Russia Ukraine War ಸಂಧಾನ ಮಾತುಕತೆಯಲ್ಲಿ ಉಕ್ರೇನ್‌ ಪರ ರಷ್ಯಾ ಗೂಢಚರ!

Kannadaprabha News   | Asianet News
Published : Mar 07, 2022, 04:00 AM IST
Russia Ukraine War ಸಂಧಾನ ಮಾತುಕತೆಯಲ್ಲಿ ಉಕ್ರೇನ್‌ ಪರ ರಷ್ಯಾ ಗೂಢಚರ!

ಸಾರಾಂಶ

-ಸಂಧಾನ ಮಾತುಕತೆಗೂ ಮುನ್ನ ಗುಂಡಿಕ್ಕಿ ಹತ್ಯೆ - ಡೆನಿಸ್ ಕಿರೀವ್ ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಕ್ರೇನ್ ಸೀಕ್ರೆಟ್ ಸರ್ವೀಸ್ - ಟೆಲಿಫೋನ್ ಸಂವಾದ ಸೇರಿದಂತೆ ಇತರ ಸಾಕ್ಷಿ ಆಧರಿಸಿ ಕ್ರಮ

ಕೀವ್‌ (ಮಾ.7): ಉಕ್ರೇನಿನ (Ukraine)ಪರವಾಗಿ ಸಂಧಾನ ಮಾತುಕತೆಯಲ್ಲಿ ಹಿರಿಯ ಅಧಿಕಾರಿಯನ್ನೇ ರಷ್ಯಾ (Russia) ತನ್ನ ಗೂಢಚರನಾಗಿ (Spy) ನೇಮಿಸಿಕೊಂಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಷಯ ಖಚಿತವಾದ ಬೆನ್ನಲ್ಲೇ ರಷ್ಯಾದ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪ ಹೊತ್ತಿದ್ದ ಡೆನಿಸ್‌ ಕಿರೀವ್‌ (Denis Kireev) ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಗೂಢಚರ್ಯೆ ನಡೆಸುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ ಉಕ್ರೇನಿನ ಭದ್ರತಾ ಪಡೆಗಳು (security service of ukraine ) ಡೆನೀಸ್‌ನನ್ನು ಬಂಧಿಸಲು ಹೋಗಿದ್ದರು. ಆಗ ಪ್ರತಿರೋಧ ಒಡ್ಡಿದ್ದಕ್ಕಾಗಿ ನಡೆದ ಗುಂಡಿನ ಚಕಮಕಿಯಲ್ಲಿ ಡೆನೀಸ್‌ ಮೃತಪಟ್ಟಿದ್ದಾನೆ ಎಂದು ಉಕ್ರೇನಿನ ಸಂಸದರೇ ಹೇಳಿದ್ದಾರೆ. ರಷ್ಯಾದ ದಿನಪತ್ರಿಕೆ ಪ್ರಾವ್ಡಾ ಕೂಡಾ ಉಕ್ರೇನಿನ ಭದ್ರತಾ ಪಡೆಗಳ ಬಳಿ ಡೆನೀಸ್‌ ಗೂಢಚರ್ಯೆ ನಡೆಸುತ್ತಿರುವ ಬಗ್ಗೆ ಟೆಲಿಫೋನ್‌ ಸಂವಾದ ಸೇರಿದಂತೆ ಹಲವಾರು ಸಾಕ್ಷಿಗಳಿದ್ದವು. ಹೀಗಾಗಿ ಭದ್ರತಾಪಡೆಗಳೇ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿವೆ ಎಂದು ಆರೋಪಿಸಿದೆ.

ಉಕ್ರೇನ್‌ನಿಂದ 15 ಲಕ್ಷ ಜನರ ವಲಸೆ
ಕೀವ್‌:
ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯತ್ತಿರುವ ಯುದ್ದಭೀತಿ ಹಿನ್ನೆಲೆಯಲ್ಲಿ, ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ವಲಸೆ ಹೋದವರ ಸಂಖ್ಯೆ 15 ಲಕ್ಷ ದಾಟಿದೆ ಎಂದು ವಿಶ್ವಸಂಸ್ಥೆಯ (United Nations) ನಿರಾಶ್ರಿತರ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಇದು ಕಳೆದೊಂದು ಶತಮಾನದಲ್ಲೇ ಸಂಭವಿಸಿದ ಅತಿದೊಡ್ಡ ವಲಸೆ ಬಿಕ್ಕಟ್ಟಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಅದು ಹೇಳಿದೆ. ಯುದ್ಧದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನಿ ನಾಗರಿಕರು ನೆರೆಯ ಸುರಕ್ಷಿತ ದೇಶಗಳಾದ ಪೋಲೆಂಡ್‌, ರೋಮೆನಿಯಾ, ಸ್ಲೋವಾಕಿಯಾ ಮತ್ತಿತ್ತರ ದೇಶಗಳಿಗೆ ವಲಸೆ ಹೋಗಿದ್ದಾರೆ.

ಸೇನಾ ಸಮವಸ್ತ್ರ, ಯುದ್ಧ ಭೂಮಿಯಲ್ಲೇ ಮದುವೆ:
ಕೀವ್‌:
ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ದ ನಡೆಯುತ್ತಿರವ ಸಂದರ್ಭದಲ್ಲೇ ಉಕ್ರೇನ್‌ ರಾಷ್ಟ್ರೀಯ ಗಾರ್ಡ್‌ಗೆ ಸೇರಿದ ಇಬ್ಬರು ಸೈನಿಕರು ರಿವ್ನೆ (Rivne) ಪ್ರದೇಶದಲ್ಲಿ ವಿವಾಹವಾಗಿದ್ದಾರೆ. ಉಕ್ರೇನ್‌ನ ನ್ಯಾಷನಲ್‌ ಗಾರ್ಡ್‌ನ ಟ್ವಿಟರ್‌ ಖಾತೆಯಲ್ಲಿ ಈ ಜೋಡಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನವ ಜೋಡಿಗಳಿ ಇರುವ ಬಿಳಿ ಉಡುಗೆ, ಪೋಷಕರು, ಸ್ನೇಹಿತರು ಇಲ್ಲದೇ ಕೇವಲ ಪುಷ್ಪಗುಚ್ಚದೊಂದಿಗೆ ವಿವಾಹವಾಗಿದ್ದಾರೆ. ಅವರು ಪ್ರಮಾಣ ಮಾಡಿದರು, ತಬ್ಬಿಕೊಂಡರು, ಮತ್ತು ಉಕ್ರೇನ್‌ ಅನ್ನು ರಕ್ಷಿಸಲು ಹೋದರು ಎಂದು ನ್ಯಾಷನಲ್‌ ಗಾರ್ಡ್‌ ತಮ್ಮ ಟ್ಟಿಟರ್‌ನಲ್ಲಿ ಹಂಚಿಕೊಂಡಿದೆ.

Russia Ukraine war : ಗರ್ಭಿಣಿ ಪತ್ನಿಯನ್ನು ಇಲ್ಲಿಯೇ ಬಿಟ್ಟು ಭಾರತಕ್ಕೆ ಹೋಗಲಾರೆ!
ಯುದ್ಧ ನಿಲ್ಲಿಸಲು ನೆರವಾಗಿ: ಮತ್ತೆ ಮೋದಿಗೆ ಮನವಿ
ಕೀವ್‌:
ರಷ್ಯಾ ನಡೆಸುತ್ತಿರುವ ಯುದ್ಧ ನಿಲ್ಲಿಸಲು ಮುಂದಾಗುವಂತೆ ಉಕ್ರೇನ್‌ ಮತ್ತೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಮೊರೆ ಇತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ‘ ‘ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ರಾಷ್ಟ್ರಗಳು ಸೇರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆ ಯುದ್ಧ ನಿಲ್ಲಿಸುವಂತೆ ಮಾತುಕತೆ ನಡೆಸಲು ಮನವಿ ಮಾಡಬೇಕು. ಭಾರತವು ಉಕ್ರೇನಿನ ಕೃಷಿ ಉತ್ಪನ್ನಗಳ ಅತಿದೊಡ್ಡ ಗ್ರಾಹಕನಾಗಿದೆ. ಯುದ್ಧವು ಇದೇ ರೀತಿ ಮುಂದುವರೆದರೆ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಯುದ್ಧ ನಿಂತರೇ ಎಲ್ಲರಿಗೂ ಒಳಿತು.

Russia Ukraine war : ಖಾರ್ಕೀವ್ ನ ಪರಮಾಣು ಸಂಶೋಧನಾ ಕೇಂದ್ರದ ಮೇಲೆ ರಷ್ಯಾ ರಾಕೆಟ್ ದಾಳಿ
ಈ ನಿಟ್ಟಿನಲ್ಲಿ ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ರಾಷ್ಟ್ರಗಳು ಪುಟಿನ್‌ ಜೊತೆ ಮಾತುಕತೆ ನಡೆಸಲು ಪ್ರಧಾನಿ ಮೋದಿಗೆ ಒತ್ತಾಯಿಸಬೇಕು. ಪುಟಿನ್‌ಗೆ ಯುದ್ಧವು ಎಲ್ಲರ ಹಿತಾಸಕ್ತಿಯ ವಿರುದ್ಧವಾಗಿದೆ. ರಷ್ಯಾದಲ್ಲಿನ ಜನರು ಯುದ್ಧವನ್ನು ಬಯಸುತ್ತಿಲ್ಲ ಎಂದು ವಿವರಿಸುವಂತೆ ತಿಳಿಸಬೇಕು. ಭಾರತೀಯರೆಲ್ಲ ಸೇರಿ ಭಾರತದಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿಕೊಳ್ಳಬೇಕು’ ಈ ಮೊದಲು ಭಾರತದಲ್ಲಿನ ಉಕ್ರೇನ್‌ ರಾಯಭಾರಿ ಕೂಡಾ ಇದೇ ರೀತಿಯ ಮನವಿ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ