ಅಂದಾಜು 70 ವರ್ಷಗಳ ಕಾಲ ಬ್ರಿಟನ್ನ ರಾಣಿಯಾಗಿ ಅಧಿಕಾರವಹಿಸಿಕೊಂಡಿದ್ದ, ಬ್ರಿಟನ್ ದೇಶವನ್ನು ಆಳಿದ ಅತ್ಯಂತ ದೀರ್ಘ ಅವಧಿಯ ರಾಣಿ ಎನಿಸಿದ್ದ 2ನೇ ಕ್ವೀನ್ ಎಲಿಜಬೆತ್ ಗುರುವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 96 ವರ್ಷವಾಗಿತ್ತು.
ಲಂಡನ್ (ಸೆ. 8): ಸುದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ II ಅವರು 96 ನೇ ವಯಸ್ಸಿನಲ್ಲಿ ನಿಧನರಾದರು. ಅವರು 70 ವರ್ಷಗಳ ಕಾಲ ಬ್ರಿಟನ್ನ ಆಳ್ವಿಕೆ ನಡೆಸಿದರು. ರಾಜಮನೆತನದ ಕುಟುಂಬ - ರಾಣಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್, ಮೊಮ್ಮಕ್ಕಳಾದ ವಿಲಿಯಂ ಮತ್ತು ಹ್ಯಾರಿ ಮತ್ತು ಅವರ ಕುಟುಂಬಗಳು - ಸ್ಕಾಟಿಷ್ ಹೈಲ್ಯಾಂಡ್ಸ್ನಲ್ಲಿರುವ ಅವರ ಬಾಲ್ಮೋರಲ್ ರಾಣಿಯ ಕೊನೆಯ ಗಳಿಗೆಯಲ್ಲಿ ಜೊತೆಯಾಗಿದ್ದರು. ರಾಣಿ ಇದೇ ನಿವಾಸದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಬ್ರಿಟನ್ ದೇಶವನ್ನು 70 ವರ್ಷಗಳ ಕಾಲ ಆಳಿದ್ದನ್ನು ಗುರುತಿಸುವ ಸಲುವಾಗಿ ಕಳೆದ ಜೂನ್ನಲ್ಲಿ ಕ್ವೀನ್ಸ್ ಪ್ಲಾಟಿನಂ ಜ್ಯುಬಿಲಿಯನ್ನೂ ವಿಜೃಂಭಣೆಯಿಂದ ಇಂಗ್ಲೆಂಡ್ನಲ್ಲಿ ಆಚರಣೆ ಮಾಡಲಾಗಿತ್ತು. 2015 ರಲ್ಲಿ, ರಾಣಿ ಎಲಿಜಬೆತ್ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾವನ್ನು ಅವರ ಅವಧಿಯನ್ನು ಮೀರಿಸುವ ಮೂಲಕ ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ ಎನಿಸಿಕೊಂಡಿದ್ದರು. ಹಾಲಿ ವರ್ಷ ಅವರು ಅತೀ ದೀರ್ಘ ಅವಧಿಯ ಕಾಲ ದೇಶವನ್ನು ಆಳಿದ ವಿಶ್ವದ 2ನೇ ಮೊನಾರ್ಕ್ ಎನಿಸಿಕೊಂಡಿದ್ದರು. ಯುಕೆ ತನ್ನ ರಾಣಿಯ ಪ್ಲಾಟಿನಂ ಜುಬಿಲಿ ಮೈಲಿಗಲ್ಲನ್ನು ರಾಯಲ್ ಪರೇಡ್ಗಳು, ಪಾರ್ಟಿಗಳು ಮತ್ತು ಸಂಗೀತ-ನೃತ್ಯ ಪ್ರದರ್ಶನಗಳೊಂದಿಗೆ ಆಚರಣೆ ಮಾಡಿತ್ತು. ಈ ಹಂತದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಪತ್ರ ಬರೆದಿದ್ದ ಕ್ವೀನ್ ಎಲಿಜಬೆತ್, ಈ ಕಾರ್ಯಕ್ರಮಗಳು ನನ್ನ ಮನಸ್ಸಿನಾಳಕ್ಕೆ ತಟ್ಟಿದೆ ಎಂದು ತಿಳಿಸಿದ್ದರು.
70 ವರ್ಷ ದೇಶವನ್ನು ರಾಣಿ ಆಳಿದ್ದಾಳೆ, ಇದರ ಆಚರಣೆಯನ್ನು ಹೇಗೆ ಮಾಡುವುದು ಎನ್ನುವ ಕುರಿತಾಗಿ ಯಾವುದೇ ರಾಜನಿಯಮಗಳಿಲ್ಲ. ಯಾಕೆಂದರೆ, ಈ ಸಾಧನೆ ಇದೇ ಮೊದಲು ಎಂದು ಎಲಿಜಬೆತ್ ಪತ್ರದಲ್ಲಿ ಬರೆದಿದ್ದರು.
I had memorable meetings with Her Majesty Queen Elizabeth II during my UK visits in 2015 and 2018. I will never forget her warmth and kindness. During one of the meetings she showed me the handkerchief Mahatma Gandhi gifted her on her wedding. I will always cherish that gesture. pic.twitter.com/3aACbxhLgC
— Narendra Modi (@narendramodi)
ಪುತ್ರ ಚಾರ್ಲ್ಸ್ ಈಗ ಬ್ರಿಟನ್ ರಾಜ: ಎಲಿಜಬೆತ್ ರಾಣಿಯ (Queen Elizabeth II) ನಿಧನದೊಂದಿಗೆ ಮುಂದೆ ಬ್ರಿಟನ್ ರಾಜಮನೆತನದ (Britain Royal family) ಮುಖ್ಯಸ್ಥರು ಹಾಗೂ ದೇಶವನ್ನು ಆಳುವವರು ಯಾರು ಎನ್ನುವುದಕ್ಕೂ ತೆರೆಬಿದ್ದಿದೆ. ವೇಲ್ಸ್ನ ಮಾಜಿ ಪ್ರಿನ್ಸ್ (former Prince of Wales) ಚಾರ್ಲ್ಸ್ (Charles) ಹೊಸ ರಾಜನಾಗಲಿದ್ದಾರೆ. ಅವರೇ ಸ್ವತಃ ರಾಣಿಯ ನಿಧನವನ್ನು ಘೋಷಣೆ ಮಾಡಿದ್ದಾರೆ. "ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್ನಲ್ಲಿ ನೆಮ್ಮದಿಯಿಂದ ನಿಧನರಾದರು. ರಾಜ ಮತ್ತು ರಾಣಿ ಪತ್ನಿ ಇಂದು ಸಂಜೆ ಬಾಲ್ಮೋರಲ್ನಲ್ಲಿ ಉಳಿಯುತ್ತಾರೆ ಮತ್ತು ನಾಳೆ ಲಂಡನ್ಗೆ ಹಿಂತಿರುಗುತ್ತಾರೆ" ಎಂದು ರಾಜಮನೆತನವು ಟ್ವೀಟ್ ಮಾಡಿದೆ. ಬ್ರಿಟನ್ ಕಾಲಮಾನ ಸಂಜೆ 6.30ರ ವೇಳೆ ಅವರ ನಿಧನವಾಗಿದೆ ಎಂದು ವರದಿಯಾಗಿದೆ.
96 ವರ್ಷದ Queen Elizabeth II ಆರೋಗ್ಯದ ಬಗ್ಗೆ ಇಡೀ ದೇಶಕ್ಕೆ ಚಿಂತೆಯಾಗಿದೆ: ಬ್ರಿಟನ್ ಪ್ರಧಾನಿ
ರಾಣಿಯ ಆರೋಗ್ಯದ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲಿಯೇ, ರಾಣಿಯ ಕುಟುಂಬದ ಆಪ್ತರು ಅರಮನೆಗೆ ಆಗಮಿಸಿದ್ದರು ಎಂದು ಬಕಿಂಗ್ಹ್ಯಾಂ ಅರಮನೆ ತಿಳಿಸಿದೆ. ಪ್ರಸ್ತುತ ರಾಜಮನೆತನದಿಂದ ದೂರು ಉಳಿದು ವಾಸ ಮಾಡುತ್ತಿರುವ ಮೊಮ್ಮಗ ಹ್ಯಾರಿ ಹಾಗೂ ಆತನ ಪತ್ನಿ ಮೇಘನ್ ಮರ್ಕೆಲ್, ಕೆನಡಾದಿಂ ಲಂಡನ್ಗೆ ಆಗಮಿಸಿದ್ದರು. ಎಎಫ್ಪಿ ಪ್ರಕಾರ, ರಾಣಿ ಬುಧವಾರ ತನ್ನ ಹಿರಿಯ ರಾಜಕೀಯ ಸಲಹೆಗಾರರೊಂದಿಗೆ ಅದಾಗಲೇ ನಿಗದಿಯಾಗಿದ್ದ ಸಭೆಯಿಂದ ಅವಧಿಗೂ ಮುನ್ನವೇ ಹೊರಬಂದಿದ್ದರು. ಆ ಬಳಿಕ ಅವರಿಗೆ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಲಾಗಿತ್ತು. ಅದಕ್ಕೂ ಹಿಂದಿನ ದಿನ ಅವರು, ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಲಿಜ್ ಟ್ರಸ್ಗೆ ಅಧಿಕಾರ ನೀಡುವ ಸಭೆಯಲ್ಲಿ ಭಾಗಿಯಾಗಿದ್ದರು.
ಬ್ರಿಟನ್ ರಾಣಿಗೀಗ ವಿಶ್ವದ 2ನೇ ಸುದೀರ್ಘ ಆಳ್ವಿಕೆ ನಡೆಸಿದ ಹಿರಿಮೆ!
ಇತ್ತೀಚಿನ ತಿಂಗಳುಗಳಲ್ಲಿ, ರಾಣಿಯು ಬಹಳ ದುರ್ಬಲವಾಗಿ ಕಂಡಿದ್ದರು. ಅಲ್ಲದೆ, ಸಾಲು ಸಾಲು ಸಾರ್ವಜನಿಕ ಸಭೆಗಳಿಂದ ಅವರು ಭಾಗವಹಿಸಲು ನಿರಾಕರಿಸುತ್ತಿದ್ದರು. ಚೆಲ್ಸಿಯಾ ಫ್ಲವರ್ ಶೋಗೆ ಹೋಗಿದ್ದ ವೇಳೆ ನಡೆದಾಡಲು ಕೋಲಿನ ಸಹಾಯವನ್ನು ಅತಿಯಾಗಿ ಪಡೆದುಕೊಳ್ಳುತ್ತಿದ್ದರು. ಈ ವೇಳೆಯೇ ಅವರ ಆರೋಗ್ಯದ ಬಗ್ಗೆ ಬ್ರಿಟನ್ನಲ್ಲಿ ಕಳವಳ ವ್ಯಕ್ತವಾಗಿದ್ದವು.
ಪ್ರಧಾನಿ ನರೇಂದ್ರ ಮೋದಿ ಸಂತಾಪ: 2015 ಹಾಗೂ 2018ರಲ್ಲಿ ಇಂಗ್ಲೆಂಡ್ಗೆ ಭೇಟಿ ನೀಡಿದ್ದ ವೇಳೆ 2ನೇ ಕ್ವೀನ್ ಎಲಿಜಬೆತ್ರೊಂದಿಗೆ ಸಾಕಷ್ಟು ಸ್ಮರಣೀಯ ಸಭೆಯಗಳಲ್ಲಿ ನಾನು ಭಾಗವಹಿಸಿದ್ದೆ. ಅವರ ಮಮಕಾರ ಮತ್ತು ದಯೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ಮಹಾತ್ಮ ಗಾಂಧಿಯವರು ತಮ್ಮ ಮದುವೆಗೆ ಉಡುಗೊರೆಯಾಗಿ ನೀಡಿದ ಕರವಸ್ತ್ರವನ್ನು ನನಗೆ ತೋರಿಸಿದರು. ನಾನು ಯಾವಾಗಲೂ ಅವರನ್ನು ಗೌರವಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.