Russia-Ukraine War: ಉಕ್ರೇನ್‌ಗೆ ಸಹಾಯ ಮಾಡಿದ್ರೆ, ಪರಿಣಾಮ ಖಂಡಿತ..! ಇಸ್ರೇಲ್‌ಗೆ ಖಡಕ್‌ ಎಚ್ಚರಿಕೆ ನೀಡಿದ ರಷ್ಯಾ!

By Santosh NaikFirst Published Oct 30, 2022, 5:30 PM IST
Highlights

ಎಂಟು ತಿಂಗಳಿನಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಕೊನೆಗೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಇತ್ತೀಚಿಗೆ ಇಸ್ರೇಲ್ ಉಕ್ರೇನ್‌ಗೆ ಮಿಲಿಟರಿ ನೆರವು ನೀಡಿದೆ.  ಅದರ ಮೇಲೆ ರಷ್ಯಾ ಪ್ರಧಾನಿ ಇಸ್ರೇಲ್ ಮಿಲಿಟರಿ ನೆರವು ನೀಡುವುದರಿಂದ ರಷ್ಯಾ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.
 

ನವದೆಹಲಿ (ಅ. 30): ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆ ರಷ್ಯಾ ಇಸ್ರೇಲ್‌ಗೆ ಕಠಿಣ ಸ್ವರದಲ್ಲಿ ಎಚ್ಚರಿಕೆ ನೀಡಿದೆ. ಉಕ್ರೇನ್‌ಗೆ ಇಸ್ರೇಲ್ ಮಿಲಿಟರಿ ನೆರವು ನೀಡುವುದು ರಷ್ಯಾ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಗಂಭೀರವಾಗಿ ಹಾಳುಮಾಡುತ್ತದೆ ಎಂದು ರಷ್ಯಾದ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಎಚ್ಚರಿಸಿದ್ದಾರೆ. ಇತ್ತೀಚೆಗೆ, ಇರಾನ್ ಮೇಲ್ಮೈಯಿಂದ ಮೇಲ್ಮೈ ದಾಳಿ ಮಾಡಬಲ್ಲ ಕ್ಷಿಪಣಿಗಳನ್ನು ಒದಗಿಸುವ ಮೂಲಕ ರಷ್ಯಾಕ್ಕೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. ಇದರ ನಂತರ, ಉಕ್ರೇನ್‌ಗೆ ಸಹಾಯ ಮಾಡುವಂತೆ ಪಾಶ್ಚಿಮಾತ್ಯ ದೇಶಗಳಿಂದ ಇಸ್ರೇಲ್‌ನ ಮೇಲೆ ನಿರಂತರ ಒತ್ತಡವಿತ್ತು. ಈ ಬೆಳವಣಿಗೆಗಳ ಮಧ್ಯೆ, ಇಸ್ರೇಲ್ ಉಕ್ರೇನ್ ದೇಶಕ್ಕೆ ವಾಯು ರಕ್ಷಣಾ ವ್ಯವಸ್ಥೆ ಮತ್ತು ಮಿಲಿಟರಿ ನೆರವು ನೀಡಿತು. ಇಸ್ರೇಲ್ ಇಲ್ಲಿಯವರೆಗೆ ಉಕ್ರೇನ್‌ಗೆ ಅಂತಹ ಸಹಾಯವನ್ನು ನೀಡಿದ್ದನ್ನು ನಿರಾಕರಿಸಿದೆ, ಆದ್ದರಿಂದ ಸಿರಿಯಾದಲ್ಲಿ ಇಸ್ರೇಲಿ ಪಡೆಗಳ ದಾಳಿಯನ್ನು ರಷ್ಯಾ ತಡೆ ಒಡ್ಡಿಲ್ಲ. ಆದರೆ ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕ ರಕ್ಷಣಾ ವ್ಯವಸ್ಥೆಯ ವಿಷಯದಲ್ಲಿ ಕನಿಷ್ಠ ಪಕ್ಷ ಉಕ್ರೇನ್‌ಗೆ ಸಹಾಯ ಮಾಡುವಂತೆ ಇಸ್ರೇಲ್‌ಗೆ ಒತ್ತಡ ಹೇರುತ್ತಿದ್ದವು. ಆ ಬಳಿಕ ಇಸ್ರೇಲ್‌ನ ಸಾಗರೋತ್ತರ ಸಚಿವ ನಾಚ್‌ಮನ್ ಶಾಯ್ ಅವರು ಉಕ್ರೇನ್‌ಗೆ ಮಿಲಿಟರಿ ನೆರವು ಘೋಷಣೆ ಮಾಡಿದ್ದರು.

ಇರಾನ್ ರಷ್ಯಾಕ್ಕೆ ಡ್ರೋನ್ ಸಹಾಯವನ್ನು ನೀಡುತ್ತಿದೆ ಮತ್ತು ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿಗಳನ್ನು ತಲುಪಿಸಲು ತಯಾರಿ ನಡೆಸುತ್ತಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಇಸ್ರೇಲ್ ಸಚಿವ ನಾಮ್‌ಚಾನ್ ಶಾಯ್ ಅವರು ಅಮೆರಿಕ ಮತ್ತು ನ್ಯಾಟೋ ದೇಶಗಳಂತೆ ಉಕ್ರೇನ್‌ಗೆ ಮಿಲಿಟರಿ ಸಹಾಯವನ್ನು ನೀಡುವ ಸಮಯ ಈಗ ಬಂದಿದೆ ಎಂದು ಆ ಬಳಿಕ ಹೇಳಿದ್ದರು. ರಷ್ಯಾ ಬಳಸುತ್ತಿರುವ ಇರಾನ್ ಡ್ರೋನ್‌ಗಳ ಕುರಿತು ಮೂಲ ಮಾಹಿತಿಯನ್ನು ಇಸ್ರೇಲ್ ಉಕ್ರೇನ್‌ನೊಂದಿಗೆ ಹಂಚಿಕೊಂಡಿದೆ ಎಂದು ವರದಿ ಹೇಳಿದೆ.

ಇರಾನ್‌ನ ನಿರ್ಧಾರದಿಂದ ಹೆಚ್ಚಾದ ಇಸ್ರೇಲ್‌ ಆತಂಕ: ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಇರಾನ್ ಭಾಗಿಯಾಗಿರುವುದು ಇಸ್ರೇಲ್‌ನ ಕಳವಳವನ್ನು ಹೆಚ್ಚಿಸಿದೆ. ರಷ್ಯಾಗೆ ಇರಾನ್‌ ಡ್ರೋನ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒದಗಿಸಿದೆ ಎಂಬ ಊಹಾಪೋಹಗಳಿವೆ. ಈ ಕಾರಣಕ್ಕಾಗಿ, ಈ ಯುದ್ಧದಲ್ಲಿ ತನ್ನ ಸ್ಥಾನವನ್ನು ಸ್ಪಷ್ಟಪಡಿಸಲು ಇಸ್ರೇಲ್ ಒತ್ತಡಕ್ಕೆ ಒಳಗಾಯಿತು. ಇರಾನ್‌ನಿಂದ ರಷ್ಯಾ ಸಹಾಯ ಪಡೆಯುತ್ತಿರುವುದು ಇರಾನ್‌ನ ಶಕ್ತಿ ಮತ್ತು ದೌರ್ಬಲ್ಯಕ್ಕೆ ಉದಾಹರಣೆಯಾಗಿದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳುತ್ತಾರೆ, ಇದು ವರ್ಷಗಳಿಂದ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದೆ.

ಅದಾನಿಯ ನಿಯಂತ್ರಣದಲ್ಲಿ ಇಸ್ರೇಲ್ ಬಂದರು: ಚೀನಾ ಸಿಲ್ಕ್ ಅಸ್ತ್ರಕ್ಕೆ ಎಳ್ಳುನೀರು..!

ಇಸ್ರೇಲಿಗರೇ ಹೆಚ್ಚಿರುವ ಕೀವ್‌ ಮೇಲೆ ರಷ್ಯಾ ಬಾಂಬ್‌ ದಾಳಿ: ಶೇ. 80ರಷ್ಟು ಇಸ್ರೇಲ್‌ ಜನಸಂಖ್ಯೆಯೇ ಇರುವ ಕೀವ್‌ ನಗರದ ಮೇಲೆ ರಷ್ಯಾ ಬಾಂಬ್‌ ದಾಳಿ ಮಾಡಿದ್ದನ್ನು ಇಸ್ರೇಲ್‌ ಖಂಡನೆ ಮಾಡಿತ್ತು.  ಅದೇ ಸಮಯದಲ್ಲಿ, ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್‌ನಲ್ಲಿ ಉಕ್ರೇನಿಯನ್ ರಾಯಭಾರ ಕಚೇರಿ ನಡೆಸಿದ ಸಮೀಕ್ಷೆಯ ಪ್ರಕಾರ, 80 ಪ್ರತಿಶತಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಉಕ್ರೇನ್ ಅನ್ನು ಬೆಂಬಲಿಸಿದ್ದು ಬೆಳಕಿಗೆ ಬಂದಿತ್ತು. ಇರಾನ್ ಡ್ರೋನ್‌ಗಳ ಸಹಾಯದಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಕೆಲವು ಇಸ್ರೇಲಿ ನಾಯಕರು ಉಕ್ರೇನ್‌ಗೆ ಹೆಚ್ಚಿನ ಮಿಲಿಟರಿ ನೆರವು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಸಿರಿಯಾದಲ್ಲಿರುವ ರಷ್ಯಾದ ಪಡೆಗಳಿಗೆ ಹೆದರಿ ಇಸ್ರೇಲ್ ಸೇನಾ ನೆರವು ನೀಡುವುದನ್ನು ತಪ್ಪಿಸುತ್ತಿದೆ. ಇಸ್ರೇಲ್‌ನ ವಿದೇಶಾಂಗ ಸಚಿವಾಲಯವು ಉಕ್ರೇನ್‌ನಲ್ಲಿ ವಾಸಿಸುವ ಇಸ್ರೇಲಿ ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿದ್ದು, ಉಕ್ರೇನ್ ತೊರೆಯುವಂತೆ ಸಲಹೆ ನೀಡಿದೆ.

ಇಸ್ಲಾಮಿಕ್‌ ಜಿಹಾದ್‌ಗೆ ಯತ್ನಿಸಿದ ಸಂಘಟನೆಯ ಮೇಲೆ ಇಸ್ರೇಲ್‌ ಅಪರೇಷನ್‌ ಬ್ರೇಕಿಂಗ್‌ ಡಾನ್‌!

ಇಸ್ರೇಲ್‌ ಹಲವಾರು ದೇಶಗಳಿಗೆ ಯುದ್ಧೋಪಕರಣಗಳನ್ನು ರಫ್ತು ಮಾಡುತ್ತದೆ. ರಷ್ಯಾ ದೇಶವು ಇರಾನ್‌ನಿಂದ ಬೆಂಬಲ ಪಡೆಯುತ್ತಿದೆ. ಇದೇ ಕಾರಣಕ್ಕಾಗಿ ಇಸ್ರೇಲ್‌ ದೇಶವು ಉಕ್ರೇನ್‌ಗೆ ಬೆಂಬಲ ನೀಡಲು ಸಜ್ಜಾಗಿದೆ. ಆದರೆ, ಸಿರಿಯಾ ಹಾಗೂ ಲೆಬನಾನ್‌ನಲ್ಲಿ ಇಸ್ರೇಲ್‌ ಪಡೆಗಳು ಹೋರಾಟ ನಡೆಸುತ್ತಿವೆ. ಹಾಗೇನಾದರೂ ಉಕ್ರೇನ್‌ಗೆ ಬೆಂಬಲ ನೀಡಿದಲ್ಲಿ ಈ ಎರಡು ದೇಶಗಳಲ್ಲಿ ನಡೆಯುತ್ತಿರುವ ಇಸ್ರೇಲ್‌ನ ಕಾರ್ಯಾಚರಣೆಗೆ ಕಷ್ಟವಾಗಬಹುದು ಎನ್ನುವ ಅಂದಾಜಿನಲ್ಲಿ ಇಸ್ರೇಲ್‌ ಇದೆ. ಇನ್ನೊಂದೆಡೆ ಪಾಶ್ಚಿಮಾತ್ಯ ದೇಶಗಳು ಇಸ್ರೇಲ್‌, ಉಕ್ರೇನ್‌ಗೆ ಮಿಲಿಟರಿ ಬೆಂಬಲ ನೀಡಬೇಕೆಂದು ಒತ್ತಾಯಿಸಿವೆ. ಒಟ್ಟಾರೆ, ಇಸ್ರೇಲ್‌ ಪರಿಸ್ಥಿತಿ ಅಡ್ಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತಾಗಿದೆ.

click me!