ಮಾಸ್ಕ್ ಇಲ್ಲದೇ ಫ್ಲೈಟ್‌ನಲ್ಲಿ ಪಾರ್ಟಿ... ಇನ್‌ಫ್ಲುಯೆನ್ಸರ್‌ಗಳ ರಿಟರ್ನ್‌ ಟಿಕೆಟ್‌ ರದ್ದು ಪಡಿಸಿದ ಏರ್‌ಲೈನ್ಸ್‌

By Suvarna NewsFirst Published Jan 7, 2022, 11:59 PM IST
Highlights
  • ಇವರ್ಯಾವ ಸೀಮೆ ಇನ್‌ಫ್ಲುಯೆನ್ಸರ್‌ಗಳು
  • ಕೊರೋನಾ ಟೈಮ್‌ ಅಲ್ಲಿ ಫ್ಲೈಟ್‌ನಲ್ಲಿ ಪಾರ್ಟಿ
  • ರಿಟರ್ನ್‌ ಟಿಕೆಟ್‌ ಕ್ಯಾನ್ಸಲ್ ಮಾಡಿದ ಏರ್‌ಲೈನ್ಸ್‌

ಕೆನಡಾ(ಜ. 7) : ಕ್ಯುಬೆಕ್‌ ಇನ್‌ಫ್ಲುಯೆನ್ಸರ್‌ಗಳ ಗುಂಪೊಂದು ವಿಮಾನದಲ್ಲೇ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಮಾಸ್ಕ್‌ ಹಾಕದೇ ಬಿಂದಾಸ್‌ ಆಗಿ ಪಾರ್ಟಿ ಮಾಡಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದಾದ ಬಳಿಕ ಇವರ ರಿಟರ್ನ್‌ ಟಿಕೆಟ್‌ಗಳನ್ನು ಏರ್‌ಲೈನ್ಸ್ ರದ್ದುಪಡಿಸಿದೆ. ಜೊತೆಗೆ ಇತರ ಏರ್‌ಲೈನ್ಸ್‌ಗಳಾದ ಏರ್‌ ಟ್ರಾನ್ಸಾಟ್ ಮತ್ತು ಏರ್ ಕೆನಡಾ ಕೂಡ ಇವರಿಗೆ ತಮ್ಮ ಫ್ಲೈಟ್‌ನಲ್ಲಿ ಪ್ರಯಾಣಿಸಲು ಅನುಮತಿ ನಿರಾಕರಿಸಿದೆ. ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಕ್ಷರಸ್ಥರು ಅನಕ್ಷರಸ್ಥರು ಎನ್ನದೇ ಸಾಮಾನ್ಯ ತಿಳುವಳಿಕೆ ಇರುವ ಪ್ರತಿಯೊಬ್ಬರು ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರೆ, ಇಲ್ಲಿ  ಇನ್‌ಫ್ಲುಯೆನ್ಸರ್‌ಗಳು ಎನಿಸಿಕೊಂಡವರೆ ಕೋವಿಡ್‌ ನಿಯಮ ಮೀರಿ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಇವರ ರಿಟರ್ನ್‌ ಟಿಕೆಟ್‌ ಜನವರಿ  5ಕ್ಕೆನಿಗದಿಯಾಗಿತ್ತು. 

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ, ಕ್ವಿಬೆಕ್‌ನ ಪ್ರಭಾವಿಗಳ ಗುಂಪು ವಿಮಾನದೊಳಗೆ ಭರ್ಜರಿ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿದೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ ಇವರ ಈ ಬೇಜವಾಬ್ದಾರಿತನದ ವೀಡಿಯೊ ವೈರಲ್‌ ಆಗಿದ್ದು, ಇದಕ್ಕೆ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ(Justin Trudeau)ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಮಾಧ್ಯಮಗಳ ವರದಿ ಪ್ರಕಾರ ಈ ಗುಂಪಿನಲ್ಲಿ  ರಿಯಾಲಿಟಿ ಶೋ ಲವ್ ಐಲ್ಯಾಂಡ್‌ನ(Love Island) ತಾರೆಗಳೂ ಇದ್ದರು ಎಂದು ತಿಳಿದು ಬಂದಿದೆ. 

En rappel, cette vidéo durant le party où on la voir fumer en plein vol : pic.twitter.com/tuX8NnKUdA

— Francis Pilon (@FrancisPilon_)

 

ಡೈಲಿ ಮೇಲ್‌ನ ವರದಿಯ ಪ್ರಕಾರ, 111 ಹೆಸರಿನ ಖಾಸಗಿ ಕ್ಲಬ್‌ನ ಸಂಸ್ಥಾಪಕರಾದ ಜೇಮ್ಸ್ ಅವದ್ (James Awad) ಅವರು ಈ ಪಾರ್ಟಿ ಟ್ರಿಪ್ ಅನ್ನು ಆಯೋಜಿಸಿದ್ದರು. ಅವರು ಡಿಸೆಂಬರ್ 30 ರಂದು ಚಾರ್ಟರ್ಡ್ ಸನ್‌ವಿಂಗ್ ವಿಮಾನದಲ್ಲಿ ಈ ಇನ್‌ಫ್ಲುಯೆನ್ಸರ್‌ಗಳ ಗುಂಪನ್ನು ಮೆಕ್ಸಿಕೊಗೆ( Mexico ) ಕಳುಹಿಸಿದ್ದರು. ವೈರಲ್ ವೀಡಿಯೊದಲ್ಲಿ, ವಿಮಾನದಲ್ಲಿ ಮಾಸ್ಕ್‌ ಇಲ್ಲದೇ ಜನರ ಗುಂಪು ಪಾರ್ಟಿ ಮಾಡುವುದನ್ನು ಕಾಣಬಹುದು. ಜೊತೆಗೆ ನೃತ್ಯ ಮತ್ತು ಧೂಮಪಾನ ಮಾಡುತ್ತಿರುವುದು ಕೂಡ ಕಂಡುಬಂದಿದೆ. ಹೊಸ ವರ್ಷದ ಮುನ್ನಾ ದಿನದಂದು ಈ ವಿಮಾನವು ಮೆಕ್ಸಿಕೋಗೆ ಹೊರಟಿತ್ತು.

ತಂದೆ ಶವದ ಜೊತೆ ಮಾಡಲ್ ಜಯ್ನೆ ಫೋಟೋ ಶೂಟ್: ಹಿಗ್ಗಾಮುಗ್ಗಾ ಟೀಕೆ ಮಾಡಿದ ನೆಟ್ಟಿಗರು

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕೆನಡಾದ ಸಾರಿಗೆ ಮತ್ತು ಆರೋಗ್ಯ ಮತ್ತು ಸಾರ್ವಜನಿಕ ಸುರಕ್ಷತಾ ಸಚಿವ ಒಮರ್ ಅಲ್ಗಾಬ್ರಾ(Omar Alghabra)   ಘಟನೆಯ ಬಗ್ಗೆ ತಕ್ಷಣ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಈ  ಬೇಜವಾಬ್ದಾರಿ ಕೃತ್ಯವನ್ನು ಖಂಡಿಸಿದರು. ಅಲ್ಲದೇ ಪ್ರಭಾವಿಗಳ ವೀಡಿಯೋ ನೋಡಿ ತೀವ್ರ ಹತಾಶನಾಗಿದ್ದೇನೆ ಎಂದರು. 

ಬೆವರುವಿಕೆ ಸರಿಪಡಿಸಲು ಸರ್ಜರಿ; 23 ವರ್ಷದ ಇನ್‌ಸ್ಟಾಗ್ರಾಂ ತಾರೆ ಸಾವು!

ಜನರು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದನ್ನು ನಾನು ತಿಳಿದಿದ್ದೇನೆ., ಕ್ರಿಸ್‌ಮಸ್ ಸಮಯದಲ್ಲಿ ತಮ್ಮ ಕುಟುಂಬದ ಔತಣಕೂಟಕ್ಕೆ ಜನರ ಮಿತಿಗೊಳಿಸಲು, ಮಾಸ್ಕ್‌  ಧರಿಸಲು, ಲಸಿಕೆಯನ್ನು ಪಡೆಯಲು, ಎಲ್ಲಾ ಸರಿಯಾದ ಕೆಲಸಗಳನ್ನು ಮಾಡಲು ಎಷ್ಟು ಶ್ರಮಿಸಿದ್ದಾರೆಂದು ನಮಗೆ ತಿಳಿದಿದೆ. ಆದರೆ ಎಲ್ಲಾ ತಿಳಿದ ಈ ಪ್ರಭಾವಿಗಳು ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ವರ್ತಿಸಿ ವಿಮಾನಯಾನದ ನೌಕರರನ್ನು ಹಾಗೂ ಇತರ ನಾಗರಿಕರನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಘಟನೆಯ ನಂತರ, ಸನ್‌ವಿಂಗ್ ಏರ್‌ಲೈನ್ಸ್ (Sunwing Airlines) ಜನವರಿ 5 ರಂದು ಈ ನಿಗದಿತ ಗುಂಪಿನ ರಿಟರ್ನ್ ಫ್ಲೈಟ್ ಅನ್ನು ರದ್ದುಗೊಳಿಸಿತು. ನಂತರ ಏರ್ ಟ್ರಾನ್ಸಾಟ್ ಮತ್ತು ಏರ್ ಕೆನಡಾದಂತಹ ಇತರ ಏರ್‌ಲೈನ್‌ಗಳು ಸಹ ಅವರಿಗೆ ಪ್ರಯಾಣಕ್ಕೆ ಅವಕಾಶ ನಿರಾಕರಿಸಿದವು.

click me!