ರಾಮ ಮಂದಿರ ಉದ್ಘಾಟನೆ ಸಂಭ್ರಮ ಮನೆ ಮಾಡಿದೆ. ದೇಶ ವಿದೇಶದಲ್ಲಿ ಭಕ್ತರು ಸಂಭ್ರಮ ಆಚರಿಸಿದ್ದಾರೆ. ಇದೀಗ ಪ್ಯಾರಿಸ್‌ನಲ್ಲಿ ರಾಮ ಮಂದಿರ ಉದ್ಘಾಟನೆಗೆ ಭಾರಿ ತಯಾರಿ ನಡೆಯುತ್ತಿದೆ. ಪ್ರಾಣಪ್ರತಿಷ್ಠೆಗೂ ಮೊದಲು ಅಂದರೆ ಜ.21ರಂದು ಐಫೆಲ್ ಟವರ್ ಮುಂದೆ ಪೂಜೆ ಹಾಗೂ ಸಂಪೂರ್ಣ ಪ್ಯಾರಿಸ್‌ನಲ್ಲಿ ರಥಯಾತ್ರೆ ಆಯೋಜಿಸಲಾಗಿದೆ.
ಪ್ಯಾರಿಸ್(ಜ.10) ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನ ಮಾತ್ರ ಬಾಕಿ. ಸಂಪೂರ್ಣ ಆಯೋಧ್ಯೆ ಕಂಗೊಳಿಸುತ್ತಿದೆ. ಗಣ್ಯರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಕೋಟ್ಯಾಂತರ ಭಕ್ತರು ರಾಮ ಮಂದಿರ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ವಿದೇಶಗಳಲ್ಲೂ ಯಾತ್ರೆ, ಪೂಜೆ, ರ್ಯಾಲಿಗಳು ನಡಯುತ್ತಿದೆ. ಇದೀಗ ಪ್ಯಾರಿಸ್‌ನಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆಗೂ ಮೊದಲು ಪೂಜೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ರಥಯಾತ್ರೆ ಮಾಡಲು ಸಿದ್ಥತೆ ನಡೆಸಲಾಗಿದೆ. ಐತಿಹಾಸಿಕ ಹಾಗೂ ಪ್ರಸಿದ್ಧ ಐಫೆಲ್ ಟವರ್ ಮುಂದೆ ಪೂಜೆ ನಡೆಯಲಿದೆ. ಇನ್ನು ಪ್ಯಾರಿಸ್‌ನಲ್ಲಿ ರಥ ಯಾತ್ರೆ ಆಯೋಜಿಸಲಾಗಿದೆ.
ಪ್ಯಾರಿಸ್‌ನಲ್ಲಿರುವ ಭಾರತೀಯ ಮೂಲದವರು ಪೂಜೆ ಹಾಗೂ ರಥ ಯಾತ್ರೆ ಆಯೋಜಿಸಿದ್ದಾರೆ. ಜನವರಿ 21ರಂದು ಪ್ಯಾರಿಸ್‌ನ ವಿವಿಧ ಭಾಗಗಳಿಂದ ರಥಯಾತ್ರೆ ಆರಂಭಗೊಳ್ಳಲಿದೆ. ಈ ರಥಯಾತ್ರೆ ಐಫೆಲ್ ಟವರ್ ಬಳಿ ಸಮಾಪ್ತಿಗೊಳ್ಳಲಿದೆ. ಐಫೆಲ್ ಟವರ್ ಬಳಿ ಪೂಜೆ ನೆರವೇರಿಸಲಾಗುತ್ತದೆ. ರಾಮ ಮಂದಿರ ಉದ್ಘಾಟನೆ ಹಾಗೂ ಲೋಕ ಕಲ್ಯಾಣಕ್ಕಾಗಿ ಪೂಜೆ ನಡೆಯಲಿದೆ. ಬಳಿಕ ಐಫೆಲ್ ಟವರ್ ಬಳಿ ಹಾಕಲಾಗುವ ಅತೀ ದೊಡ್ಡ ವೇದಿಕೆಯಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ.
ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್, ರಾಮ ವಿರೋಧಿಗಳಿಗೆ ಜಾಗವಿಲ್ಲ ಎಂದ ಜನ!
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ದೇಗುಲದಲ್ಲಿ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ನಗರವನ್ನು ಇಂಟರ್ ನ್ಯಾಷನಲ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ವಿದೇಶಿ ಪ್ರವಾಸಿಗರು ಸೇರಿದಂತೆ ಬೇರೆ ಭಾಗಗಳಿಂದ ಜನರು ಬರುತ್ತಾರೆ. ಹೀಗಾಗಿ ದೊಡ್ಡ ದೊಡ್ಡ ಹೋಟೆಲ್ಗಳು, ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ 1200 ಎಕರೆಗಿಂತಲೂ ಹೆಚ್ಚು ಭೂಮಿ ನೀಡಲಾಗಿದೆ. ಬೇರೆ ರಾಜ್ಯಗಳು ಕೈಜೋಡಿಸಿದರೆ, ಅವರಿಗೂ ಅತಿಥಿ ಗೃಹ ನಿರ್ಮಾಣವೂ ಸುಲಭವಾಗಲಿದೆ. ವಿದೇಶಿ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದರೆ, ಅವರಿಗೂ ಅತಿಥಿ ಗೃಹ ನಿರ್ಮಿಸಲಾಗುತ್ತದೆ. ಈಗಾಗಲೇ ಮಾರಿಷಸ್ನ ಒಂದು ಅತಿಥಿ ಗೃಹ ನಿರ್ಮಾಣ ಮಾಡಲಾಗುತ್ತಿದೆ. ಇದೇ ರೀತಿ ನಗರದಲ್ಲಿ ಆಡಿಟೋರಿಯಂ, ಆಸ್ಪತ್ರೆ, ಟೆಲಿಕಾಂ ವ್ಯವಸ್ಥೆ, ಅವಶ್ಯಕವಾಗಿ ಬೇಕಾಗಿರುವ ನೀರು, ಟೆಲಿಫೋನ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಪವಿತ್ರ ರಾಮಮಂದಿರವನ್ನು ನಾಗರಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಉತ್ತರ ಭಾರತದಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿರುವ ನಿರ್ಮಾಣ ಶೈಲಿಯಾಗಿದ್ದು, ಹಲವು ದೇವಸ್ಥಾನಗಳು ಈ ಶೈಲಿಯಲ್ಲಿಯೇ ನಿರ್ಮಾಣವಾಗಿವೆ. ಈ ಶೈಲಿಯಲ್ಲಿ ಹಲವು ಮಂಟಪಗಳನ್ನು ಹೊಂದಿರುವ ನಿರ್ಮಾಣದ ಜೊತೆಗೆ ಪ್ರಮುಖ ಗೋಪುರ ಹೊಂದಿರುವ ಗರ್ಭಗುಡಿಯನ್ನು ನಿರ್ಮಾಣ ಮಾಡಲಾಗುತ್ತದೆ. ಇಡೀ ದೇವಸ್ಥಾನವನ್ನು ಕಲ್ಲಿನ ವೇದಿಕೆಯ ಮೇಲೆ ನಿರ್ಮಾಣ ಮಾಡಲಿದ್ದು, ಹತ್ತಿಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತದೆ.
ಅಯೋಧ್ಯೆ ರಾಮ ಮಂದಿರ ಪ್ರಸಾದ ರಾಮ್ ಹಲ್ವಾ ಸಿದ್ಧಪಡಿಸುವಾತ 12 ವಿಶ್ವ ದಾಖಲೆ ಹೊಂದಿರೋ ಬಾಣಸಿಗ