
ನ್ಯೂಯಾರ್ಕ್(ಮೇ.11): ಇಡೀ ವಿಶ್ವ ಕೊರೋನಾ ಸೋಂಕಿನ ಹೋರಾಡುತ್ತಿರುವಾಗಲೇ, ಇತ್ತ ವ್ಯಾಧಿಯಿಂದ ಚೇತರಿಸಿಕೊಂಡಿರುವ ಚೀನಾ, ದಕ್ಷಿಣ ಚೀನಾ ಸಮುದ್ರದ ಮೇಲಿನ ತನ್ನ ಹಕ್ಕು ಸ್ಥಾಪಿಸುವ ಯತ್ನವನ್ನು ಬಲಗೊಳಿಸಿದೆ. ಆದರೆ ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಮೆರಿಕ, ವಿವಾದಿತ ಪ್ರದೇಶಕ್ಕೆ 3 ಯುದ್ಧ ವಿಮಾನಗಳನ್ನು ರವಾನಿಸುವ ಮೂಲಕ ಚೀನಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಕೊರೋನಾ ವೈರಸ್ ಉಗಮವಾದ ಸ್ಥಳಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ತೀವ್ರ ವಾಕ್ಸಮರ, ತೆರಿಗೆ ಸಮರ ಆರಂಭವಾಗಿರುವ ಹೊತ್ತಿನಲ್ಲೇ ಈ ಹೊಸ ಜಟಾಪಟಿ ಆರಂಭವಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆ; ಮತ್ತೊಂದು ಶಾಕ್‌ನೀಡಲು ಸಜ್ಜಾದ ಟ್ರಂಪ್
ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದವಾದ ದಕ್ಷಿಣ ಚೀನಾ ತನಗೆ ಸೇರಿದ್ದು ಎಂಬುದು ಚೀನಾ ವಾದ. ಆದರೆ ಇದಕ್ಕೆ ಈ ವಲಯವನ್ನು ಸರಕು ಸಂಚಾರಕ್ಕೆ ನಂಬಿಕೊಂಡಿರುವ ಬಹುತೇಕ ದೇಶಗಳು ವಿರೋಧಿಸುತ್ತಿವೆ. ಇದರ ಹೊರತಾಗಿಯೂ ಚೀನಾ ಆ ಪ್ರದೇಶದ ಮೇಲೆ ಹಕ್ಕು ಸಾಧಿಸುವ ತನ್ನ ಯತ್ನ ಬಿಟ್ಟಿಲ್ಲ. ಜೊತೆಗೆ ಇತ್ತೀಚೆಗೆ ವಿವಾದಿತ ಪ್ರದೇಶದಲ್ಲಿ 2 ಆಡಳಿತಾತ್ಮಕ ಜಿಲ್ಲೆಗಳನ್ನು ಘೋಷಿಸಿದೆ. ಈ ಮೂಲಕ ತೈಲ ಸಂಪದ್ಭರಿತ, ಖನಿಜ ಸಂಪದ್ಭರಿತ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಯತ್ನ ಮಾಡಿದೆ. ಇದಕ್ಕೆ ಫಿಲಿಪ್ಪೀನ್ಸ್, ವಿಯೆಟ್ನಾಂ, ತೈವಾನ್ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿವೆ.
ಅಮೆರಿಕ ವಿರುದ್ಧ ಚೀನಾ ಕರೆನ್ಸಿ ವಾರ್!
ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು ತಕ್ಷಣವೇ ವಿವಾದಿತ ಪ್ರದೇಶಕ್ಕೆ ಮೂರು ಯುದ್ಧ ವಿಮಾನಗಳನ್ನು ರವಾನಿಸುವ ಮೂಲಕ, ಚೀನಾದ ಯತ್ನಕ್ಕೆ ತಡೆಯೊಡ್ಡುವ ಯತ್ನ ಮಾಡಿದೆ. ಒಂದು ವೇಳೆ ಈ ಬಿಕ್ಕಟ್ಟು ಇತ್ಯರ್ಥವಾಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇದು ಯುದ್ಧಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ