ಸಮುದ್ರ ತೀರಕ್ಕೆ ಹರಿದು ಬರುತ್ತಿದೆ ವೀರ್ಯದಂತೆ ಕಾಣಿಸೋ ಜೀವಿ!

By Suvarna News  |  First Published Jan 12, 2024, 5:25 PM IST

ಸಮುದ್ರವೊಂದು ತನ್ನ ಒಡಲಿನಲ್ಲಿದ್ದ ವಸ್ತುವೊಂದನ್ನು ಈಗ ತೀರಕ್ಕೆ ತಂದು ಹಾಕಿದ್ದು, ಈ ವಿಚಿತ್ರ ಜೀವಿಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಭೂಮಿಯೂ ಸಾವಿರಾರು ಚಿತ್ರ ವಿಚಿತ್ರ  ಜೀವಿಗಳಿಗೆ ಆವಾಸಸ್ಥಾನವಾಗಿರುವಂತೆ ಸಮುದ್ರವೂ ಕೂಡ ಕೋಟ್ಯಾಂತರ ಜೀವರಾಶಿಗಳಿಗೆ ಆವಾಸ್ಥಾನವಾಗಿದೆ. ಸಮುದ್ರದ ತಳದಲ್ಲಿ ಸಾವಿರಾರು ಮೀನು ಏಡಿಗಳು ಮಾತ್ರವಲ್ಲದೇ ಸಾವಿರಾರು ಸಮುದ್ರಜೀವಿಗಳಿವೆ. ಸಮುದ್ರ ಸಾಮಾನ್ಯವಾಗಿ ಯಾವುದೇ ನಿರ್ಜೀವ ವಸ್ತುಗಳನ್ನು ತನ್ನೊಡಲೊಳಗೆ ಇರಿಸಿಕೊಳ್ಳುವುದಿಲ್ಲ, ಅದು ಹೆಣವಾದರೂ ಸರಿ ಇನ್ಯಾವುದು ಅನುಪಯುಕ್ತ ವಸ್ತುವಾದರೂ ಸರಿ. ಸಮುದ್ರದಲ್ಲಿ ಮುಳುಗಿದವರು ಕೂಡ ರಕ್ಷಿಸದೇ ಹೋದಲ್ಲಿ ಇದೇ ಕಾರಣಕ್ಕೆ ಸ್ವಲ್ಪ ಸಮಯದ ನಂತರ ಮತ್ತೆಲ್ಲೋ ತೀರದಲ್ಲಿ ಹೆಣವಾಗಿ ಗೋಚರಿಸುತ್ತಾರೆ. ಅದೇ ರೀತಿ ಸಮುದ್ರವೊಂದು ತನ್ನ ಒಡಲಿನಲ್ಲಿದ್ದ ವಸ್ತುವೊಂದನ್ನು ಈಗ ತೀರಕ್ಕೆ ತಂದು ಹಾಕಿದ್ದು, ಈ ವಿಚಿತ್ರ ಜೀವಿಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದೊಂದು ನೀರೊಳಗಿರುವ ಸಸ್ಯ ಪ್ರಭೇದವಾಗಿದ್ದು, ಅಪರೂಪಕ್ಕೆ ಬೀಚ್‌ನಲ್ಲಿ ಕಾಣಲು ಸಿಕ್ಕ ಈ ಫೋಟೋವನ್ನು ಫೇಸ್‌ಬುಕ್‌ ಬಳಕೆದಾರರಾದ ಇಮಿಲಿ ಜೆಂಕೆ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಫೇರ್‌ಹೇವನ್‌ನಲ್ಲಿರುವ ಸ್ಟೆಪ್ ಬೀಚ್‌ನಲ್ಲಿ ರಾಕ್ ಪೂಲ್‌ಗಳಲ್ಲಿ ಇದು ಕಂಡು ಬಂದಿದೆ. ಈ ಸಮುದ್ರ ಸಸ್ಯವೂ ನೋಡುವುದಕ್ಕೆ ಬಾಲ ಇರುವ ಮಿದುಳಿನಂತೆ ಕಾಣಿಸುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅನೇಕರು ಇದನ್ನು ಏಲಿಯನ್‌ಗೆ ಹೋಲಿಕೆ ಮಾಡಿದ್ದಾರೆ.  ಮತ್ತೆ ಕೆಲವರು ಇದನ್ನು ಸೀ ಟುಲಿಪ್ ಎಂದು ಹೂ ಎಂದು ಕರೆದಿದ್ದಾರೆ. ಜನವರಿ ಒಂದರಂದು ಪೋಸ್ಟ್ ಆದ ಈ ಫೋಟೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. 

Tap to resize

Latest Videos

ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ

ಅಲ್ಲದೇ ಈ ಫೋಟೋ ನೋಡಿದ ಕೆಲವರು ಸಮುದ್ರ ನಮ್ಮನ್ನು ಯಾವತ್ತೂ ಅಚ್ಚರಿಗೊಳಿಸದೇ ಇರುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾನು ಇದನ್ನು ಮೊದಲಿಗೆ ನೋಡಿದಾಗ ಅನ್ಯಗ್ರಹ ಜೀವಿ ಎಂದು ಭಾವಿಸಿದೆ. ಇದು ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಸ್ಟೀಪ್ ಬೀಚ್‌ನಲ್ಲಿ ಕಳೆದ ವಾರ ನಾನು ನೋಡಿದ್ದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವುಗಳು ಸಮುದ್ರ ಟೂಲಿಪ್‌ಗಳು ಅವುಗಳನ್ನು ಕಲ್ಲುಬಂಡೆಗಳ ಮೇಲೆ ಆಗಾಗ ನೋಡಬಹುದು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರಿಯಾಗಿ ಗಮನಿಸಿ ಟೂಲಿಪ್‌ಗಳು ಬೆನ್ನುಹುರಿಯನ್ನು ಜೋಡಿಸಿರುವ ಮೆದುಳಿನಂತೆ ಕಾಣಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಆಸ್ಟ್ರೇಲಿಯನ್ ಮ್ಯೂಸಿಯಂ ಪ್ರಕಾರ, ಸೀ ಟುಲಿಪ್ ಒರಟಾದ ಮೇಲ್ಮೈಯನ್ನು ಹೊಂದಿದೆ. ಇದು ಕಿತ್ತಳೆ, ನೇರಳೆ, ಹಳದಿ ಮತ್ತು ಗುಲಾಬಿ ಸೇರಿದಂತೆ ಹಲವಾರು ವರ್ಣಗಳಲ್ಲಿ ಇದನ್ನು ಕಾಣಬಹುದು. ಸಮುದ್ರ ಟುಲಿಪ್‌ನ ಮೇಲ್ಮೈಯೂ ಹಾಲಿಸರ್ಕಾ ಆಸ್ಟ್ರೇಲಿಯನ್ಸಿಸ್ ಎಂಬ ಎನ್‌ಕ್ರೂಸ್ಟಿಂಗ್ ಸ್ಪಾಂಜ್‌ನಿಂದ ಮುಚ್ಚಲ್ಪಟ್ಟಿದು ಇದು ಅದರ ಮೇಲೆ ಕಂಡುಬರುವ ಬಣ್ಣಗಳಿಗೆ ಕಾರಣವಾಗಿದೆ.

ಮೀನುಗಾರರ ಬಲೆ ಸೇರಿ, ತೀರಕ್ಕೆ ಬಂದ ಅಪರೂಪದ ಅತೀ ವಿಷಕಾರಿ ಸಮುದ್ರ ಹಾವು

click me!