ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದ ನಾಲ್ಕು ತಿಂಗಳಲ್ಲೇ ಭಾರತದ ಹರ್‍ಯಾಣ ಮೂಲದ ಕೊಲೆ ಮತ್ತು ಗಲಭೆಕೋರ ನರೇಂದ್ರ ಸಿಂಗ್‌ನನ್ನು ಯುಎಇನಲ್ಲಿ ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ನವದೆಹಲಿ (ಫೆ.17): ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದ ನಾಲ್ಕು ತಿಂಗಳಲ್ಲೇ ಭಾರತದ ಹರ್‍ಯಾಣ ಮೂಲದ ಕೊಲೆ ಮತ್ತು ಗಲಭೆಕೋರ ನರೇಂದ್ರ ಸಿಂಗ್‌ನನ್ನು ಯುಎಇನಲ್ಲಿ ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ಜಿಯೋ ಲೊಕೇಷನ್ ತಂತ್ರಜ್ಞಾನದ ಮೂಲಕ ಅಪರಾಧಿಯು ಯುಎಇಯಲ್ಲಿ ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿ ನರೇಂದ್ರ ಸಿಂಗ್‌ನನ್ನು ಬಂಧಿ ಸಲಾಗಿದೆ.
ಶಿವಮೊಗ್ಗ ಹ್ಯೂಂಡಾಯ್ ಕಾರ್ ಶೋ ರೂಂನಲ್ಲಿ ಅಗ್ನಿ ಅವಘಡ, 7 ಕಾರು ಭಸ್ಮ!
ನರೇಂದ್ರ ಸಿಂಗ್‌ಗೆ ಹರ್‍ಯಾಣ ಕೋರ್ಟ್ 2009ರಲ್ಲಿ ದೋಷಿ ಎಂದು ಪರಿಗಣಿಸಿ ಶಿಕ್ಷೆ ನೀಡಿದ್ದರೂ ಆತ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕಳೆದ ನ.7ರಂದು ನರೇಂದ್ರ ತೋಮರ್ ಪತ್ತೆಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
ಸೋನಿಯಾ ಗಾಂಧಿಗೆ ಭಾರತದಲ್ಲಿ ಸ್ವಂತ ಮನೆಯೇ ಇಲ್ಲ, ಕಾರು ಇಲ್ಲ, ಅಫಿಡವಿಟ್‌ನಲ್ಲಿ ಆಸ್ತಿ ಬಹಿರಂಗ
ಸಿಬಿಐನ ಜಾಗತಿಕ ಕಾರ್ಯಾಚರಣೆ ಕೇಂದ್ರವು ಅಬುಧಾಬಿಯಲ್ಲಿರುವ ಇಂಟರ್‌ಪೋಲ್‌ಗಾಗಿ ಅದರ ರಾಷ್ಟ್ರೀಯ ಕೇಂದ್ರೀಯ ಬ್ಯೂರೋ, ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯ ಮತ್ತು ಹರಿಯಾಣ ಪೊಲೀಸರೊಂದಿಗೆ ಆತನ ಹಸ್ತಾಂತರ ಕಾರ್ಯ ನಡೆಯಲಿದೆ.