ಉಕ್ರೇನ್‌ ರಷ್ಯಾ ಯುದ್ಧ: ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಮುನ್ನ ಪುಟ್ಟ ಮಗಳನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತ ಅಪ್ಪ

Suvarna News   | Asianet News
Published : Feb 26, 2022, 11:52 AM IST
ಉಕ್ರೇನ್‌ ರಷ್ಯಾ ಯುದ್ಧ:  ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಮುನ್ನ ಪುಟ್ಟ ಮಗಳನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತ ಅಪ್ಪ

ಸಾರಾಂಶ

ಯುದ್ಧದ ಕರಾಳ ಚಿತ್ರಣ ಕ್ಯಾಮರಾದಲ್ಲಿ ಸೆರೆ ಮಗಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಅಪ್ಪ ಹಲವು ಹೃದಯ ಹಿಂಡುವ ದೃಶ್ಯಗಳು ಸೆರೆ

ಉಕ್ರೇನ್‌ ಮೇಲಿನ ರಷ್ಯಾ ದಾಳಿ ಉಕ್ರೇನ್‌ ಜನಸಾಮಾನ್ಯರ ಬದುಕನ್ನು ಅಕ್ಷರಶಃ ನರಕವಾಗಿಸಿದೆ. ಜನ ತಮ್ಮ ಜೀವವನ್ನು ಉಳಿಸಿಕೊಳ್ಳಲು ಪಕ್ಕದ ದೇಶಗಳಿಗೆ ಓಡಿ ಹೋಗುತ್ತಿರುವ, ಬಂಕರ್‌ಗಳಲ್ಲಿ ಮೆಟ್ರೋ ಸ್ಟೇಷನ್‌ ಗಳಲ್ಲಿ ನೆಲೆ ಕಾಣಲು ಬಯಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದರ ನಡುವೆ ಯುದ್ಧದ ಭಯಾನಕ ದೃಶ್ಯಗಳ ನಡುವೆ ಎಂತಹ ಕಲ್ಲು ಮನಸ್ಸನ್ನು ಕರಗಿಸುವಂತಾಹ ಕೆಲವು ಘಟನೆಗಳು ಅಲ್ಲಲ್ಲಿ ಕಾಣ ಬರುತ್ತಿವೆ. ತಂದೆಯೊರ್ವ ತನ್ನ ಮಗಳನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ ಕೊಡುವ ಮುನ್ನ ಪುಟಾಣಿ ಮಗಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ. 

ಗುರುವಾರ ಬೆಳಗ್ಗೆ ಉಕ್ರೇನ್‌ ಮೇಲೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಯುದ್ಧ ಘೋಷಿಸಿದ ಬಳಿಕ ಉಕ್ರೇನ್‌ ಮೇಲೆ ಸರಣಿ ದಾಳಿಗಳು ನಡೆದವು. ಇದರಿಂದ ಉಕ್ರೇನ್‌ನ ಸಾಮಾನ್ಯ ಜನರ ಸ್ಥಿತಿ ನಮ್ಮ ಶತ್ರುಗಳಿಗೂ ಬರುವುದು ಬೇಡ ಎನಿಸುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಲ್ಲಿ ನೀರು ತರಿಸುವಂತಹ ಅನೇಕ ದೃಶ್ಯಾವಳಿಗಳು ಹರಿದಾಡುತ್ತಿವೆ. ತಾವಿರುವ ಮನೆಗಳನ್ನು ಸಾಕುಪ್ರಾಣಿಗಳನ್ನು ಬಿಟ್ಟು ಹೋಗಲಾಗದೆ, ಅಲ್ಲೇ ಇರಲಾಗದೆ ಅಲ್ಲಿನ ಜನ ಸಂಕಟಪಡುತ್ತಿರುವ ದೃಶ್ಯಗಳು, ಜೊತೆಗೆ ತಮ್ಮ ಮಕ್ಕಳು ಮಡದಿಯರ ರಕ್ಷಣೆಗೆ ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿರುವ ಗಂಡಸರು. ತಮ್ಮ ಅಮೂಲ್ಯ ವಸ್ತುಗಳ ಜೊತೆಗೆ ತಮ್ಮ ಸಾಕುಪ್ರಾಣಿಗಳನ್ನು ಕೂಡ ಹೊತ್ತುಕೊಂಡು ಸಾಗುತ್ತಿರುವ ಜನರು ಮುಂತಾದ ದೃಶ್ಯಗಳು ಎಲ್ಲರ ಹೃದಯವನ್ನು ಕರಗಿಸುತ್ತಿವೆ. 

ಇಲ್ಲಿ ಕಾಣಿಸುತ್ತಿರುವ ವಿಡಿಯೋದಲ್ಲಿ ಉಕ್ರೇನ್‌ ಪರ ರಷ್ಯಾ ವಿರುದ್ಧ ಹೋರಾಡಲು ಮುಂದಾಗಿರುವ ವ್ಯಕ್ತಿಯೋರ್ವ ತನ್ನ ಮಗಳನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಡಲು ಮುಂದಾಗಿದ್ದು, ಅದಕ್ಕೂ ಮೊದಲು ಪ್ರೀತಿಯ ಮಗಳನ್ನು ಅಗಲಲೂ ಆಗದೇ ಜೊತೆಯಲ್ಲಿರಲು ಆಗದೇ ಭಾವನೆಗಳನ್ನು ನಿಯಂತ್ರಿಸಲು ಆಗದೇ ಪುಟ್ಟ ಮಗಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಈ ವಿಡಿಯೋ ಯುದ್ಧ ಪೀಡಿತ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಸೆರೆಯಾದ ದೃಶ್ಯವಾಗಿದೆ. 

Russia Ukrain Crisis: ರಷ್ಯಾ ವಿರುದ್ಧ ಪೂರ್ಣ ಆರ್ಥಿಕ ದಿಗ್ಭಂದನಕ್ಕೆ ಹೆಚ್ಚಿದ ಕೂಗು
 

ಉಕ್ರೇನ್‌ ಮೇಲಿನ ರಷ್ಯಾ ದಾಳಿ, ಜನಸಾಮಾನ್ಯರ ಬದುಕನ್ನ ಹೈರಣಾಗಿಸಿದೆ. ನಿತ್ಯ ಜೀವನದ ಬಹುತೇಕ ಚಟುವಟಿಕೆಗಳ ಮೇಲೆ ಯುದ್ಧವು ವ್ಯತಿರಿಕ್ತ ಪರಿಣಾಮ ಬೀರಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿ ಮಾಡಿದೆ. ದೇಶಾದ್ಯಂತ ಆನ್‌ಲೈನ್‌ ಮತ್ತು ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಪಾವತಿ ಸಂಪೂರ್ಣವಾಗಿ ನಿಷಿದ್ಧವಾಗಿದೆ. ಹೀಗಾಗಿ ಜನರು ಯಾವುದೇ ಸಣ್ಣ ಪುಟ್ಟಖರೀದಿಗೂ ನಗದು ಪಾವತಿಸಲು ಎಟಿಎಂಗಳತ್ತ ಮುಗಿಬೀಳುತ್ತಿದ್ದಾರೆ. ಹೀಗಾಗಿ ನಗರದ ಪ್ರಮುಖ ಭಾಗಗಳಲ್ಲಿರುವ ಎಟಿಎಂಗಳಲ್ಲಿ ಭಾರೀ ಜನದಟ್ಟಣೆ ಎದುರಾಗಿದೆ. ಯುದ್ಧದಿಂದ ದಿನಸಿ, ಔಷಧಿ ಮತ್ತು ಇನ್ನಿತರ ನಿತ್ಯ ಉಪಯೋಗಿ ವಸ್ತುಗಳ ಅಭಾವ ಎದುರಾಗಲಿದೆ ಎಂಬ ಭೀತಿಯಿಂದ ಜನರು ಈ ವಸ್ತುಗಳನ್ನು ಹೆಚ್ಚಾಗಿ ದಾಸ್ತಾನು ಮಾಡಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ ದಿನಸಿ ವಸ್ತುಗಳ ಅಂಗಡಿಗಳ ಮುಂದೆಯೂ ಜೇನು ನೊಣದ ಹಿಂಡಿನಂತೆ ಜನರ ದಂಡು ಹರಿದುಬರುತ್ತಿದೆ.

Ukraine Russia Crisis: ಎರಡೇ ದಿನ, ರಷ್ಯಾ ಉಕ್ರೇನ್ ಸದ್ದನ್ನು ಅಡಗಿಸಿದ್ದು ಹೇಗೆ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್