ಬಾಹ್ಯಾಕಾಶದಲ್ಲಿ ರಷ್ಯಾ ಸಿನಿಮಾ ಶೂಟಿಂಗ್!

Published : May 15, 2021, 01:17 PM ISTUpdated : May 18, 2021, 04:01 PM IST
ಬಾಹ್ಯಾಕಾಶದಲ್ಲಿ ರಷ್ಯಾ ಸಿನಿಮಾ ಶೂಟಿಂಗ್!

ಸಾರಾಂಶ

* ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲ ಚಲನಚಿತ್ರ ಶೂಟಿಂಗ್‌ * ಬಾಹ್ಯಾಕಾಶ ಶೂಟಿಂಗ್‌ಗೆ ನಟಿ, ನಿರ್ದೇಶಕ ಆಯ್ಕೆ * ಬಾಹ್ಯಾಕಾಶದಲ್ಲಿ ರಷ್ಯಾ ಸಿನಿಮಾ ಶೂಟಿಂಗ್!

ಮಾಸ್ಕೋ(ಮೇ.15): ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹಲವಾರು ಚಿತ್ರಗಳು ಹಾಲಿವುಡ್‌ನಲ್ಲಿ ಈಗಾಗಲೇ ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲೇ ಅದರಲ್ಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಚಲನಚಿತ್ರವೊಂದರ ಶೂಟಿಂಗ್‌ಗೆ ನಿರ್ಧರಿಸಲಾಗಿದೆ. ಜೊತೆಗೆ ಈ ಚಿತ್ರೀಕರಣದಲ್ಲಿ ಭಾಗಿಯಾಗುವ ನಾಯಕ ನಟಿ ಮತ್ತು ನಿರ್ದೇಶಕರನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆಯಾದ ರಾಸ್‌ಕಾಸ್ಮೋಸ್‌ ಆಯ್ಕೆ ಮಾಡಿದ್ದು, ಅವರ ಹೆಸರನ್ನು ಶುಕ್ರವಾರ ಪ್ರಕಟಿಸಿದೆ.

ಅಕ್ಷಯ ತೃತೀಯ ದಿನದಂದು ಪುತ್ರಿಗೆ ಅನ್ನಪ್ರಾಶನ ಮಾಡಿಸಿದ ನಟಿ ರಾಧಿಕಾ ಶ್ರವಂತ್!

‘ಚಾಲೆಂಜ್‌’ ಹೆಸರಿನ ಈ ಚಿತ್ರವನ್ನು ಕ್ಲಿಮ್‌ ಶಿಂಫೆನ್ಕೋ ನಿರ್ದೇಶಿಸಲಿದ್ದು, ನಾಯಕಿಯಾಗಿ ರಷ್ಯಾದ ಖ್ಯಾತ ನಟಿ ಯುಲಿಯಾ ಪೆರೆಸಿಲ್ಡ್‌ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಅ.5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಸೂಯೆಜ್‌ ನೌಕೆಯಲ್ಲಿ ಚಿತ್ರೀಕರಣಕ್ಕಾಗಿ ತೆರಳಲಿದ್ದಾರೆ.

"

ತರಬೇತಿ:

ಈಗಾಗಲೇ ಕೆಲ ಆರಂಭಿಕ ತರಬೇತಿ ಪಡೆದು ಅದರಲ್ಲಿ ಉತ್ತೀರ್ಣರಾಗಿರುವ ಇಬ್ಬರಿಗೂ ಜೂನ್‌ 5ರಿಂದ, ಶೂನ್ಯ ಗುರುತ್ವಾಕರ್ಷಣೆ ಇರುವ ತರಬೇತಿ ವಿಮಾನದಲ್ಲಿ ಬಾಹ್ಯಾಕಾಶ ನಿಲ್ದಾಣದ ಕೃತಕ ವಾತಾವರಣವನ್ನು ಸೃಷ್ಟಿಸಿ ಅಲ್ಲಿ ಚಿತ್ರೀಕರಣ ನಡೆಸುವ ಕುರಿತು ತರಬೇತಿ ನೀಡಲಾಗುತ್ತಿದೆ. ಚಿತ್ರೀಕರಣದ ಬಳಿಕ ಅ.18ರಂದು ಪೆರೆಸಿಲ್ಡ್‌ ಹಾಗೂ ಶಿಂಫೆನ್ಕೋ ಭೂಮಿಗೆ ಮರಳಲಿದ್ದಾರೆ. ಮಹಿಳಾ ಸರ್ಜನ್‌ವೊಬ್ಬಳು ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗೆ ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿ ಪುನಃ ಭೂಮಿಗೆ ಮರಳುವ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ