ಆನ್‌ಲೈನ್ ಖರೀದಿಯಲ್ಲಿ ಇರಲಿ ಎಚ್ಚರ: Amazonನ 20 ಸಾವಿರ ಸಿಬ್ಬಂದಿಗೆ ಕೊರೋನಾ

By Suvarna NewsFirst Published Oct 2, 2020, 12:32 PM IST
Highlights

ಅಮೆಝಾನ್‌ನ 20 ಸಾವಿರ ಸಿಬ್ಬಂದಿಗೆ ಕೊರೋನಾ | ಆನ್‌ಲೈನ್ ಶಾಪಿಂಗ್ ಮಾಡೋವಾಗ ಇರಲಿ ಎಚ್ಚರ

ದೆಹಲಿ(ಅ.02): ಕೊರೋನಾ ಬಂದ ಮೇಲೆ ಬಹಳಷ್ಟು ಜನ ಆನ್‌ಲೈನ್ ಶಾಪಿಂಗ್ ಮೊರೆ ಹೋಗಿದ್ದಾರೆ. ಆದರೆ ಇನ್ನು ಶಾಪಿಂಗ್ ಮಾಡೋವಾಗ ಎಚ್ಚರವಹಿಸೋ ಅಗತ್ಯವಿದೆ. ಅಮೆಝಾನ್‌ನ 20 ಸಾವಿರಷ್ಟು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಮಾರ್ಚ್‌ನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಾಗಿನಿಂದ ಅಮೆಝಾನ್‌ನ 19,800 ಸಿಬ್ಬಂದಿಗೆ ವೈರಸ್‌ ದೃಢಪಟ್ಟಿದೆ. ಅಮೆರಿಕದ ಫುಡ್ ಮಾರ್ಕೆಟ್ ಗ್ರೋಸರಿ ಸೇರಿ 1.37 ಮಿಲಿಯನ್ ಫ್ರಂಟ್‌ಲೈನ್ ಕೆಲಸಗಾರರಲ್ಲಿ ಕೊರೋನಾ ವೈರಸ್‌ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಕಂಡುಬಂದಿದೆ.

ಕೊರೋನಾ ಹೆಚ್ಚಳ: ಕೇರಳದಲ್ಲಿ ನಾಳೆಯಿಂದ ಸೆಕ್ಷನ್ 144

ತಮ್ಮ ಬಗ್ಗೆ ಕಂಪನಿ ಕಾಳಜಿ ವಹಿಸುತ್ತಿಲ್ಲ , ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ ಎಂದು ಅಮೆಝಾನ್ ಕೆಲಸಗಾರರು ಆರೋಪಿಸಿದ ಬೆನ್ನಲ್ಲೇ ಕಂಪನಿ ಸೋಂಕಿತರ ಮಾಹಿತಿ ಬಹಿರಂಗಪಡಿಸಿದೆ.

ಪ್ರತಿದಿನ 650 ಸೈಟ್‌ಗಳಲ್ಲಿ 50 ಸಾವಿರ ಜನರ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಕೊರೋನಾ ಪ್ರಾರಂಭವಾದಾಗಿನಿಂದ ಕಂಪನಿ ಸಿಬ್ಬಂದಿಗೆ ಮಾಹಿತಿ ನೀಡುತ್ತಲೇ ಇದೆ. ಕೊರೋನಾ ಕುರಿತ ಅಗತ್ಯ ಮಾಹಿತಿಗಳನ್ನು ತಿಳಿಸುತ್ತಿದೆ ಎಂದಿದೆ ಕಂಪನಿ.

click me!