24 ದೇಶಗಳಿಗೆ ವ್ಯಾಪಿಸಿದ Omicron, ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ವಿಶ್ವ ಆರೋಗ್ಯ ಸಂಸ್ಥೆ!

By Suvarna NewsFirst Published Dec 2, 2021, 8:33 AM IST
Highlights

* ಕೊರೋನಾ ಹೊಸ ತಳಿ ಒಮಿಕ್ರಾನ್ ಭೀತಿ

* 24 ದೇಶಗಳಿಗೆ ವ್ಯಾಪಿಸಿದ ಒಮಿಕ್ರಾನ್

* ಒಮಿಕ್ರಾನ್ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ

ವಾಷಿಂಗ್ಟನ್(ಡಿ.02): ಕೊರೋನಾ ವೈರಸ್‌ನ (Coronavirus) ಹೊಸ ರೂಪಾಂತರವಾದ ಓಮಿಕ್ರಾನ್ (Omicron) ವಿಶ್ವದಲ್ಲಿ ಬಹಳ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೊಸ ರೂಪಾಂತರವು ಪ್ರಪಂಚದ 24 ದೇಶಗಳಿಗೆ ಹರಡಿದೆ. ಇದರೊಂದಿಗೆ ಡಬ್ಲ್ಯುಎಚ್‌ಒ ಕೊರೋನಾ ಕುರಿತಾಗಿ ಭೀತಿ ಮೂಡಿಸುವ ಹೇಳಿಕೆ ನೀಡಿದೆ. ಹೌದು WHO ಮುಖ್ಯಸ್ಥ ಡಾ. ಟೆಡ್ರೊಸ್ ಘೆಬ್ರೆಯೆಸಸ್ (Dr Tedros Adhanom) ವ್ಯಾಕ್ಸಿನೇಷನ್ ಮತ್ತು ಪರೀಕ್ಷೆಗಳ ಕಡಿಮೆ ಡೇಟಾದ ಕಾರಣ, ಕೊರೋನಾದ ಅನೇಕ ಇತರ ರೂಪಾಂತರಗಳು ಭವಿಷ್ಯದಲ್ಲಿ ಹೊರಹೊಮ್ಮುತ್ತವೆ ಎಂದು ಎಚ್ಚರಿಸಿದ್ದಾರೆ. ಈ ಎರಡು ಕಾರಣಗಳಿಂದ ವಿಷಕಾರಿ ಮಿಶ್ರಣದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದಿದ್ದಾರೆ. ಈ ಕಾರಣದಿಂದಾಗಿ ವೈರಸ್ ಪ್ರವರ್ಧಮಾನಕ್ಕೆ ಬರಲು ಅವಕಾಶವನ್ನು ಪಡೆಯುತ್ತಿದೆ ಮತ್ತು ಅದು ವಿಭಿನ್ನ ರೂಪಾಂತರಗಳಲ್ಲಿ ನಮ್ಮ ಮೇಲೆ ಆಕ್ರಮಣ ಮಾಡುತ್ತಿದೆ. ಓಮಿಕ್ರಾನ್ ಇದಕ್ಕೆ ಉದಾಹರಣೆಯಾಗಿದೆ ಎಂದಿದ್ದಾರೆ.

ಈ ದೇಶಗಳಿಗೆ ವ್ಯಾಪಿಸಿದೆ ಒಮಿಕ್ರಾನ್

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, Omicron ರೂಪಾಂತರಗಳು ಇಲ್ಲಿಯವರೆಗೆ USA, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬೋಟ್ಸ್ವಾನಾ, ಕೆನಡಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಜರ್ಮನಿ, ಹಾಂಗ್ ಕಾಂಗ್, ಇಸ್ರೇಲ್, ಇಟಲಿ, ಜಪಾನ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಪೋರ್ಚುಗಲ್, ರಿಯೂನಿಯನ್, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ , ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ದಕ್ಷಿಣ ಕೊರಿಯಾ ಮತ್ತು ಯುಕೆ ತಲುಪಿದೆ. ಡಾ. ಟೆಡ್ರೊಸ್ ಘೆಬ್ರೆಯೆಸಸ್ (Dr Tedros Adhanom) ಅವರು ಇತರ ಎಲ್ಲ ದೇಶಗಳು ಕೂಡ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಒಮಿಕ್ರಾನ್ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸುತ್ತಿದೆ. ಪ್ರಸರಣದ ಮೇಲೆ ಅದರ ಪರಿಣಾಮ, ಅದರ ತೀವ್ರತೆ ಮತ್ತು ಅದರ ಮೇಲೆ ಪರೀಕ್ಷೆಗಳು, ಲಸಿಕೆಗಳ ಪರಿಣಾಮ ಇನ್ನೂ ಖಚಿತವಾಗಿಲ್ಲ.

Omicron Guidelines:ಮೊದಲ ದಿನ 6 ಮಂದಿಯಲ್ಲಿ ಕೊರೋನಾ ಪತ್ತೆ, ಓಮಿಕ್ರಾನ್ ಪರೀಕ್ಷೆಗೆ ಮಾದರಿ ರವಾನೆ!

ಬಡ ದೇಶಗಳಿಗೆ ಶ್ರೀಮಂತ ದೇಶಗಳ ಸಹಾಯ

ಡಾ. ಟೆಡ್ರೊಸ್ ಘೆಬ್ರೆಯೆಸಸ್ ಅವರು ಬಡ ದೇಶಗಳಿಗೆ ಸಹಾಯ ಮಾಡಲು ಮತ್ತು ಲಸಿಕೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ತಕ್ಷಣವೇ ಒದಗಿಸುವಂತೆ ವಿಶ್ವದ ಎಲ್ಲಾ ರಾಷ್ಟ್ರಗಳ ಬಳಿ ಮನವಿ ಮಾಡಿದ್ದಾರೆ. ಓಮಿಕ್ರಾನ್ ತಳಿಯ ಕೆಲವು ರೂಪಾಂತರಗಳು ಇತರ ಜನರಿಗೆ ಸೋಂಕನ್ನು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿವೆ ಎಂದು WHO ಹೇಳಿದೆ. ಇದರಿಂದ ಮತ್ತೆ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವ ಆತಂಕ ಎದುರಾಗಿದೆ. ಕೊರೋನಾ ವೈರಸ್‌ನ ಹೊಸ ರೂಪಾಂತರವನ್ನು ಓಮಿಕ್ರಾನ್ (B.1.1.529) ಎಂದು ಹೆಸರಿಸಲಾಗಿದೆ. ಈ ರೂಪಾಂತರದಲ್ಲಿ 50 ವಿಧದ ರೂಪಾಂತರಗಳಿವೆ. ಇದು ಸ್ಪೈಕ್ ಪ್ರೋಟೀನ್‌ಗೆ ಸಂಬಂಧಿಸಿದ 30 ರೂಪಾಂತರಗಳನ್ನು ಹೊಂದಿದೆ. ರೂಪಾಂತರದ ಈ ವೈಶಿಷ್ಟ್ಯವು ಹೆಚ್ಚು ಸಾಂಕ್ರಾಮಿಕ ಮತ್ತು ಅಪಾಯಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಬಣ್ಣಿಸಿದೆ.

ಅಪಾಯಕಾರಿ ದೇಶಗಳಿಂದ ಬಂದ 10 ಜನರಿಗೆ ಕೋವಿಡ್‌ ಸೋಂಕು!

 

ಕೋವಿಡ್‌ನ ಒಮಿಕ್ರೋನ್‌ ರೂಪಾಂತರಿ (Covid19 New Variant Omicron) ತಳಿ ಪತ್ತೆಯಾಗಿರುವ ಅಥವಾ ಒಮಿಕ್ರೋನ್‌ ವಿಷಯದಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾದ ‘ಅಟ್‌ ರಿಸ್ಕ್‌’ ದೇಶಗಳಿಂದ ಮಹಾರಾಷ್ಟ್ರಕ್ಕೆ (Maharashtra ಆಗಮಿಸಿದ ಆರು ಮಂದಿ ಮತ್ತು ದೆಹಲಿಗೆ (Delhi) ಆಗಮಿಸಿದ ನಾಲ್ವರಲ್ಲಿ ಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸ್‌ ಪರೀಕ್ಷೆಗೆ ಕಳಿಸಲಾಗಿದೆ. ‘ಕೋವಿಡ್‌ ಪಾಸಿಟಿವ್‌ (Covid19 Positive) ಬಂದ ಆರೂ ಮಂದಿ ರೋಗಲಕ್ಷಣ ಇಲ್ಲದವರು ಅಥವಾ ಅಲ್ಪ ಪ್ರಮಾಣದ ರೋಗಲಕ್ಷಣ ಇರುವವರಾಗಿದ್ದಾರೆ. ಅವರ ಸಂಪರ್ಕಗಳನ್ನು ಪತ್ತೆಹಚ್ಚಲಾಗುತ್ತಿದೆ. ಆರರಲ್ಲಿ ಮೂರು ಮಂದಿ ಮುಂಬೈನವರಾಗಿದ್ದು, ಇನ್ನಿಬ್ಬರು ಪಿಂಪ್ರಿ-ಚಿಂಚ್ವಾಡ ಮತ್ತು ಒಬ್ಬರು ಪುಣೆಯವರಾಗಿದ್ದಾರೆ’ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.

Covid 19 Vaccine: ಒಮಿಕ್ರೋನ್‌ ಭೀತಿ ಬೆನ್ನಲ್ಲೇ 3ನೇ ಡೋಸ್‌ ಸಾಧ್ಯತೆ : ಹೆಚ್ಚುವರಿ ಲಸಿಕೆ ಅಗತ್ಯವಿದೆಯೇ?

ಇನ್ನು ಬ್ರಿಟನ್‌ ಮತ್ತು ನೆದರ್‌ಲೆಂಡ್‌ನಿಂದ ದೆಹಲಿಗೆ ಆಗಮಿಸಿದ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಎಲ್ಲಾ 10 ಜನರನ್ನು ಐಸೋಲೇಷನ್‌ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ರಿಟನ್‌, ಯುರೋಪಿಯನ್‌ ರಾಷ್ಟ್ರಗಳು, ಆಫ್ರಿಕನ್‌ ರಾಷ್ಟ್ರಗಳು ಸೇರಿದಂತೆ ಹಲವು ಒಮಿಕ್ರೋನ್‌ ಅಪಾಯವಿರುವ ದೇಶಗಳನ್ನು ‘ಅಟ್‌ ರಿಸ್ಕ್‌’ (At Risk) ದೇಶಗಳು ಎಂದು ಮಹಾರಾಷ್ಟ್ರ ಗುರುತಿಸಿದ್ದು, ಅಲ್ಲಿಂದ ಬಂದವರಿಗೆ ಕಡ್ಡಾಯವಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್‌ (Institutional Quarantine) ನಿಯಮ ಜಾರಿಗೊಳಿಸಿದೆ. ಅವರು ತಮ್ಮದೇ ವೆಚ್ಚದಲ್ಲಿ ಹೋಟೆಲ್‌ಗಳಲ್ಲಿ ಉಳಿದುಕೊಂಡು, ಎರಡನೇ ದಿನ, ನಾಲ್ಕನೇ ದಿನ ಮತ್ತು ಏಳನೇ ದಿನ ಆರ್‌ಟಿಪಿಸಿಆರ್‌ (RTPCR Test) ಟೆಸ್ಟ್‌ ಮಾಡಿಸಿಕೊಳ್ಳಬೇಕಿದೆ.

click me!