ಭಾರತಕ್ಕೆ ರಾಜತಾಂತ್ರಿಕ ಗೆಲುವು, ನೌಕಾಸೇನೆ ಮಾಜಿ ಅಧಿಕಾರಿಗಳ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್!

By Suvarna News  |  First Published Dec 28, 2023, 4:09 PM IST

ಗೂಢಚರ್ಯೆ ಆರೋಪದಲ್ಲಿ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ವಾಯುಪಡೆಗೆ 8 ನಿವೃತ್ತಿ ಸಿಬ್ಬಂದಿಗಳಿಗೆ ರಿಲೀಫ್ ಸಿಕ್ಕಿದೆ. ಭಾರದದ ಮೇಲ್ಮನವಿಗೆ ಸ್ಪಂದಿಸಿದ ಕೋರ್ಟ್, ಗಲ್ಲುಶಿಕ್ಷೆಯನ್ನು ಜೈಲುಶಿಕ್ಷೆಗೆ ಕಡಿತಗೊಳಿಸಿದೆ.


ಕತಾರ್(ಡಿ.28) ಬೇಹುಗಾರಿಕೆ ಆರೋಪದ ಮೇಲೆ ದಹ್ರಾ ಗ್ಲೋಬಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಕತಾರ್ ನ್ಯಾಯಾಲಯ ಕಡಿತಗೊಳಿಸಿದೆ. ಗಲ್ಲು ಶಿಕ್ಷೆ ಕಡಿತಗೊಳಿಸಿ ಇದೀಗ ಜೈಲು ಶಿಕ್ಷೆ ವಿಧಿಸಲಾಗಿದೆ. COP28 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕತಾರ್ ಶೇಕ್ ತಮೀಮ್ ಬಿನ್ ಹಮಾದ್ ಅಲ್ ತಾನಿ ಭೇಟಿಯಾದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಹೊರಬಂದಿರುವುದು ಭಾರತದ ರಾಜತಾಂತ್ರಿಕತೆಗೆ ಸಿಕ್ಕಿದ ಅತೀ ದೊಡ್ಡ ಗೆಲುವು ಎಂದೇ ಪರಿಗಣಿಸಲಾಗುತ್ತಿದೆ. 

ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಮರುಪರಿಶೀಲಿಸಲು ಭಾರತ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ  COP28 ಶೃಂಗಸಭೆಯಲ್ಲಿ ಕತಾರ್ ಸರ್ಕಾರದ ಸಚಿವರು ಹಾಗೂ ಹಲವು ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಕತಾರ್ ಕೋರ್ಟ್ ಮಹತ್ವದ ನಿರ್ಧಾರ ಘೋಷಿಸಿದೆ. ಇದೀಗ 9 ನಿವೃತ್ತ ಸೇನಾಧಿಕಾರಿಗಳ ಗಲ್ಲು ಶಿಕ್ಷೆ ರದ್ದುಗೊಳಿಸಿ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 

Tap to resize

Latest Videos

ಚೀನಾ ಹತ್ತಿಕ್ಕಲು ಅಮೆರಿಕಾ ಜೊತೆ ಸೇರಿ ಜಂಟಿಯಾಗಿ ಸೇನಾ ಸ್ಟ್ರೈಕರ್ ನಿರ್ಮಾಣಕ್ಕೆ ಭಾರತ ನಿರ್ಧಾರ

ಕತಾರ್ ಕೋರ್ಟ್ ಆದೇಶದ ಪ್ರತಿ ಇನ್ನೂ ಲಭ್ಯವಾಗಿಲ್ಲ. ನಾವು ಕಾನೂನು ತಜ್ಞರ ಜೊತೆ ಹಾಗೂ ನಿವೃತ್ತ ಸೇನಾಧಿಕಾರಿಗಳ ಕುಟುಂಬದ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ. ಕೋರ್ಟ್ ಆದೇಶ ಪ್ರತಿ ಸಿಕ್ಕ ಬಳಿಕ ಮುಂದಿನ ನಿರ್ಧಾರದ ಕುರಿತು ಚರ್ಚಿಸುತ್ತೇವೆ ಎಂದು ಜೈಶಂಕರ್ ಹೇಳಿದ್ದಾರೆ. ಈ ಪ್ರಕರಣದ ಆರಂಭದಿಂದಲೂ ನಾವು ಸೇನಾಧಿಕಾರಿಗಳ ಕುಟುಂಬದ ಜೊತೆ ನಿಂತಿದ್ದೇವೆ. ಎಲ್ಲಾ ರೀತಿಯ ಕಾನೂನು ನೆರವು ನೀಡಿದ್ದೇವೆ. ಒಂದೆಡೆಯಿಂದ ಕಾನೂನು ಹೋರಾಟ, ಮತ್ತೊಂದೆಡೆಯಿಂದ ಈ ವಿಚಾರವನ್ನು ಕತಾರ್ ಅಧಿಕಾರಿಗಳ ಜೊತೆಗೂ ಚರ್ಚಿಸಿದ್ದೇವೆ. ಭಾರತ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಭಾರತ ವಿದೇಶಾಂಗ ನೀತಿಯನ್ನು ಬಹುತೇಕ ದೇಶಗಳು ಮೆಚ್ಚಿಕೊಂಡಿದೆ. ಬದ್ಧವೈರಿ ಪಾಕಿಸ್ತಾನ ಕೂಡ ಪದೇ ಪದೇ ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದೆ. ಸಮರ್ಥ ವಿದೇಶಾಂಗ ನೀತಿ ಹಾಗೂ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಬಳಸಿಕೊಂಡಿರುವ ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ಎಂದು ಹಲವರು ಬಣ್ಣಿಸಿದ್ದಾರೆ.  

ಕಮಾಂಡ್‌ಗಳಾಗಿದ್ದ  ಪುರ್ನೆಂದು ತಿವಾರಿ, ಸುಗುನಾಕರ್ ಪಕಲ, ಅಮಿತ್ ನಾಗಪಾಲ್, ಸಂಜೀವ್ ಗುಪ್ತಾ ಹಾಗೂ ಕ್ಯಾಪ್ಟನ್‌ಗಳಾಗಿದ್ದ ನವತೇಜ್ ಸಿಂಗ್ ಗಿಲ್, ಬಿರೇಂದ್ರ ಕುಮಾರ್ ವರ್ಮಾ, ಸೌರಬ್ ವಶಿಷ್ಠ, ನಾಕೆ ಸೇನೆ ನಾವಿಕ ರಾಜೇಶ್ ಗೋಪಕುಮಾರ್ ಕತಾರ್‌ನಲ್ಲಿ ಬಂಧನಕ್ಕೊಳಗಾಗಿದ್ದರು.  ಇವರ ಮೇಲೆ ಆರೋಪವನ್ನು ಇದುವರೆಗೆ ಕತಾರ್ ಬಹಿರಂಗಪಡಿಸಿಲ್ಲ. ಗೂಡಚರ್ಯೆ ಆರೋಪದ ಮೇಲೆ ಬಂಧಿಸಲಾಗಿತ್ತು. ಗಲ್ಲುಶಿಕ್ಷೆಗೆ ಗುರಿಯಾದ ಎಂಟು ಮಂದಿಯ ವಿರುದ್ಧ ಕತಾರ್‌ ಪೊಲೀಸರು ಇಸ್ರೇಲ್‌ನ ಪರ ಗೂಢಚರ್ಯೆ ನಡೆಸಿದ ಆರೋಪ ಹೊರಿಸಿದ್ದರು. ಇದಕ್ಕೆ ಪೂರಕವಾದ ಡಿಜಿಟಲ್ ಸಾಕ್ಷ್ಯಗಳಿವೆ ಎಂಬುದನ್ನು ಮಾತ್ರ ಹೇಳಿದ್ದರು. ಆದರೆ ನಿರ್ದಿಷ್ಠ ಆರೋಪಗಳ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. 

ಆಂತರಿಕ ವಿಷಯದಲ್ಲಿ ಕೆನಡಾ ದೂತರ ಹಸ್ತಕ್ಷೇಪ: ಕೆನಡಾ ಜತೆ ಸಂಬಂಧ ಸುಧಾರಣೆಗೆ ಜೈಶಂಕರ್ ಷರತ್ತು ಹೀಗಿದೆ..

ಬೇಹುಗಾರಿಕೆ ಆರೋಪದ ಮೇಲೆ ಕಳೆದ ಅ.26ರಂದು ಈ 8 ನಿವೃತ್ತ ಸೇನಾಧಿಕಾರಿಗಳಿಗೆ ಕತಾರ್ ಕೋರ್ಟ್ ಗಲ್ಲು ಶಿಕ್ಷೆ ನೀಡಿತ್ತು.  ಕತಾರ್‌ ಸ್ಥಳೀಯ ನ್ಯಾಯಾಲಯದ ತೀರ್ಪು ಆಘಾತಕಾರಿ ಎಂದು ಬಣ್ಣಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ಅವರನ್ನು ರಕ್ಷಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕಾನೂನಾತ್ಮಕ ಮಾರ್ಗಗಳನ್ನು ಉಪಯೋಗಿಸುವುದಾಗಿ ಹೇಳಿತ್ತು.

click me!