Puttige mutt in America | ಅಮೆರಿಕಾದಲ್ಲಿ ಸ್ಥಾಪನೆಯಾಯ್ತು ಪುತ್ತಿಗೆ ಶಾಖಾಮಠ

Kannadaprabha News   | Asianet News
Published : Nov 23, 2021, 08:39 AM IST
Puttige mutt in America | ಅಮೆರಿಕಾದಲ್ಲಿ ಸ್ಥಾಪನೆಯಾಯ್ತು  ಪುತ್ತಿಗೆ ಶಾಖಾಮಠ

ಸಾರಾಂಶ

 ಅಮೆರಿಕದ ಸಿಯಾಟಲ್‌ನಲ್ಲಿ  ಪುತ್ತಿಗೆ ಮಠದ ಶಾಖೆ ತೆರೆದ  ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಮಠದ 9ನೇ ಶಾಖೆಯನ್ನು ಅಮೆರಿಕದ ಸಿಯಾಟಲ್‌ ನಗರದಲ್ಲಿ ವೆಂಕಟಕೃಷ್ಣ ವೃಂದಾವನ ಎಂಬ ಹೆಸರಿನಲ್ಲಿ ಲೋಕಾರ್ಪಣೆ

 ಉಡುಪಿ (ನ.23):  ಇಲ್ಲಿನ ಪುತ್ತಿಗೆ ಮಠದ (Puttige Mutt) ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (Sugunendra Theertha shripadaru) ತಮ್ಮ ಮಠದ 9ನೇ ಶಾಖೆಯನ್ನು ಅಮೆರಿಕದ (America) ಸಿಯಾಟಲ್‌ ( Seattle ) ನಗರದಲ್ಲಿ ವೆಂಕಟ ಕೃಷ್ಣ ವೃಂದಾವನ ಎಂಬ ಹೆಸರಿನಲ್ಲಿ ನ.20ರಂದು ಲೋಕಾರ್ಪಣೆಗೊಳಿಸಿದರು.  ಅಂದು ಶ್ರೀಗಳ 60ನೇ ವರ್ಷದ ಜನ್ಮದಿನವೂ ಆಗಿದ್ದು, ಅದೇ ದಿನ ಶಾಖಾ ಮಠವನ್ನು ಉದ್ಘಾಟಿಸಿರುವುದು ವಿಶೇಷ ಸಂಯೋಗವಾಗಿದೆ. ಅಮೆರಿಕದ (America) ಸಹ್ಯಾದ್ರಿ ಕನ್ನಡ ಸಂಘದ ಸದಸ್ಯರು, ಇತರ ಭಾರತೀಯ ಸಂಘಟನೆಗಳು (Indian Organisations)  ಮತ್ತು ಭಕ್ತರು ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು.

ಈ ಮೂಲಕ ಸಿಯಾಟಲ್‌ ನಗರದ ಕೃಷ್ಣ ಭಕ್ತರ 5 ವರ್ಷದ ಕನಸು ಕಡೆಗೂ ನನಸಾದಂತಾಗಿದೆ. ಈ ವೆಂಕಟ ಕೃಷ್ಣ ವೃಂದಾವನವು ಪ್ರಸ್ತುತ ಅರ್ಚಕರೊಬ್ಬರ ಮನೆಯಲ್ಲಿ ಕಾರ್ಯಾರಂಭಗೊಂಡಿದೆ. ಶ್ರೀಗಳ ಮಠದ ಇಬ್ಬರು ಶಿಷ್ಯರು ಇಲ್ಲಿ ಪೂಜೆ ಮತ್ತು ಪೌರೋಹಿತ್ಯಾದಿ ಸೇವೆಗಳನ್ನು ನಿರ್ವಹಿಸಲು ಉಪಸ್ಥಿತರಿರುತ್ತಾರೆ ಎಂದು ಶ್ರೀಗಳ ಸಾಗರೋತ್ತರ ಸಂಯೋಜಕ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ. 

ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಗಳು :   ಮಹಾಲಕ್ಷ್ಮಿಯ(Mahalakshmi) ದಿವ್ಯ ಸನ್ನಿಧಾನವಿರುವ ತೈಲಾಭ್ಯಂಜನವು ಆರೋಗ್ಯದ(Health) ಅಭಿವೃದ್ಧಿಗೆ ಕಾರಣವಾಗಿದೆ. ನರಕಾಸುರನನ್ನು ಸಂಹರಿಸಿ ಸಜ್ಜನರನ್ನು ಸಂರಕ್ಷಿಸಿದ ಶ್ರೀಕೃಷ್ಣನ ಸಂಪ್ರೀತಿಗಾಗಿ ದೀಪಾವಳಿಯ ಚತುರ್ದಶಿಯಂದು ಎಲ್ಲರೂ ತಪ್ಪದೇ ತೈಲಾಭ್ಯಂಜನವನ್ನು ಮಾಡಬೇಕು ಎಂದು ಹಿರಿಯರಿಂದ ಆಶೀರ್ವಾದದ ರೂಪದಲ್ಲಿ ತೈಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು(Shri Surugendra Tiirthapaadaru) ತಿಳಿಸಿದ್ದರು. ಅಮೆರಿಕದ(America) ‌ಸ್ಯಾನ್ ಝೋನ್ ಮಹಾನಗರದಲ್ಲಿರುವ ಶ್ರೀಕೃಷ್ಣ ವೃಂದಾವನದಲ್ಲಿ(Sri Krishna Vrindavan) ದೀಪಾವಳಿಯ(Deepavali) ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು

ಎಲ್ಲರಿಗೂ ತೈಲವನ್ನು ಹಚ್ಚಿ ವಿಶೇಷವಾಗಿ ಮಕ್ಕಳಿಗೂ ತೈಲವನ್ನು ಹಚ್ಚಿ ಅನುಗ್ರಹಿಸಿದ್ದ ಶ್ರೀಗಳು. ಈ ಸಂದರ್ಭದಲ್ಲಿ ಅನೇಕ ಭಕ್ತರು ಭಾಗವಹಿಸಿ ಶ್ರೀಪಾದರ ಅನುಗ್ರಹವನ್ನು ಪಡೆದಿದ್ದರು.  ನರಕಾಸುರನನ್ನು ಸಂಹರಿಸಿ ಸಜ್ಜನರನ್ನು ಸಂರಕ್ಷಿಸಿದ ಶ್ರೀಕೃಷ್ಣನ ಸಂಪ್ರೀತಿಗಾಗಿ ದೀಪಾವಳಿಯ ಚತುರ್ದಶಿಯಂದು ಎಲ್ಲರೂ ತಪ್ಪದೇ ತೈಲಾಭ್ಯಂಜನವನ್ನು ಮಾಡಬೇಕು ಎಂದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಅಮೆರಿಕದ ‌ಸ್ಯಾನ್ ಝೋನ್ ಮಹಾನಗರದಲ್ಲಿರುವ ಶ್ರೀಕೃಷ್ಣ ವೃಂದಾವನದಲ್ಲಿ ಸಂಭ್ರಮದ ದೀಪಾವಳಿ. ಈ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದರಿಂದ ಅಮೆರಿಕದಲ್ಲಿರುವ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. 

ಕೋವಿಡ್ ಸಭೆಯಲ್ಲಿ ಭಾಗಿಯಾಗಿದ್ದ ಶ್ರೀಗಳು :   ಭಾರತವೂ ಗರಿಷ್ಠ ಪ್ರಮಾಣದಲ್ಲಿ ಕೋವಿಡ್‌ ಲಸಿಕೆಗಳನ್ನು ಉತ್ಪಾದಿಸಿ, ವಿಶ್ವದ ಇತರ ದೇಶಗಳಿಗೆ ನೆರವಾಗಬೇಕೆಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್‌ ಆ್ಯಡನಮ್‌ ಗೇಬ್ರಿಯೇಸಸ್‌ ಅವರ ನೇತೃತ್ವದಲ್ಲಿ ಕೋವಿಡ್‌ ಬಗ್ಗೆ ನಡೆದ ಜಾಗತಿಕ ನಾಯಕರ ವರ್ಚುವಲ್‌ ತುರ್ತುಸಭೆಯಲ್ಲಿ ಭಾಗವಹಿಸಿದ್ದ ಶ್ರೀಗಳು, ಸಭೆಯ ಆಶಯದಂತೆ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಬಗ್ಗೆ ಕೇಂದ್ರ ಸರ್ಕಾರವನ್ನು ವಿನಂತಿಸಿದರು.

ಕೋವಿಡ್‌ ದ್ವಿತೀಯ ಅಲೆಯು ವಾಸ್ತವಿಕವಾಗಿ ಕಳೆದ ಬಾರಿಗಿಂತಲೂ ತೀವ್ರ ಹಾಗೂ ಕ್ಷಿಪ್ರಕರವಾಗಿದೆ. ದ್ವಿತೀಯ ಅಲೆಯು ತೀವ್ರಗೊಳ್ಳಲು ಡಿಸೆಂಬರ್‌-ಜನವರಿಯಲ್ಲಿ ಜನರು ತೋರಿದ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಅಭಿಪ್ರಾಯ ವ್ಯಕ್ತವಾಯಿತು. ಆದರೆ ಜನರಲ್ಲಿ ಆತಂಕ ಕಡಿಮೆ ಮಾಡುವುದಕ್ಕಾಗಿ ಫ್ರಾಸ್ಸ್‌, ಇಟಲಿ ಮೊದಲಾದ ದೇಶಗಳು ಸಂತ್ರಸ್ತರ ವಾಸ್ತವ ಸಂಖ್ಯೆಗಳನ್ನು ಪ್ರಕಟಿಸುತ್ತಿಲ್ಲ.

ಅಲ್ಲದೇ ದ್ವಿತೀಯ ಅಲೆಯನ್ನು ಎದುರಿಸಲು ಅನೇಕ ದೇಶಗಳಿಗೆ ಲಸಿಕೆಯು ಅಲಭ್ಯವಾಗಿರುವುದೂ ತೊಡಕಾಗಿದೆ. ಕಳೆದ ಬಾರಿ ಕೊರೋನಾವನ್ನು ಲಘುವಾಗಿ ತೆಗೆದುಕೊಂಡದ್ದು ಕೂಡ ಮುಖ್ಯ ಕಾರಣವಾಗಿದೆ. ಆದರೆ ಈ ಬಾರಿಯ ಕೊರೋನಾ ವಿಲಕ್ಷಣ ಸ್ವರೂಪ ಹೊಂದಿದ್ದು, ಕಳೆದ ಬಾರಿಯ ಕೊರೋನಾಕ್ಕಿಂತ ವಿಭಿನ್ನವಾಗಿದೆ ಎಂಬುದನ್ನು ಜನತೆ ತಿಳಿದುಕೊಳ್ಳಬೇಕು ಎಂದು ಸಭೆಯು ಅಭಿಪ್ರಾಯಪಟ್ಟಿತು ಎಂದು ಶ್ರೀಗಳು ಹೇಳಿದ್ದಾರೆ. ಈಗ ಜಗತ್ತಿನ ಅನೇಕ ದೇಶಗಳು ಲಸಿಕೆಗಾಗಿ ಭಾರತದತ್ತ ಮುಖ ಮಾಡಿದ್ದು, ಈ ನಿಟ್ಟಿನಲ್ಲಿ ಭಾರತವು ಶಕ್ತಿ ಮೀರಿ ಲಸಿಕೆಯನ್ನು ಉತ್ಪಾದನೆ ಮಾಡಿ ಇತರ ದೇಶಗಳಿಗೆ ಪೂರೈಕೆ ಮಾಡುವಂತೆ ಸಭೆಯ ಪರವಾಗಿ ಪುತ್ತಿಗೆ ಶ್ರೀಗಳು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ