Russia Ukraine Crisis: ರಷ್ಯಾದಿಂದ ಮತ್ತೆ ಅಣ್ವಸ್ತ್ರ ಬೆದರಿಕೆ

Suvarna News   | Asianet News
Published : Mar 03, 2022, 03:38 AM IST
Russia Ukraine Crisis:  ರಷ್ಯಾದಿಂದ ಮತ್ತೆ ಅಣ್ವಸ್ತ್ರ ಬೆದರಿಕೆ

ಸಾರಾಂಶ

3ನೇ ವಿಶ್ವಯುದ್ಧ ಆದರೆ ಅಣ್ವಸ್ತ್ರ ಪ್ರಯೋಗ ವಿಶ್ವ ಸಮುದಾಯಕ್ಕೆ ರಷ್ಯಾ ಸಚಿವ ಎಚ್ಚರಿಕೆ ಸರ್ವಾಧಿಕಾರಿಗಳು ಬೆಲೆ ತೆರಬೇಕಾಗುತ್ತೆ ಪುಟಿನ್ ಗೆ ಎಚ್ಚರಿಕೆ ನೀಡಿದ ಬೈಡೆನ್  

ಮಾಸ್ಕೋ (ಮಾ.2): ಉಕ್ರೇನ್‌ (Ukraine) ವಿರುದ್ಧ ಯುದ್ಧ ಆರಂಭಿಸಿದ ನಂತರ ರಷ್ಯಾ (Russia) 2ನೇ ಬಾರಿ ಪರಮಾಣು ಅಸ್ತ್ರದ (Nuclear Weapon)  ಬೆದರಿಕೆ ಹಾಕಿದೆ. ‘ಸದ್ಯ ರಷ್ಯಾ-ಉಕ್ರೇನ್‌ ನಡುವೆ ಮಾತ್ರ ನಡೆಯುತ್ತಿರುವ ಯುದ್ಧಕ್ಕೆ ಇತರ ದೇಶಗಳು ಸೇರಿಕೊಂಡರೆ, ಸಮರ ವಿಸ್ತರಣೆಯಾಗಿ ವಿಶ್ವಯುದ್ಧವಾಗಿ ಮಾರ್ಪಾಡಾಗಬಹುದು. ಅದು ಪರಮಾಣು ಅಸ್ತ್ರದ ಯುದ್ಧವಾಗಲಿದೆ’ ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೋವ್‌ (Russian Foreign Minister Sergei Lavrov ) ಎಚ್ಚರಿಸಿದ್ದಾರೆ.

ಉಕ್ರೇನ್‌ಗೆ ನ್ಯಾಟೋ (NATO) ಸೇರಿದಂತೆ ನಾನಾ ದೇಶಗಳ ಬೆಂಬಲ ಹೆಚ್ಚುತ್ತಿದೆ. ಹೀಗಾಗಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin ) ಅವರು ಅಣ್ವಸ್ತ್ರಗಳನ್ನು ಸಿದ್ಧವಾಗಿರಿಸಿಕೊಳ್ಳಲು ಇತ್ತೀಚೆಗೆ ತಮ್ಮ ಪಡೆಗಳಿಗೆ ಸೂಚಿಸಿದ್ದರು. ಈ ನಡುವೆ, ರಷ್ಯಾದಿಂದ ಮತ್ತೆ ಪರಮಾಣು ದಾಳಿಯ ಗಂಭೀರ ಹೇಳಿಕೆ ಬಂದಿದೆ. ಈ ಮೂಲಕ ಉಕ್ರೇನ್‌ಗೆ ಯಾವುದೇ ರೀತಿಯ ಸೇನಾ ನೆರವು ನೀಡದಂತೆ ಪಾಶ್ಚಾತ್ಯ ದೇಶಗಳಿಗೆ ಸಂದೇಶ ರವಾನಿಸಿದೆ.

‘ನಾವು ಕಳೆದ ವಾರ ಉಕ್ರೇನ್‌ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ಕೈಗೊಂಡಿದ್ದೇವೆ. ಆದರೆ ಒಂದು ವೇಳೆ ಉಕ್ರೇನ್‌ ಕೈಗೆ ಪರಮಾಣು ಅಸ್ತ್ರಗಳು ಸಿಕ್ಕರೆ ಅದು ಬಲು ಅಪಾಯಕಾರಿಯಾಗಿರಲಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಮೂರನೇ ವಿಶ್ವ ಮಹಾಯುದ್ಧವೇನಾದರೂ ನಡೆದರೆ ಅದು ಖಂಡಿತವಾಗಿಯೂ ಪರಮಾಣು ಅಸ್ತ್ರಗಳನ್ನು ಒಳಗೊಂಡಿರಲಿದೆ. ಜೊತೆಗೆ ಅದರ ಪರಿಣಾಮಗಳು ವಿನಾಶಕಾರಿಯಾಗಿರಲಿದೆ’ ಎಂದು ಲಾವ್ರೋವ್‌ ಅವರು ಟೀವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದೇ ವೇಳೆ, ‘ನಮ್ಮ ಮೇಲಿನ ನಿರ್ಬಂಧಗಳನ್ನು ಎದುರಿಸಲು ನಾವು ಸಿದ್ಧ. ಆದರೆ ನಮ್ಮ ಅಥ್ಲೀಟ್‌ಗಳು, ಪತ್ರಕರ್ತರು ತ್ತು ಸಾಂಸ್ಕೃತಿಕ ರಾಯಭಾರಿಗಳನ್ನು ವಿದೇಶಗಳು ಗುರಿಯಾಗಿಸುವುದು ಸರಿಯಲ್ಲ’ ಎಂದೂ ಎಚ್ಚರಿಸಿದ್ದಾರೆ.

ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ತಮ್ಮ ಪರಮಾಣು ಪಡೆಗೆ ಸನ್ನದ್ಧವಾಗಿರುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ರಷ್ಯಾ ಸೇನೆ ಮಂಗಳವಾರದಿಂದ ತನ್ನ ಪರಮಾಣು ಅಸ್ತ್ರಗಳ ತಾಲೀಮು ಆರಂಭಿಸಿದೆ ಎಂದು ವರದಿಗಳು ಹೇಳಿದ್ದರು.

ಸರ್ವಾಧಿಕಾರಿಗಳು ಬೆಲೆ ತೆರಬೇಕಾಗುತ್ತೆ: ಇನ್ನು ರಷ್ಯಾದ ಯುದ್ಧದಾಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden), ಸರ್ವಾಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. "ವಿದೇಶವೊಂದರ ಮೇಲೆ ರಷ್ಯಾದ ಸರ್ವಾಧಿಕಾರಿಗಳು ಪೂರ್ವನಿರ್ಧರಿತ ಮತ್ತು ಅಪ್ರಚೋದಿತ ದಾಳಿ ನಡೆಸುತ್ತಿದ್ದಾರೆ. ಅವರು ಈಗ ಯುದ್ಧದಲ್ಲಿ ಮುನ್ನಡೆಯುತ್ತಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಇದರ ಪರಿಣಾಮದ ಅರಿವು ಅವರಿಗಿಲ್ಲ" ಎಂದು ಹೇಳಿದ್ದಾರೆ.

ತನ್ನ ಕೈಗೊಂಬೆ ವಿಕ್ಟರ್‌ಗೆ ಉಕ್ರೇನ್‌ ಅಧ್ಯಕ್ಷ ಗಾದಿ ನೀಡಲು ರಷ್ಯಾ ಪ್ಲ್ಯಾನ್‌
ಕೀವ್‌: ಉಕ್ರೇನ್‌ ವಶಕ್ಕೆ ತೀವ್ರ ಯತ್ನ ನಡೆಸುತ್ತಿರುವ ರಷ್ಯಾ, ಈ ಯತ್ನ ಫಲ ಕೊಟ್ಟಕೂಡಲೇ ತನ್ನ ಕೈಗೊಂಬೆಯಾಗಿರುವ ವಿಕ್ಟರ್‌ ಯನುಕೋವಿಚ್‌ (viktor yanukovych) ಅವರನ್ನೇ ಉಕ್ರೇನ್‌ನ ಹೊಸ ಅಧ್ಯಕ್ಷರಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಮೂಲಕ ಉಕ್ರೇನ್‌ ದೇಶವು, ನ್ಯಾಟೋ ಒಕ್ಕೂಟದತ್ತ ವಾಲದೇ ತನ್ನ ಹಿಡಿತದಲ್ಲೇ ಇರುವಂತೆ ನೋಡಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

Russia Ukraine Crisis: 498 ಯೋಧರ ಸಾವು, ರಷ್ಯಾದ ಅಧಿಕೃತ ಹೇಳಿಕೆ
ವಿಕ್ಟರ್‌, ಪುಟಿನ್‌ ಅವರ ಬೆಂಬಲಿಗರಾಗಿದ್ದು, 2006-2007ರ ಅವಧಿಗೆ ಉಕ್ರೇನ್‌ ಪ್ರಧಾನಿಯಾಗಿ, 2010-2014ರವರೆಗೆ ಉಕ್ರೇನ್‌ ಅಧ್ಯಕ್ಷರಾಗಿದ್ದರು. ಆದರೆ ಭಾರೀ ಭ್ರಷ್ಟಾಚಾರ ಮತ್ತು ಜನರ ವಿರೋಧ ಕಟ್ಟಿಕೊಂಡು 2014ರಲ್ಲಿ ಹುದ್ದೆಯಿಂದ ಕಿತ್ತುಹಾಕಲ್ಪಟ್ಟಿದ್ದರು. ಅಧ್ಯಕ್ಷರಾಗಿ ಇವರ ಆಯ್ಕೆಯ ವೇಳೆ ಭಾರೀ ಅಕ್ರಮ ನಡೆದಿದ್ದು, ಸ್ವತಃ ರಷ್ಯ ಅಧ್ಯಕ್ಷ ಪುಟಿನ್‌ ಇದರ ವಿಕ್ಟರ್‌ ಆಯ್ಕೆ ಖಚಿತಪಡಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ 2014ರಲ್ಲಿ ಅಧಿಕಾರದಿಂದ ಕಿತ್ತುಹಾಕಲ್ಪಟ್ಟವಿಕ್ಟರ್‌ ರಷ್ಯಾಕ್ಕೆ ಪರಾರಿಯಾಗಿ ಅಲ್ಲೇ ವಾಸಿಸುತ್ತಿದ್ದಾರೆ.

Russia Ukraine Crisis: "ಉಕ್ರೇನ್ ಸೇನೆಯಿಂದ ಭಾರತೀಯ ವಿದ್ಯಾರ್ಥಿಗಳ ಒತ್ತೆಯಾಳು" ಮೋದಿಗೆ ತಿಳಿಸಿದ ಪುಟಿನ್!
ಹೀಗಾಗಿ, ಇದೀಗ ಉಕ್ರೇನ್‌ ತಮ್ಮ ಕೈವಶವಾಗುತ್ತಲೇ, ಮರಳಿ ವಿಕ್ಟರ್‌ ಅವರನ್ನು ಉಕ್ರೇನ್‌ಗೆ ಕರೆತಂದು ಅವರನ್ನೇ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲು ರಷ್ಯಾ ಯೋಜನೆ ರೂಪಿಸಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಉಕ್ರೇನ್‌ನ ‘ಉಕ್ರೇನ್‌ಸ್ಕಾ ಪ್ರಾವ್ಡಾ’ ಪತ್ರಿಕೆ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ