ಕ್ರೇನ್ ಮೂಲಕ ಕೋವಿಡ್ ರೋಗಿಯ ಸ್ಥಳಾಂತರಿಸಿದ ಚೀನಾ: ವಿಡಿಯೋ ವೈರಲ್

By Anusha KbFirst Published Oct 30, 2022, 1:09 PM IST
Highlights

ದೇಶದಲ್ಲಿ ಶೂನ್ಯ ಕೋವಿಡ್ (Zero covid) ಗುರಿ ತಲುಪಲು ಮುಂದಾಗಿರುವ ಚೀನಾ(China) ಇದಕ್ಕಾಗಿ ಇನ್ನಿಲ್ಲದ ಸಾಹಸ ಮಾಡಿ ಪ್ರಜೆಗಳನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಈಗ ಚೀನಾದೆಂದು ಹೇಳಲಾದ ಆದರೆ ಖಚಿತವಾಗದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ (Viral video) ಆಗಿದೆ.

ಬೀಜಿಂಗ್: ಇಡೀ ಪ್ರಪಂಚಕ್ಕೆ ಕೋವಿಡ್ ಹಂಚಿ ಮಜಾ ನೋಡಿದ ಚೀನಾಕ್ಕೆ ಕೋವಿಡ್‌ನ ಕಬಂಧ ಬಾಹುಗಳಿಂದ ಇನ್ನು ಹೊರಬರಲು ಸಾಧ್ಯವಾಗಿಲ್ಲ. ಕೋವಿಡ್ ನಿರ್ಬಂಧಗಳು ಚೀನಾದ ಹಲವೆಡೆ ಇನ್ನು ಜಾರಿಯಲ್ಲಿದ್ದು, ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಪ್ರಜೆಗಳಿಗೆ ಹಿಂಸೆ ನೀಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಚೀನಾದ ಕೋವಿಡ್ ಐಸೋಲೇಷನ್ ಸೆಂಟರ್‌ಗಳ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚೀನಾದ ಕಪಟ ಮುಖವನ್ನು ಬಯಲಿಗೆಳೆದಿತ್ತು. 

ದೇಶದಲ್ಲಿ ಶೂನ್ಯ ಕೋವಿಡ್ (Zero covid) ಗುರಿ ತಲುಪಲು ಮುಂದಾಗಿರುವ ಚೀನಾ(China) ಇದಕ್ಕಾಗಿ ಇನ್ನಿಲ್ಲದ ಸಾಹಸ ಮಾಡಿ ಪ್ರಜೆಗಳನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಈಗ ಚೀನಾದೆಂದು ಹೇಳಲಾದ ಆದರೆ ಖಚಿತವಾಗದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ (Viral video) ಆಗಿದ್ದು, ಇದರಲ್ಲಿ ಕೋವಿಡ್ ರೋಗಿಯೋರ್ವನನ್ನು ಕ್ರೇನ್ (Crane) ಮೂಲಕ ಸ್ಥಳಾಂತರಿಸುವ ದೃಶ್ಯ ಸೆರೆ ಆಗಿದೆ. 

中国式现代化。【方老师,投稿一个防疫大革命的荒谬视频。一个阳性患者被吊机吊出小区,因为他们不敢进去接,也不想患者的细菌留在地板上,这样能保证最小的接触面积。】 pic.twitter.com/2BM3Afm3V6

— 方舟子 (@fangshimin)

 

ಈ ವಿಡಿಯೋವನ್ನು ಘಟನೆ ನಡೆದ ಸ್ಥಳದ ಬಿಲ್ಡಿಂಗ್‌ ಒಂದರ ಕಿಟಿಕಿಯಿಂದ ಸೆರೆ ಹಿಡಿಯಲಾಗಿದೆ. ಇದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಅಧಿಕಾರಿಗಳು ವ್ಯಕ್ತಿಯೋರ್ವನನ್ನು ಕ್ರೇನ್‌ ಮೂಲಕ ಸ್ಥಳಾಂತರ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ನಾನು ಭಾರತದ ದೊಡ್ಡ ಅಭಿಮಾನಿ ಎಂದ China ಉನ್ನತ ಅಧಿಕಾರಿ..!

ಚೀನಾದ ಅಧ್ಯಕ್ಷನಾಗಿ ಇತ್ತೀಚೆಗೆ ಪುನರಾಯ್ಕೆಯಾಗಿರುವ ಕ್ಸಿ ಜಿಂಪಿಂಗ್ (Xi Jinping), ಈಗಾಗಲೇ ತಮ್ಮ ಶೂನ್ಯ ಕೋವಿಡ್ ನೀತಿಯನ್ನು ಪ್ರಕಟಿಸಿದ್ದು, ಎಲ್ಲೆಲ್ಲಿ ಕೋವಿಡ್ ಇದೆಯೋ ಅಲ್ಲೆಲ್ಲಾ ಕಠಿಣವಾದ ಕೋವಿಡ್ ಲಾಕ್‌ಡೌನ್‌ನ್ನು ಹೇರಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಹೇರಿರುವ ಶಿಸ್ತುಬದ್ಧವಾದ, ಕಠಿಣ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.


 
ಈ ಕಠಿಣ ಲಾಕ್‌ಡೌನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಚೀನಾ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಚೀನಾ ಪ್ರಪಂಚದ ಬಹುದೊಡ್ಡ ಆರ್ಥಿಕತೆಯಾಗಿದ್ದು, ಇದರಿಂದ ಜಾಗತಿಕ ಆರ್ಥಿಕತೆಯ (global economy)ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಪ್ರಪಂಚದಲ್ಲಿಯೇ ಮೊದಲ ಬಾರಿ ಕೋವಿಡ್ ಪ್ರಕರಣ ಪತ್ತೆಯಾದ ಚೀನಾದ ವುಹಾನ್ (Wuhan) ಪ್ರಾಂತ್ಯದಲ್ಲೂ ಮತ್ತೆ ಕೋವಿಡ್ ಲಾಕ್‌ಡೌನ್ ಹೇರಲಾಗಿದೆ. ಅಕ್ಟೋಬರ್ 26 ರಿಂದ ಅಕ್ಟೋಬರ್ 30 ರವರೆಗೆ ಈ ವುಹಾನ್ ಪ್ರಾಂತ್ಯದ  800,000 ಕ್ಕೂ ಹೆಚ್ಚು ಜನರಿಗೆ ಮನೆ ಬಿಟ್ಟು ಹೊರಡದಂತೆ ಸೂಚನೆ ನೀಡಲಾಗಿತ್ತು. 

ಇದು ಜೈಲಲ್ಲ ಗುರು... ಚೀನಾದ ಕೋವಿಡ್ ಐಸೊಲೇಷನ್ ಸೆಂಟರ್

ಒಟ್ಟಿನಲ್ಲಿ ಜಗತ್ತಿಗೆಲ್ಲಾ ಕೋವಿಡ್ ಹಂಚಿದ ಚೀನಾದ ಸ್ಥಿತಿ ಈಗ ತಾನೇ ತೋಡಿದ ಖೆಡ್ಡಕ್ಕೆ ತಾನೇ ಬಿದ್ದಂತಾಗಿದೆ. 
 

click me!