ಇಡೀ ಒಂಟೆಯನ್ನೇ ರೋಸ್ಟ್ ಮಾಡಿ ಅತಿಥಿಗಳಿಗೆ ಉಪಚಾರ: ಪಾಕಿಸ್ತಾನದ ಮದುವೆ ವೀಡಿಯೋ ವೈರಲ್

Published : Feb 16, 2025, 11:59 AM ISTUpdated : Feb 16, 2025, 12:19 PM IST
ಇಡೀ ಒಂಟೆಯನ್ನೇ ರೋಸ್ಟ್ ಮಾಡಿ ಅತಿಥಿಗಳಿಗೆ ಉಪಚಾರ: ಪಾಕಿಸ್ತಾನದ ಮದುವೆ ವೀಡಿಯೋ ವೈರಲ್

ಸಾರಾಂಶ

ಪಾಕಿಸ್ತಾನದ ಮದುವೆಯೊಂದರಲ್ಲಿ ಇಡೀ ಒಂಟೆಯನ್ನು ರೋಸ್ಟ್ ಮಾಡಿ ಬಡಿಸಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಂಟೆಯನ್ನು ರೋಸ್ಟ್ ಮಾಡಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಮದುವೆಗಳಲ್ಲಿ ವಧು ವರರ ಎಂಟ್ರಿ ಡಾನ್ಸ್ ಮುಂತಾದವು ಸಖತ್ ಹೈಲೈಟ್ ಆಗ್ತಿರ್ತವೆ. ಆದರೆ ಪಾಕಿಸ್ತಾನದ ಮದುವೆಯೊಂದರಲ್ಲಿ ಹೈಲೈಟ್ ಆಗಿದ್ದೆ ಬೇರೆ. ನೀವು ಚಿಕನ್ ತಂದೂರಿ ಮಟನ್ ತಂದೂರಿಗಳನ್ನು ನೋಡಿರುತ್ತಿರಿ, ಇಡೀ ಕೋಳಿಯನ್ನು ಬೆಂಕಿಯಲ್ಲಿ ಮಸಾಲೆ ಸೇರಿಸಿ ಹುರಿದು ತಟ್ಟೆಯಲ್ಲಿ ತಂದಿಡುವುದನ್ನು, ಅಥವಾ ಅತಿಥಿಗಳಿಗೆ ಸರ್ವ್ ಮಾಡುವುದನ್ನು ನೀವು ಹೊಟೇಲ್‌ಗಳಲ್ಲಿ ಗಮನಿಸಿರಬಹುದು. ಆದರೆ ಪಾಕಿಸ್ತಾನದ ಈ ಮದುವೆಯೊಂದರಲ್ಲಿ ಕುರಿಯೂ ಅಲ್ಲ, ಕೋಳಿಯೂ ಅಲ್ಲ, ದೊಡ್ಡ ಒಂಟೆಯನ್ನೇ ಹೀಗೆ ಕೋಳಿಯಂತೆ ಹುರಿದು ದೊಡ್ದದಾದ ಟ್ರೇಯಲ್ಲಿ ತಂದು ಇರಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಮದುವೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. indiancrownnewz ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವಧುವಿನ ಅಥವಾ ಜೋಡಿ ಮದುವೆ ಮನೆಗೆ ಎಂಟ್ರಿ ಕೊಡುವುದು ಸಮಾರಂಭದ ಕೇಂದ್ರ ಬಿಂದುವಾಗುವ ದಿನಗಳು ಮುಗಿದು ಹೋಯ್ತು. ಸೋಶಿಯಲ್ ಮೀಡಿಯಾದಲ್ಲಿ ಇದೊಂದು ವೀಡಿಯೋ ವೈರಲ್ ಆಗ್ತಿದೆ. ಅದರಲ್ಲಿ ಸಂಪೂರ್ಣ ಒಂಟೆಯನ್ನೇ ರೋಸ್ಟ್ ಮಾಡಲಾಗಿದ್ದು, ದೊಡ್ಡದಾದ ಟ್ರೇಯಲ್ಲಿ ಸಮಾರಂಭಕ್ಕೆ ತರಲಾಗಿದೆ. ಇದು ಅಲ್ಲಿದ್ದ ಎಲ್ಲರ ಗಮನ ಸೆಳೆಯಿತು. ಪಾಕಿಸ್ತಾನದಲ್ಲಿ ನಡೆದ ಶ್ರೀಮಂತರ ಐಷಾರಾಮಿ ಮದುವೆಯಲ್ಲಿ ಈ ಘಟನೆ ನಡೆದಿದೆ.

ಮದುವೆಯಲ್ಲಿ ವಧು ವರರಿಗಿಂತ ಇಡಿಯಾಗಿಯೇ ರೋಸ್ಟ್ ಆಗಿದ್ದ ಒಂಟೆ ಎಲ್ಲರ ಕೇಂದ್ರಬಿಂದುವಾಗಿತ್ತು. ಈ ವಿಭಿನ್ನವಾದ ಸಂಪ್ರದಾಯವೂ ಅದ್ಧೂರಿತನದ ಚಿಹ್ನೆಯಾಗಿದೆ. ಹಾಗೂ ಜೀವನದಲ್ಲಿ ಒಮ್ಮೆ ಸಿಗುವ ಅನುಭವವಾಗಿದೆ. ಹಾಗೂ ಇದು ನಿಜವಾಗಿಯೂ ಪಾಕಿಸ್ತಾನದ ಹೈಕ್ಲಾಸ್ ಸೊಸೈಟಿಯನ್ನು ಪ್ರತಿನಿಧಿಸುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. 

ಅನೇಕರು ಈ ವೀಡಿಯೋಗೆ ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅನೇಕರು ಹೀಗೆ ಒಂಟೆಯನ್ನು ರೋಸ್ಟ್ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ಇಸ್ಲಾಂನಲ್ಲಿ ಹರಾಮಿ ಕೆಲಸ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಕಾಮೆಂಟ್ ಸೆಕ್ಷನ್ ಪೂರ್ತಿ ಎಟು ಎದಿರೇಟುಗಳ ಕಾಮೆಂಟ್‌ಗಳೇ ಕಾಣಿಸುತ್ತಿವೆ. ಅದೇನೇ ಇರಲಿ ಈ ವೀಡಿಯೋ ಬಗ್ಗೆ ನಿಮಗೇನಾನಿಸಿತು ಕಾಮೆಂಟ್ ಮಾಡಿ. 

ರೋಸ್ಟೆಡ್ ಒಂಟೆಯ ವೀಡಿಯೋ ಕೆಳಗಿದೆ ನೋಡಿ...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ
ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್