ದಕ್ಷಿಣ ಗಾಜಾ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ಮಂದುವರೆಸಿದೆ. ಗಾಜಾ ಪಟ್ಟಿಯಲ್ಲಿರುವ ಖಾನ್ ಯೂನಿಸ್ ನಗರದ ನಾಸಿರ್ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನಾಪಡೆ ದಾಳಿ ಮುಂದುವರೆಸಿದ್ದು, ಆಸ್ಪತ್ರೆಯನ್ನು ಶುಕ್ರವಾರವೂ ತನ್ನ ವಶದಲ್ಲಿ ಇರಿಸಿಕೊಂಡಿದೆ.
ರಫಾ: ದಕ್ಷಿಣ ಗಾಜಾ಼ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ಮಂದುವರೆಸಿದೆ. ಗಾಜಾ ಪಟ್ಟಿಯಲ್ಲಿರುವ ಖಾನ್ ಯೂನಿಸ್ ನಗರದ ನಾಸಿರ್ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನಾಪಡೆ ದಾಳಿ ಮುಂದುವರೆಸಿದ್ದು, ಆಸ್ಪತ್ರೆಯನ್ನು ಶುಕ್ರವಾರವೂ ತನ್ನ ವಶದಲ್ಲಿ ಇರಿಸಿಕೊಂಡಿದೆ. ಪರಿಣಾಮ ಆಮ್ಲಜನಕ ಪೂರೈಕೆ ಆಗದೇ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಬಾರಿ ಖಾನ್ ಯೂನಿಸ್ ನಗರದ ಆಸ್ಪತ್ರೆಯನ್ನೇ ಗುರಿಯಾಗಿಸಿ ದಾಳಿ ಮಾಡಿದೆ.
ಆಸ್ಪತ್ರೆಯೊಳಗೆ ಒತ್ತೆಯಾಳುಗಳೊಂದಿಗೆ ಕೆಲವು ಉಗ್ರರು ಅಡಗಿದ್ದಾರೆ ಎಂಬ ಶಂಕೆಯ ಮೇರೆಗೆ ಇಸ್ರೇಲ್ ಸೇನಾಪಡೆ ಗುಂಡಿನ ದಾಳಿ ಮಾಡುವ ಜೊತೆಗೆ ಕೆಲಕಾಲ ವಿದ್ಯುತ್ ಪೂರೈಕೆಯನ್ನೂ ನಿಲ್ಲಿಸಿತ್ತು. ಈ ಸಮಯದಲ್ಲಿ ಆಮ್ಲಜನಕ ಪೂರೈಕೆ ಆಗದ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ.
ಇನ್ನು ಗುರುವಾರ ಮುಂಜಾನೆ ಇಸ್ರೇಲ್ ದಾಳಿಗೆ ಇದೇ ಆಸ್ಪತ್ರೆಯಲ್ಲಿ ಒಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, 6 ಮಂದಿಗೆ ಗಂಭೀರವಾಗಿ ಗಾಯವಾಗಿತ್ತು. ಈ ನಡುವೆ, ರೋಗಿಗಳನ್ನು ಸ್ಟ್ರೆಚರ್‌ನಲ್ಲಿ ಹೊಗೆಯುಕ್ತ ಕೋಣೆಗೆ ಕರೆದೊಯ್ದು ಹೊರಗಿನಿಂದ ಗುಂಡಿನ ದಾಳಿ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ.