2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರೇ ಗೆಲುವು ಸಾಧಿಸುತ್ತಾರೆ ಎಂದಿದ್ದರು| ಈ ಬಾರಿ ಟ್ರಂಪ್‌ಗೆ ಸೋಲು ಖಚಿತ| ಅಮೆರಿಕ ‘ಜ್ಯೋತಿಷಿ’
ನ್ಯೂಯಾರ್ಕ್(ಆ.15): 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರೇ ಗೆಲುವು ಸಾಧಿಸುತ್ತಾರೆ ಎಂದು ಖಚಿತವಾಗಿ ಊಹಿಸಿದ್ದ ಇತಿಹಾಸ ಪ್ರಾಧ್ಯಾಪಕ ಅಲ್ಲಾನ್ ಲಿಚ್‌ಮ್ಯಾನ್, ಈ ಬಾರಿ ಅಂದರೆ 2020ರ ಚುನಾವಣೆಯಲ್ಲಿ ಟ್ರಂಪ್ ಪರಾಭವಗೊಳ್ಳಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ.
ಭಾರತ, ಚೀನಾಗೆ ಪ್ರಯಾಣಿಸ ಬೇಡಿ; ನಾಗರಿಕರಿಗೆ ಅಮೆರಿಕ ಸೂಚನೆ!
‘ಅಧ್ಯಕ್ಷೀಯ ಚುನಾವಣೆಯ ಭವಿಷ್ಯಕಾರ’ ಎಂದೇ ಅಮೆರಿಕದಲ್ಲಿ ಖ್ಯಾತಿ ಪಡೆದಿರುವ ಇತಿಹಾಸ ಪ್ರಾಧ್ಯಾಪಕ ಅಲ್ಲಾನ್ ಲಿಚ್‌ಮ್ಯಾನ್ ಈವರೆಗೆ ಅಮೆರಿಕದ 40 ಚುನಾವಣೆಗಳ ಭವಿಷ್ಯವನ್ನು ಖಚಿತವಾಗಿ ಹೇಳಿದ್ದಾರೆ. 2016ರಲ್ಲಿ ಸಹ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರೇ ಗೆಲ್ಲುತ್ತಾರೆ ಎಂದು ಹೇಳಿದ್ದರು.
ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!
ಆದರೆ ಈ ವರ್ಷದ ಚುನಾವಣೆಯಲ್ಲಿ ಡೆಮೊಕ್ರಟ್ ಪಕ್ಷದ ಎದುರು ಡೊನಾಲ್ಡ್ ಟ್ರಂಪ್ ಪರಾಭವಗೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಗಂತ ಲಿಚ್‌ಮ್ಯಾನ್ ಊಹೆಯ ಮೂಲಕವೋ, ಅದೃಷ್ಟವನ್ನಾಧರಿಸಿಯೋ ಭವಿಷ್ಯ ಹೇಳಲ್ಲ. ಆರ್ಥಿಕತೆ, ಹಗರಣ, ವಿರೋಧಿ ಅಲೆ ಇತ್ಯಾದಿ 13 ಅಂಶಗಳನ್ನಾಧರಿಸಿ ವಿಶ್ಲೇಷಣೆ ಮಾಡಿ ಭವಿಷ್ಯ ಹೇಳುತ್ತಾರೆ.