US Shooting: ಫೇಸ್‌ಬುಕ್‌ ಲೈವ್‌ ಮಾಡಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ; ಇಬ್ಬರ ಹತ್ಯೆ ಮಾಡಿದ ಆರೋಪಿ ವಶಕ್ಕೆ

By BK AshwinFirst Published Sep 8, 2022, 12:57 PM IST
Highlights

ಅಮೆರಿಕದ ಮೆಂಫಿಸ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಕೊಂದಿದ್ದಾನೆ. ಶಂಕಿತನನ್ನು 19 ವರ್ಷದ ಎಜೆಕಿಲ್ ಕೆಲ್ಲಿ ಎಂದು ಗುರುತಿಸಲಾಗಿದ್ದು, ನಂತರ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. 

ಅಮೆರಿಕದಲ್ಲಿ (United States of America) ಮತ್ತೆ ಗುಂಡಿನ ದಾಳಿ ನಡೆದಿದೆ. ಅಮೆರಿಕದ ಟೆನ್ನೆಸ್ಸಿಯ (Tennessee) ಮೆಂಫಿಸ್‌ನಲ್ಲಿ (Memphis) ಗುಂಡಿನ ದಾಳಿ (Shooting) ನಡೆದಿದ್ದು, ದಾಳಿಯಲ್ಲಿ ಕನಿಷ್ಠ ಇಬ್ಬರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಘಟನೆ ಸಂಬಂಧ 19 ವರ್ಷದ ಶಂಕಿತ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಂಕಿತ ವ್ಯಕ್ತಿಯನ್ನು ಎಜೆಕಿಲ್ ಕೆಲ್ಲಿ ಎಂದು ಗುರುತಿಸಲಾಗಿದ್ದು, ಮೆಂಫಿಸ್ ನಗರದ ಸುತ್ತಲೂ ವಾಹನ ಓಡಿಸಿ, ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೆ, ಈ ಕೃತ್ಯವನ್ನು ಫೇಸ್‌ಬುಕ್‌ ಲೈವ್‌ಸ್ಟ್ರೀಮ್‌ (Facebook Live Stream) ಮಾಡಿದ್ದಾನೆ ಎಂದು ವರದಿಯಾಗಿದೆ. ಆರೋಪಿ "ಹಲವು ಗುಂಡಿನ ದಾಳಿಗಳಿಗೆ" ಜವಾಬ್ದಾರನಾಗಿದ್ದಾನೆ ಎಂದೂ ಮೆಂಫಿಸ್‌ ಪೊಲೀಸರು ತಿಳಿಸಿದ್ದಾರೆ. 

ಅಮೆರಿಕ ಕಾಲಮಾನ ಬುಧವಾರ ಮಧ್ಯಾಹ್ನ ಶಂಕಿತ ಆರೋಪಿ ಅಂಗಡಿಯೊಂದಕ್ಕೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈತ ಹಲವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಊಹಿಸಲಾಗಿದೆ. ಹೌದು, ಫೇಸ್‌ಬುಕ್‌ ಲೈವ್‌ ಸ್ಟ್ರೀಮ್‌ ಮಾಡಿಕೊಂಡು ಶಂಕಿತ ಆರೋಪಿ ಗುಂಡಿನ ದಾಳಿ ನಡೆಸಿದ್ದಾನಂತೆ. ಶಂಕಿತ ಬಂದೂಕುಧಾರಿ ಅಂಗಡಿಗೆ ಪ್ರವೇಶಿಸಿ ಜನರ ಮೇಲೆ ಗುಂಡು ಹಾರಿಸುವುದನ್ನು ನಾವು ಫೇಸ್‌ಬುಕ್ ಲೈವ್ ಸ್ಟ್ರೀಮ್‌ನಲ್ಲಿ ಕಾಣಬಹುದಾಗಿದೆ.

Uttar Pradesh: ₹ 10 ಕೋಟಿ ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ: ವಾಂತಿಗೇಕಿಷ್ಟು ಬೆಲೆ ನೋಡಿ..!

There is an active shooter on the loose in Memphis right now who has been shooting people at random on Facebook Live.

This country has a MAJOR problem.

pic.twitter.com/Jre1BsU8yA

— dara faye (@darafaye)

ಇನ್ನು, ಶಂಕಿತ ಆರೋಪಿ ಘಟನೆ ಬಳಿಕ ತನ್ನ ವಾಹನವನ್ನು ಕ್ರ್ಯಾಶ್‌ (Vehicle Crash) ಮಾಡಿ, ಬಳಿಕ ಆ ಸ್ಥಳದಿಂದ ಪಲಾಯನವಾಗುವ ಮೊದಲು  ಬೂದು ಬಣ್ಣದ ಟೊಯೋಟಾ SUV ವೊಂದನ್ನು ಆ ವಾಹನದಲ್ಲಿದ್ದವರ ಸಮೇತ ಎತ್ತಿಕೊಂಡು ಹೋಗಿದ್ದಾನೆ (CarJack) ಎಂದೂ ಸ್ಥಳೀಯ ಮಾದ್ಯಮವೊಂದು ವರದಿ ಮಾಡಿದೆ. ಈ ವೇಳೆ ಅಪಘಾತದಲ್ಲಿ ಟೊಯೋಟಾ ಎಸ್‌ಯುವಿ ಚಾಲಕ ಗಾಯಗೊಂಡಿದ್ದಾನೆ.

ಈ ಮಧ್ಯೆ, ಅಮೆರಿಕದ ಮೆಂಫಿಸ್‌ ಪೊಲೀಸರು ಶಂಕಿತನ ಫೋಟೋವನ್ನು ಬಿಡುಗಡೆ ಮಾಡಿದರು ಮತ್ತು ಮೆಂಫಿಸ್ ನಿವಾಸಿಗಳಿಗೆ "ಈ ಪ್ರಕರಣವನ್ನು ಪರಿಹರಿಸುವವರೆಗೆ" ಮನೆಯೊಳಗೆ ಇರಲು ಸಲಹೆ ನೀಡಿದರು.  "ನೀವು ಹೊರಗೆ ಹೋಗಬೇಕಿಲ್ಲದಿದ್ದರೆ, ಈ ಕೇಸ್‌ ಪರಿಹರಿಸುವವರೆಗೆ ಮನೆಯೊಳಗೆ ಇರಿ" ಎಂದು ಮೆಂಫಿಸ್ ಪೊಲೀಸರು ಟ್ವೀಟ್‌ ಮೂಲಕ ಜನತೆಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಅಲ್ಲದೆ, ಈ ಘಟನೆ ಬಳಿಕ ಮೆಂಫಿಸ್‌ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಸಂದೇಶ ಕಳಿಸಿದೆ. ಕ್ಯಾಂಪಸ್ ಬಳಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ, ವಿಶ್ವವಿದ್ಯಾನಿಲಯದಿಂದ ಸುಮಾರು 4 ಮೈಲುಗಳಷ್ಟು ದೂರದಲ್ಲಿರುವ ರೋಡ್ಸ್ ಕಾಲೇಜು, ಕ್ಯಾಂಪಸ್‌ನಲ್ಲಿ ಮತ್ತು ಹೊರಗೆ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವಂತೆ ವಿವಿ ಸಲಹೆ ನೀಡಿದೆ. ಈ ಮಧ್ಯೆ, ಆರೋಪಿ ಬಂಧನವಾಗುವ ಮೊದಲು, ಶಂಕಿತನು ಟೆನ್ನೆಸ್ಸೀ ಸ್ಟೇಟ್ ಲೈನ್‌ ಮೂಲಕ ಅರ್ಕಾನ್ಸಾಸ್‌ಗೆ ಓಡಿಹೋದನೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿತ್ತು.

Momos ವಿಚಾರಕ್ಕೆ ದೆಹಲಿಯಲ್ಲಿ 40 ವರ್ಷದ ವ್ಯಕ್ತಿ ಹತ್ಯೆ; 18 ವರ್ಷದ ಆರೋಪಿ ಬಂಧನ

ಅಮೆರಿಕದಲ್ಲಿ ಗುಂಡಿನ ದಾಳಿಯ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಸೆಪ್ಟೆಂಬರ್ 1 ರಂದು ಸಹ ಡೆಟ್ರಾಯ್ಟ್‌ನಲ್ಲಿ ಗುಂಡಿನ ದಾಳಿ ನಡೆದು ಮೂವರನ್ನು ಬಂದೂಕುಧಾರಿಯು ಹತ್ಯೆಗೈದಿದ್ದ. ದಾಳಿಯ ಆಯುಧಗಳನ್ನು ಬ್ಯಾನ್‌ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಬಂದೂಕಿನ ಮೂಲಕ ಹಿಂಸೆಯ ಪ್ರಕರಣಗಳು ಹೆಚ್ಚದ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ. 

click me!