
ವಾಷಿಂಗ್ಟನ್(ಆ.16): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಾಬರ್ಟ್ ಟ್ರಂಪ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 71 ವರ್ಷದ ರಾಬರ್ಟ್ ಅವರಿಗೆ ನ್ಯೂಯಾರ್ಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ರಾಬರ್ಟ್‌ರವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರವಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಗೆ ಭೇಟಿ ನೀಡಿ ತಮ್ಮನ ಆರೋಗ್ಯ ವಿಚಾರಿಸಿದ್ದರು.
ಇನ್ನು ತಮ್ಮನ ನಿಧನದ ಬೆನ್ನಲ್ಲೇ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್ ನನ್ನ ಸಹೋದರ ರಾಬರ್ಟ್ ಕುರಿತ ಈ ಸುದ್ದಿಯನ್ನು ಹೇಳಲು ಹೃದಯ ಅತ್ಯಂತ ಭಾರ ಎನಿಸುತ್ತಿದೆ. ಕಳೆದ ರಾತ್ರಿ ನಾನು ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ. ಸಹೋದರ ಶಾಂತಿಯುತವಾಗಿ ಚಿರನಿದ್ರೆಗೆ ಜಾರಿದ್ದಾರೆ. ರಾಬರ್ಟ್ ನನ್ನ ಸಹೋದರ ಮಾತ್ರನಲ್ಲ, ಅತ್ಯುತ್ತಮ ಸ್ನೇಹಿತನಾಗಿದ್ದ. ಆತನ ಅಗಲಿಕೆ ಬಹಳ ನೋವು ತಂದಿದೆ. ಮತ್ತೆ ಆತನನ್ನು ಭೇಟಿಯಾಗುತ್ತೇನೆ. ಆತನ ನೆನಪು ಸದಾಕಾಲ ನನ್ನೊಂದಿಗಿರುತ್ತದೆ. ರಾಬರ್ಟ್ ಐ ಲವ್ ಯು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ