರುವ ನಾಗರೀಕರು
  • ಅಪ್ಪ ಮಗಳು ಬಿಗಿದಪ್ಪಿ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್

ಉಕ್ರೇನ್(ಫೆ.26): ಉಕ್ರೇನ್ ಪರಿಸ್ಥಿತಿ ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ರಷ್ಯಾ(Russia Ukraine Crisis) ಸೇನೆ ಬಿಡುವಿಲ್ಲದೆ ದಾಳಿ(Attack) ನಡೆಸುತ್ತಲೇ ಇದೆ. ಕಟ್ಟಡಗಳು, ವಿಮಾನ ನಿಲ್ದಾಣ, ಸರ್ಕಾರಿ ಕಚೇರಿಗಳು ಧ್ವಂಸಗೊಳ್ಳುತ್ತಿದೆ. ಉಕ್ರೇನ್ ಸೈನಿಕರು, ನಾಗರೀಕರು ಬೀದಿ ಬೀದಿಯಲ್ಲಿ ಹೆಣವಾಗಿದ್ದಾರೆ. ಈ ಘನಘೋರ ಪರಿಸ್ಥಿತಿ ನಡುವೆ ನಾಗರೀಕರು ಉಕ್ರೇನ್ ತೊರೆಯುತ್ತಿದ್ದಾರೆ. ಇದರ ನಡುವೆ ಉಕ್ರೇನ್ ಘಟನೆ ವಿವರಿಸುವ ಸಣ್ಣ ವಿಡಿಯೋ ವೈರಲ್(Ukraine Viral Video ) ಆಗಿದೆ. ಅಪ್ಪ ಹಾಗೂ ಮಗಳು ಬಿಗಿದಪ್ಪಿ ಕಣ್ಣೀರು ಹಾಕುತ್ತಿರುವ ಹೃದಯ ವಿದ್ರಾವಕ ವಿಡೀಯೋ ಎಲ್ಲರ ಕಣ್ಣಲ್ಲೂ ಕಣ್ಣೀರು ಜಿನುಗಿಸುತ್ತಿದೆ.

ಉಕ್ರೇನ್‌ನಲ್ಲಿ ನಾಗರೀಕರನ್ನು ಸುರಕ್ಷಿತ ತಾಣಕ್ಕೆ ಕಳಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ಬಸ್‌ನಲ್ಲಿ ತನ್ನ ಕುಟುಂಬವನ್ನು ಸುರಕ್ಷಿತ ತಾಣಕ್ಕೆ ಕಳುಹಿಸುತ್ತಿರುವ ಉಕ್ರೇನ್ ಸೈನಿಕ ತನ್ನ ಪುಟಾಣಿ ಪುತ್ರಿಯನ್ನು ಬಿಗಿದಪ್ಪಿ ಕಣ್ಣೀರು ಹಾಕಿದ ಘಟನೆ ಮನಕಲುಕುವಂತಿದೆ. ಪುತ್ರಿ ಹಾಗೂ ತಂದೆ ಇಬ್ಬರು ಕಣ್ಣೀರು ಹಾಕಿದ್ದಾರೆ.

Tap to resize

Latest Videos

ರಷ್ಯಾದ ಮಿಸೈಲ್ ದಾಳಿಗೆ ಉಕ್ರೇನ್ ಜೀಪ್ ಉಡೀಸ್, ಭೀಕರ ದೃಶ್ಯ ಸೆರೆ

ತನ್ನ ದೇಶವನ್ನು ರಷ್ಯಾ ದಾಳಿಯಿಂದ(Russia attack) ರಕ್ಷಿಸುವ ಹೊಣೆ ತಂದೆಯ ಮೇಲಿದೆ. ಹೀಗಾಗಿ ಯೋಧ ಕುಟುಂಬದ ಜೊತೆ ತೆರಳುತ್ತಿಲ್ಲ. ಇತ್ತ ಕುಟುಂಬ ಉಳಿಯಬೇಕಾದರೆ ಬೇರೊಂದು ತಾಣಕ್ಕೆ ಸ್ಥಳಾಂತರ ಅನಿವಾರ್ಯವಾಗಿದೆ. ಈ ವಿಡಿಯೋ ಹೇಳುತ್ತಿರುವ ಕತೆ ಇಷ್ಟೇ ಅಲ್ಲ. ಇವರ ಕಣ್ಣೀರಿನ ನೋವು ಕೂಡ ಇಷ್ಟೇ ಅಲ್ಲ. ಕಾರಣ ಅಪ್ಪ ಉಕ್ರೇನ್‌ನಲ್ಲಿ ಗಡಿ ರಕ್ಷಣೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಆದರೆ ಅಪ್ಪನಿಂದ ಬೇರ್ಪಟ್ಟ ಪುತ್ರಿ,ಪತ್ನಿ ಹಾಗೂ ಮಕ್ಕಳು ಮತ್ತೆ ತಂದೆಯನ್ನು ಭೇಟಿಯಾಗುವ ಸಾಧ್ಯತೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಕಾರಣ ರಷ್ಯಾ ದಾಳಿಯ ಪರಿಸ್ಥಿತಿ ವಿವರಿಸುವ ಅಗತ್ಯವಿಲ್ಲ.

 

⚠️ | A father who sent his family to a safe zone bid farewell to his little girl and stayed behind to fight ...

pic.twitter.com/vHGaCh6Z2i

— New News EU (@Newnews_eu)

ಪ್ರತಿ ಕ್ಷಣವೂ ಭಯದಲ್ಲೇ ಕಾಲ ಕಳೆಯುವ ಸ್ಥಿತಿ’
ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ನ ಸ್ಥಿತಿಗತಿ ಬಗ್ಗೆ ವೈದ್ಯಕೀಯ ವಿದ್ಯಾರ್ಥಿನಿ ದಾವಣಗೆರೆ ಜಿಲ್ಲೆ ಕುಂದೂರು ಗ್ರಾಮದ ಪ್ರಿಯಾ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಾಣ ಕೈಯಲ್ಲೇ ಹಿಡಿದು, ಪ್ರತಿ ಕ್ಷಣ ಕಳೆಯುವಂತಹ ಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಉಕ್ಕಿದ ದೇಶ ಭಕ್ತಿ... ಸೇನೆ ಸೇರಲು ಮುಂದಾದ 80ರ ಉಕ್ರೇನ್‌ ವೃದ್ಧ

ಒಂದು ವಾರಕ್ಕೆ ಆಗುವಷ್ಟುಹಣ, ನೀರು ಮತ್ತು ಆಹಾರ ಸಂಗ್ರಹಿಸಿಟ್ಟುಕೊಳ್ಳುವಂತೆ ರಾಯಭಾರ ಕಚೇರಿಯವರು ಸೂಚನೆ ನೀಡಿದ್ದರು. ಅದರಂತೆ ಒಂದು ವಾರಕ್ಕಾಗುವಷ್ಟುನಾವು ನೀರು, ಆಹಾರ, ಹಣ ಸಂಗ್ರಹಿಸಿಕೊಂಡಿದ್ದೇವೆ. ತಂಡಗಳನ್ನಾಗಿ ಮಾಡಿ, ಭಾರತೀಯರು ಸೇರಿದಂತೆ ವಿದೇಶಿಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಿಯಾ ರೀತಿಯೇ ದಾವಣಗೆರೆಯ ಹಬೀದಾ, ಮಹಮ್ಮದ್‌ ಹಬೀಬ್‌ ಸಹ ಸಂಕಷ್ಟದಲ್ಲಿ ಸಿಲುಕಿದ್ದು, ಸದ್ಯ ಸುರಕ್ಷಿತ ಸ್ಥಳದಲ್ಲಿದ್ದಾರೆ.

10 ದಿನದ ಹಿಂದೆ ಉಡುಪಿಯಿಂದ ಬಂದವಗೆ ಯುದ್ಧ ಶಾಕ್‌!
ವೈದ್ಯನಾಗುವ ಕನಸಿನೊಂದಿಗೆ 10 ದಿನಗಳ ಹಿಂದೆಯಷ್ಟೇ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿ ಗ್ಲೆನ್‌ ವಿಲ್‌ ಮ್ಯಾಕ್ಲಿನ್‌ ಫರ್ನಾಂಡಿಸ್‌, ಯುದ್ಧ ಆರಂಭವಾಗಿದ್ದರಿಂದ ಆತಂಕಕ್ಕೆ ಸಿಲುಕಿದ್ದಾರೆ.

ಉಡುಪಿ ಸಮೀಪದ ಕೆಮ್ಮಣ್ಣು ಗ್ರಾಮದ ಚಚ್‌ರ್‍ ಬಳಿಯ ನಿವಾಸಿ ಗ್ಲೆನ್‌ ವಿಲ್‌ ಫೆ.15ರಂದು ಉಕ್ರೇನ್‌ಗೆ ತೆರಳಿದ್ದಾರೆ. ಗ್ಲೆನ್‌ ವಿಲ್‌ ಹೈಸ್ಕೂಲ್‌ವರೆಗೆ ಅಬುದಾಬಿಯಲ್ಲಿ, ಪಿಯುಸಿಯನ್ನು ಪುತ್ತೂರಿನ ಅಂಬಿಕಾ ಕಾಲೇಜಿನಲ್ಲಿ ಓದಿದ್ದ. ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಗ್ಲೆನ್‌ ವಿಲ್‌ನ ತಂದೆ, ಗ್ಲೆನ್‌ ವಿಲ್‌ ಮತ್ತು 300 ಮಂದಿಯನ್ನು ಬಂಕರ್‌ನಲ್ಲಿಟ್ಟಿದ್ದಾರಂತೆ, ಸರಿಯಾದ ಬೆಳಕಿಲ್ಲ. ಗಾಳಿ ಇಲ್ಲ, ನಿನ್ನೆ ಇಡೀ ದಿನ ಊಟವನ್ನೂ ನೀಡಿಲ್ಲ, ಇವತ್ತು ಬೆಳಗ್ಗೆ ಸ್ವಲ್ಪ ಉಪಹಾರ ಅಷ್ಟೇ ಕೊಟ್ಟಿದ್ದಾರೆ ಎಂದರು.

ಮೊನ್ನೆಯಷ್ಟೇ ಹೋಗಿದ್ದಾನೆ. ಯುದ್ಧದ ಸುದ್ದಿ ತಿಳಿಯುತ್ತಿದ್ದಂತೆ ಯುನಿವರ್ಸಿಟಿಯಿಂದ ತಕ್ಷಣ ಪ್ಯಾಕಪ್‌ ಮಾಡಲು ಹೇಳಿದರಂತೆ. ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತೇವೆ ಎಂದು ಹೇಳಿದ್ದರಂತೆ. ಆದರೆ ಏರ್‌ಪೋರ್ಟ್‌ ರಷ್ಯಾದ ವಶವಾದ್ದರಿಂದ ವಿದ್ಯಾರ್ಥಿಗಳ ಸ್ಥಳಾಂತರ ಸಾಧ್ಯವಾಗಿಲ್ಲ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಬಸ್ಸಿನಲ್ಲಿ ಕರೆದೊಯ್ಯುವುದು ಸಾಧ್ಯವಾಗಿಲ್ಲ, ಬಂಕರ್‌ನೊಳಗೆ ಇರುವುದರಿಂದ ಹೊರಗಡೆ ಏನಾಗುತ್ತಿದೆ ಎಂದು ಅವನಿಗೆ ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

click me!