ಭಾರತಕ್ಕೆ ಹವಾಮಾನ ಶಾಕ್‌ ನೀಡಲು ಹೋದ ಪಾಕ್‌ಗೆ ಮುಖಭಂಗ!

By Suvarna NewsFirst Published May 11, 2020, 9:45 AM IST
Highlights

 ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹವಾಮಾನ ಮುನ್ಸೂಚನೆಯನ್ನು ಪ್ರಕಟಿಸಿದ್ದ ಭಾರತದ ಹವಾಮಾನ ಇಲಾಖೆ| ಭಾರತಕ್ಕೆ ಹವಾಮಾನ ಶಾಕ್‌ ನೀಡಲು ಹೋದ ಪಾಕ್| ಹವಾಮಾನ ವರದಿ ಪ್ರಕಟಿಸಿದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹವಾಮಾನ ಮುನ್ಸೂಚನೆಯನ್ನು ಭಾರತದ ಹವಾಮಾನ ಇಲಾಖೆ ಪ್ರಕಟಿಸಲು ಆರಂಭಿಸಿದ ಬೆನ್ನಲ್ಲೇ, ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಕೂಡಾ ಭಾನುವಾರದಿಂದ ಭಾರತದ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ಪ್ರದೇಶಗಳ ಹವಾಮಾನ ವರದಿ ಪ್ರಕಟಿಸಲು ಆರಂಭಿಸಿದೆ.

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

ಆದರೆ ಈ ಕೆಲಸವನ್ನೂ ಸರಿಯಾಗಿ ಮಾಡಲಾಗದ ಪಾಕಿಸ್ತಾನ ರೇಡಿಯೋ ಭಾರೀ ಮುಖಭಭಂಗಕ್ಕೆ ಒಳಗಾಗಿದೆ. ‘ಲಡಾಖ್‌ನಲ್ಲಿ ಗರಿಷ್ಠ ಮೈನಸ್‌ 4 ಡಿಗ್ರಿ ಹಾಗೂ ಕನಿಷ್ಠ ಮೈನಸ್‌ 1 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಪಾಕಿಸ್ತಾನದ ರೇಡಿಯೋ ಟ್ವೀಟ್‌ ಮಾಡಿತ್ತು.

ಪಾಕಿಸ್ತಾನ ಗಢ ಗಢ: ಗಡಿಯಲ್ಲಿ ಯುದ್ಧ ವಿಮಾಗಳ ಹಾರಾಟ, ಮತ್ತಷ್ಟು ಕಣ್ಗಾವಲು!

ಆದರೆ, ತಾಪಮಾನ ಹೆಚ್ಚಾದಾಗ ಗರಿಷ್ಠ ಮತ್ತು ತಾಪಮಾನ ಕುಸಿತವಾದಾಗ ಕನಿಷ್ಠ ತಾಪಮಾನ ಎಂದು ಬಳಸುತ್ತಾರೆ ಎಂಬ ಮುಂಜಾಗ್ರತೆ ವಹಿಸದ ಪಾಕಿಸ್ತಾನ ರೇಡಿಯೋವನ್ನು ಟ್ವೀಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

click me!