ಅಮೆರಿಕ ಸೇನೆ ಇರುವ ಇರಾಕಿ ವಾಯುನೆಲೆ ಮೇಲೆ ರಾಕೆಟ್‌ ದಾಳಿ!

By Suvarna NewsFirst Published Jan 13, 2020, 11:10 AM IST
Highlights

ಅಮೆರಿಕ ಯೋಧರಿರುವ ಇರಾಕಿ ವಾಯುನೆಲೆ ಮೇಲೆ ರಾಕೆಟ್‌ ದಾಳಿ| ನಾಲ್ವರು ಇರಾಕಿ ಯೋಧರಿಗೆ ಗಾಯ

ಬಾಗ್ದಾದ್‌[ಜ.13]: ಇರಾನ್‌-ಅಮೆರಿಕ ನಡುವೆ ಯುದ್ಧಭೀತಿ ಇರುವ ನಡುವೆಯೇ ಇರಾಕ್‌ನಲ್ಲಿ ಮತ್ತೆ ಭಾನುವಾರ ರಾತ್ರಿ ವಾಯುದಾಳಿ ನಡೆದಿದೆ. ಅಮೆರಿಕದ ಯೋಧರು ಇದ್ದ ಇರಾಕಿ ವಾಯುನೆಲೆ ಮೇಲೆ 4 ರಾಕೆಟ್‌ಗಳನ್ನು ಹಾರಿಸಿ ಈ ದಾಳಿ ನಡೆಸಲಾಗಿದ್ದು, ನಾಲ್ವರು ಇರಾಕಿ ಯೋಧರು ಗಾಯಗೊಂಡಿದ್ದಾರೆ.

ಉತ್ತರ ಬಾಗ್ದಾದ್‌ನ ಅಲ್‌ ಬಲಾದ್‌ ವಾಯುನೆಲೆಗೆ ರಾಕೆಟ್‌ ಹಾರಿಸಲಾಗಿದೆ. ಆದರೆ ದಾಳಿ ನಡೆಸಿದ್ದು ಇರಾನ್‌ ದೇಶವ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಹಾರಿಸಲಾದ ರಾಕೆಟ್‌ಗಳು ರಷ್ಯಾ ನಿರ್ಮಿತವಾಗಿರುವ ಕಾರಣ, ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ.

ಉಕ್ರೇನ್‌ ವಿಮಾನ ಹೊಡೆದದ್ದು ನಾವೇ: ಇರಾನ್‌ ತಪ್ಪೊಪ್ಪಿಗೆ

ಇತ್ತೀಚೆಗೆ ಇರಾಕ್‌ನಲ್ಲಿ ಅಮೆರಿಕ ವಾಯುದಾಳಿ ನಡೆಸಿ ಇರಾನ್‌ ಸೇನಾಪಡೆಯೊಂದರ ದಂಡನಾಯಕ ಖಾಸಿಂ ಸುಲೈಮಾನಿಯನ್ನು ಹತ್ಯೆ ಮಾಡಿತ್ತು. ಇದಾದ ನಂತರ ಇರಾನ್‌-ಅಮೆರಿಕ ನಡುವೆ ತ್ವೇಷ ವಾತಾವರಣ ಉಂಟಾಗಿತ್ತು. ಇದರ ನಡುವೆಯೇ ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ವಾಯುದಾಳಿ ನಡೆಸಿ 80 ಅಮೆರಿಕನ್ನರನ್ನು ಸಾಯಿಸಿರುವುದಾಗಿ ಇರಾನ್‌ ಹೇಳಿಕೊಂಡಿತ್ತು.

ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದನ್ನು ನಿರಾಕರಿಸಿ, ಯಾವೊಬ್ಬ ಅಮೆರಿಕನ್ನನೂ ಸತ್ತಿಲ್ಲ ಎಂದಿದ್ದರು.

ಮತ್ತೊಬ್ಬರ ಉಸಾಬರಿ ಬೇಡ: ಇರಾನ್-ಯುಎಸ್ ಯುದ್ಧದಲ್ಲಿ ಭಾಗಿಯಾಗಲ್ಲ ಎಂದ ಇಮ್ರಾನ್!

click me!