ಪೋರ್ನ್ ಇಂಡಸ್ಟ್ರಿಯಲ್ಲಿ ದೌರ್ಜನ್ಯವೆಂದು ದೂರಿದ ತಿಂಗಳಲ್ಲೇ ಸಾವಿಗೀಡಾದ ನೀಲಿಚಿತ್ರಗಳ ತಾರೆ

By Suvarna News  |  First Published Jan 12, 2024, 3:33 PM IST

ಪೆರುವಿನ ಅಶ್ಲೀಲ ಸಿನಿಮಾಗಳ ತಾರೆ ಥೈನಾ ಫೀಲ್ಡ್ಸ್‌,  ಅವರು ತಮ್ಮ 24ನೇ ವಯಸ್ಸಿನಲ್ಲೇ ಹಠಾತ್ ನಿಧನರಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ, ಕೆಲ ತಿಂಗಳ ಹಿಂದಷ್ಟೇ ಇವರು ಆಡಲ್ಟ್ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು.


ಪೆರುವಿನ ಅಶ್ಲೀಲ ಸಿನಿಮಾಗಳ ತಾರೆ ಥೈನಾ ಫೀಲ್ಡ್ಸ್‌,  ಅವರು ತಮ್ಮ 24ನೇ ವಯಸ್ಸಿನಲ್ಲೇ ಹಠಾತ್ ನಿಧನರಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ, ಕೆಲ ತಿಂಗಳ ಹಿಂದಷ್ಟೇ ಇವರು ಆಡಲ್ಟ್ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಅದಾಗಿ ಕೆಲ ತಿಂಗಳಲ್ಲೇ ಅವರು ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಥೈನಾ ಫೀಲ್ಡ್ಸ್‌,  ಅವರು ಪೆರುವಿನ ವಯಸ್ಕರ ಸಿನಿಮಾ ತಾರೆಯಾಗಿದ್ದು, ಈ ವಾರ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಪೆರವಿನ ಪ್ರಸಿದ್ಧ ಆಡಲ್ಟ್ ಸಿನಿಮಾ ತಾರೆಯರಲ್ಲಿ ಒಬ್ಬರೆನಿಸಿದ್ದರು.

ಅಲ್ಲಿನ ಮಾಧ್ಯಮವಾದ ಲಾ ರಿಪಬ್ಲಿಕಾಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಈ ನೀಲಿ ಚಿತ್ರಗಳ ಕಂಟೆಂಟ್ ಕ್ರಿಯೇಟರ್‌ವೊಬ್ಬರು ಥೈನಾ ಫೀಲ್ಡ್‌, ಸಾವನ್ನು ಖಚಿತಪಡಿಸಿದ್ದಾರೆ. ನಾನು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗದು ಆಕೆಯ ಸಾವಿನಿಂದ ಬಹಳ ದುಃಖಿತನಾಗಿದ್ದೇನೆ ಎಂದು ಥೈನಾ ಸ್ನೇಹಿತೆ ಅಲೆಜಂಡ್ರಾ ಸ್ವೀಟ್ ಅವರು ಹೇಳಿಕೆ ನೀಡಿದ್ದಾರೆ. ಅಲ್ಲದೇ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲೂ ಥೈನಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಗಂಗೆಯಲ್ಲಿ ಮಿಂದು ಪಾವನಳಾದ ಸನ್ನಿ ಲಿಯೋನ್: ಗಂಗೆ ಮಲಿನಗೊಂಡಳು ಎನ್ನೋದಾ ನೆಟ್ಟಿಗರು

ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡದೇ ಅವಳನ್ನು ಇಷ್ಟಪಟ್ಟ ಎಲ್ಲರೂ ಆಕೆಗಾಗಿ ಪ್ರಾರ್ಥಿಸುವಂತೆ ನಾನು ಜನರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಅವಳೊಬ್ಬಳು ಪುಟ್ಟ ದೇವತೆ ಎಂದು ಸ್ನೇಹಿತೆ ಅಲೆಜಂಡ್ರಾ ಸ್ವೀಟ್ ಬರೆದುಕೊಂಡಿದ್ದಾರೆ. ಅಲ್ಲದೇ ಥೈನಾ ಜೊತೆ ಕೊಲಾಬರೇಷನ್‌ ಮಾಡಿಕೊಂಡಿದ್ದ ಪೆರುವಿನ ಪ್ರೊಡಕ್ಷನ್ ಸಂಸ್ಥೆಯಾದ ಮಿಲ್ಕಿ ಪೆರು ಕೂಡ ಥೈನಾ ನಿಧನಕ್ಕೆ ಸಂತಾಪ ಸೂಚಿಸಿದೆ. ಈ ಕೆಟ್ಟ ಕನಸಿನಿಂದ ಯಾರಾದರೂ ನಮ್ಮನ್ನು ಎಚ್ಚರಗೊಳಿಸಬಹುದು ಎಂದು ನಾವು ಭಾವಿಸುತ್ತೇವೆ, ನೀವು ಯಾವಾಗಲೂ ನಮ್ಮ ಹೃದಯದಲ್ಲಿರುತ್ತೀರಿ. ನಿಮ್ಮ ಜೀವನದ ಭಾಗವಾಗಲು ನಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ಸಂಸ್ಥೆ ಸಂತಾಪ ಪತ್ರದಲ್ಲಿ ಹೇಳಿದೆ. 

ನೀಲಿ ಚಲನಚಿತ್ರೋದ್ಯಮದಲ್ಲಿ ಥೈನಾ ಎದುರಿಸಿದ ಬಹಳ ಬಲವಾದ ಲೈಂಗಿಕ ಕಿರುಕುಳವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ತಿಂಗಳುಗಳ ನಂತರ ಥೈನಾ ಸಾವನ್ನಪ್ಪಿರುವುದು ಕೆಲ ಶಂಕೆಗೆ ಕಾರಣವಾಗಿದೆ. ಇದೇ ಸಮಯದಲ್ಲಿ ಆಕೆ ತನ್ನ ನಿಜವಾದ ಹೆಸರು ಅಬಿಗೈಲ್ ಎಂದು ಬಹಿರಂಗಪಡಿಸಿದ್ದಳು. ಅಲ್ಲದೇ ಅಡಲ್ಟ್ ಕಂಟೆಂಟ್ ಮಾಡಲು ಶುರು ಮಾಡಿದ ನಂತರ ನನ್ನ ಮೇಲೆ ದೌರ್ಜನ್ಯಗಳು ಹೆಚ್ಚಾದವು ಎಂದು ಆಕೆ ಹೇಳಿಕೊಂಡಿದ್ದಾಳೆ. 

Happy birthday Sunny Leone : ಬೇಕರಿಯಲ್ಲಿ ಕೆಲಸ ಮಾಡ್ತಿದ್ದ ಹುಡುಗಿ ನೀಲಿ ಚಿತ್ರಗಳ ಸಾಮ್ರಾಜ್ಞಿಯಾಗಿದ್ದು ಹೇಗೆ?

ಮೊದಲಿಗೆ ಅನೇಕರು ನನ್ನನ್ನು ನೇಮಿಸಿಕೊಳ್ಳುವ ಮೂಲಕ ಅವರು ನನ್ನೊಂದಿಗೆ ಅವರು ಬಯಸಿದ್ದನ್ನು ಮಾಡಬಹುದು ಎಂದು ಭಾವಿಸಿದ್ದರು, ಆದರೆ ನಾನು ಮನೆಗೆ ಬಂದು ಸ್ನಾನ ಮಾಡಿ ಅಳುತ್ತಿದ್ದೆ. ಇದು ನನಗೆ ಅನೇಕ ಬಾರಿ ಸಂಭವಿಸಿದೆ. ಇದು ಸಮಾಜವು ಅಕ್ಷರಶಃ ಕೆಟ್ಟದಾಗಿದ್ದಾಗ ಓರ್ವ ಮಹಿಳೆಯಾಗಿ ವಯಸ್ಕರ ಕಂಟೆಂಟ್‌ಗಳನ್ನು ಸೃಷ್ಟಿಸುವುದು ಬಹಳ ಕಷ್ಟದ ಕೆಲಸ ಎಂದು ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು.

click me!