ಮಾಸ್ಕೋ: ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಈ ಬಾರಿ ದುಬಾರಿ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಂಗಲೆಯನ್ನು ಪುಟಿನ್ ಇತ್ತೀಚಿಗೆ 982 ಕೋಟಿ ರು. ನೀಡಿ ಖರೀದಿಸಿದ್ದು, ತಮ್ಮ ಜಿಮ್ನಾಸ್ಟ್ ಪ್ರೇಯಸಿಯೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಬಂಗಲೆ ಮಾಸ್ಕೋದ ವಾಯವ್ಯ ಭಾಗದಲ್ಲಿದ್ದು, ರಾಜಕೀಯ ಲಂಚದಿಂದ (Political bribe) ಈ ಬಂಗಲೆಯನ್ನು ಖರೀದಿಸಿದ್ದಾರೆ ಹಾಗೂ ತಮ್ಮ ಪ್ರೇಯಸಿ ಅಲಿನಾ ಕಬೇವಾ (Alina Kabaeva) ಜೊತೆ ವಾಸಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸುಮಾರು 13 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಬಂಗಲೆಯ 2020ರಲ್ಲಿ ನಿರ್ಮಿಸಲು ಆರಂಭಿಸಲಾಗಿತ್ತು. ಇದರ ನಿರ್ಮಾಣಕ್ಕೆ 2 ವರ್ಷ ತಗುಲಿದ್ದು, ಇಲ್ಲಿ ತಮ್ಮ ಪ್ರೇಯಸಿ ಹಾಗೂ ಮಕ್ಕಳೊಂದಿಗೆ ಪುಟಿನ್ ಇದ್ದಾರೆ. ಅಲ್ಲದೇ ಕಬೇವಾ ಅವರ ಮಹಿಳಾ ಸಂಬಂಧಿಗಳು ಈ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಬ್ಬಬ್ಬಾ.. 70 ಎಕರೆಯಲ್ಲಿದೆ ರಷ್ಯಾ ಅಧ್ಯಕ್ಷ ಪುಟಿನ್ ವಾಸಿಸೋ ಗೋಲ್ಡನ್ ಪ್ಯಾಲೇಸ್
ಈ ಬಂಗಲೆಯ ಕೆಲವು ಫೋಟೋಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಲಾನ್‌ನಲ್ಲಿ ಚಿನ್ನದ ಕುರ್ಚಿಗಳನ್ನು ಇಡಲಾಗಿದೆ. ಅಲ್ಲದೇ ಮನೆಯ ಒಳಾಂಗಣವನ್ನು ಸಹ ಚಿನ್ನದಿಂದ ಅಲಂಕಾರ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
ಜಂಟಿ ಹೇಳಿಕೆ ಬಿಡುಗಡೆಗೆ ಜಿ20 ವಿಫಲ: ಕೆಲ ಅಂಶಗಳಿಗೆ ರಷ್ಯಾ, ಚೀನಾ ವಿರೋಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ