ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡೆ, ನಿರ್ಧಾರವನ್ನು ಟೀಕಿಸುತ್ತಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಅಲೆಕ್ಸಿ ಸಾವು ಇದೀಗ ಹಲವು ಅನುಮಾಗಳಿಗೆ ಎಡೆಮಾಡಿದೆ. ಇಷ್ಟೇ ಅಲ್ಲ ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ರಿಶಿ ಸುನಕ್ ಸೇರಿದಂತೆ ಹಲವು ಪ್ರಮುಖ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.
ಮಾಸ್ಕೋ(ಫೆ.16) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ ಟೀಕಾಕಾರರು, ವಿಮರ್ಷಕರು ಮೇಲೆ ರಹಸ್ಯವಾಗಿ ದಾಳಿಗಳು ನಡೆಯುತ್ತದೆ ಅನ್ನೋ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡುವ ಘಟನೆ ಇದೀಗ ನಡೆದಿದೆ. ವ್ಲಾದಿಮಿರ್ ಪುಟಿನ್ ನಿರ್ಧಾರಗಳನ್ನು, ನೀತಿಗಳನ್ನು ಬಹಿರಂಗವಾಗಿ ಟೀಕಿಸಿ, ವಿಮರ್ಷಿಸಿದ್ದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಜೈಲಿನಲ್ಲಿ ನಿಧನರಾಗಿದ್ದಾರೆ. 19 ವರ್ಷಗಳ ಸೆರೆಮೆನವಾಸ ಶಿಕ್ಷೆ ಅನುಭವಿಸುತ್ತಿರುವ ಅಲೆಕ್ಸಿ ಜೈಲಿನಲ್ಲಿ ನಡೆಯುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲೆಕ್ಸಿ ನಿಧನ ಸುದ್ದಿಗೆ ಬ್ರಿಟನ್ ಪ್ರದಾನಿ ರಿಶಿ ಸುನಕ್ ಸೇರಿದಂತೆ ಹಲವು ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.
ಆರ್ಕಿಟಿಕ್ಟ್ ಜೈಲಿನಲ್ಲಿ ಅಲೆಕ್ಸಿ ನಿಧನರಾಗಿದ್ದಾರೆ ಎಂದು ರಷ್ಯಾದ ಫೆಡರಲ್ ಪೆನಿಟೆನ್ಶಿಯರಿ ತಿಳಿಸಿದೆ. ಜೈಲಿನಲ್ಲಿ ನಡೆಯುತ್ತಿರುವಾಗ ಅಲೆಕ್ಸಿ ಅಸ್ವಸ್ಥಗೊಂಡಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಜೈಲಿನ ವೈದ್ಯರ ತಂಡ ನೆರವಿಗೆ ಧಾವಿಸಿದೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲೆಕ್ಸಿ ಬದುಕುಳಿಯಲಿಲ್ಲ. ಅಲೆಕ್ಸಿ ಸಾವಿನ ಕುರಿತು ರಷ್ಯಾದ ತನಿಖಾ ಸಂಸ್ಥೆ ತನಿಖೆ ನಡೆಸುವುದಾಗಿ ಹೇಳಿದೆ.
ಉಕ್ರೇನ್‌ನ 65 ಮಂದಿ ಯುದ್ಧಕೈದಿಗಳಿದ್ದ ರಷ್ಯಾ ವಿಮಾನ ಪತನ
ಅಲೆಕ್ಸಿ ನವಲ್ನಿ ಸೆಕ್ರೆಟರಿ ಕಿರಾ ಯರ್ಮ್ಯಾಶ್ ರಷ್ಯಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲೆಕ್ಸಿ ಸಾವಿನ ಕುರಿತು ನಮ್ಮ ತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಅಲೆಕ್ಸಿ ವಕೀಲ ಖಾರ್ಪ್ ಈಗಾಗಲೇ ಆರ್ಕಿಟಿಕ್ಟ್ ಜೈಲಿಗೆ ತೆರಳಿದ್ದಾರೆ. ಎರಡು ದಿನಗಳ ಹಿಂದೆ ಅಲೆಕ್ಸಿ ಭೇಟಿಯಾಗಿದ್ದ ವಕೀಲರು ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿದ್ದರು. ಅಲೆಕ್ಸಿ ಆರೋಗ್ಯವಾಗಿದ್ದರು. ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ದಿಡೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಅನ್ನೋ ಮಾಹಿತಿಯನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
47 ವರ್ಷದ ಅಲೆಕ್ಸಿ ವಿರೋಧ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ವ್ಲಾದಿಮಿರ್ ಪುಟಿನ್ ಭ್ರಷ್ಟಾಚಾರ, ದುರಾಡಳಿತದ ವಿರುದ್ದ ಬಹಿರಂಗವಾಗಿ ಟೀಕೆ ವ್ಯಕ್ತಪಡಿಸಿದ್ದರು. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪುಟಿನ್ ವಿರುದ್ದ ಟೀಕೆ, ಆಕ್ರೋಶ ಹೊರಹಾಕತ್ತಲೇ ಇದ್ದರು. 2021ರಲ್ಲಿ ಜರ್ಮನಿಯಿಂದ ಮರಳುತ್ತಿದ್ದಂತೆ ಅಲೆಕ್ಸಿಯನ್ನು ಬಂಧಿಸಲಾಗಿತ್ತು. 2021ರಲ್ಲಿ ಅಲೆಕ್ಸಿ ಮೇಲೆ ಹಲವು ಆರೋಪಗಳನ್ನು ಹೊರಿಸಿ ಬಂಧಿಸಲಾಗಿತ್ತು. ಇಷ್ಟೇ ಅಲ್ಲ 19 ವರ್ಷದ ಜೈಲು ಶಿಕ್ಷೆಯನ್ನು ನೀಡಲಾಗಿತ್ತು.
ಕನಿಷ್ಠ 8 ಮಕ್ಕಳ ಹೆರುವಂತೆ ರಷ್ಯಾ ಅಧ್ಯಕ್ಷ ಕರೆ: ಜನಸಂಖ್ಯೆ ಹೆಚ್ಚಿಸಲು ವ್ಲಾಡಿಮಿರ್ ಪುಟಿನ್ ಸಲಹೆ
ಜೈಲಿನಿಂದ ಬಿಡುಗಡೆಯಾಗಲು ಕಾನೂನು ಹೋರಾಟ ತೀವ್ರಗೊಳಿಸಿದ್ದ ಅಲೆಕ್ಸಿಗೆ ಹಂತ ಹಂತವಾಗಿ ಗೆಲುವು ಸಿಕ್ಕಿತ್ತು. ಇದರ ನಡುವೆ ದಿಢೀರ್ ಸಾವು ಇದೀಗ ಹಲವು ಅನುಮಾನಗಳನ್ನು ಮೂಡಿಸಿದೆ.