ಕೆಲಸದ ನಡುವೆ ಬ್ರೇಕ್‌ನಲ್ಲೂ ಮಾಡಿ: ಜನಸಂಖ್ಯಾ ಹೆಚ್ಚಳಕ್ಕೆ ಕ್ರೇಜಿ ಸಲಹೆ ನೀಡಿದ ರಸಿಕ ಪುಟಿನ್

By Suvarna NewsFirst Published Sep 17, 2024, 5:27 PM IST
Highlights

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ದೇಶದ ಜನಸಂಖ್ಯೆ ಹೆಚ್ಚಿಸುವುದಕ್ಕಾಗಿ ಜನರಿಗ ಹೊಸ ಸಲಹೆಯೊಂದನ್ನು ನೀಡಿದ್ದು, ಈ ವಿಚಾರವೀಗ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 1 ಸ್ಥಾನದಲ್ಲಿರುವ ಭಾರತದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದ್ದು, ಜನ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ದೇಶದ ಜನಸಂಖ್ಯೆ ಹೆಚ್ಚಿಸುವುದಕ್ಕಾಗಿ ಜನರಿಗ ಹೊಸ ಸಲಹೆಯೊಂದನ್ನು ನೀಡಿದ್ದು, ಈ ವಿಚಾರವೀಗ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 1 ಸ್ಥಾನದಲ್ಲಿರುವ ಭಾರತದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದ್ದು, ಜನ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಹಾಗಿದ್ರೆ ಜನಸಂಖ್ಯಾ ಹೆಚ್ಚಳಕ್ಕೆ ಪುಟಿನ್ ನೀಡಿದ ಸಲಹೆ ಏನು ಇಲ್ಲಿದೆ ಡಿಟೇಲ್ ಸ್ಟೋರಿ. 

ರಷ್ಯಾದಲ್ಲಿ ಜನಸಂಖ್ಯೆಯ ಪ್ರಮಾಣ ತೀವ್ರವಾಗಿ ಇಳಿಕೆಯಾಗುತ್ತಿದೆ. ಮೆಟ್ರೋ ವರದಿಗಳ ಪ್ರಕಾರ ದೇಶದಲ್ಲಿನ ಮಹಿಳೆಯರ ಫಲವತತ್ತೆ ಪ್ರಮಾಣದಲ್ಲೂ ತೀವ್ರ ಇಳಿಕೆಯಾಗಿದೆ.  ದೇಶದಲ್ಲಿ ಜನಸಂಖ್ಯೆ ಪ್ರಮಾಣ ಸ್ಥಿರವಾಗಿರಲು ಪ್ರತಿ ಮಹಿಳೆಯ ಫಲವತ್ತತೆ ಪ್ರಮಾಣ 2.1 ಮಕ್ಕಳಷ್ಟಿರಬೇಕು. ಆದರೆ ರಷ್ಯಾದಲ್ಲಿ ಇದು ಪ್ರತಿ ಮಹಿಳೆಗೆ 1.5ಮಕ್ಕಳಿಗೆ ಕುಸಿದಿದೆ. ಹೀಗಾಗಿ ಜನಸಂಖ್ಯೆ ಇಳಿಕೆ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಷ್ಯಾ ಅಧ್ಯಕ್ಷರು, ದೇಶದ ಜನ ಸಂತಾನಾಭಿವೃದ್ಧಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು, ಊಟ ಹಾಗೂ ಕಾಫಿ ತಿಂಡಿ ಮಾಡುವ ಸಮಯವನ್ನು ಕೂಡ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. 

Latest Videos

ರಷ್ಯಾದ ಜನಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವೂ ಜನಸಂಖ್ಯೆ ಕುಸಿತಕ್ಕೆ ಒಂದು ಕಾರಣವಾಗಿದೆ. ಯುದ್ಧದ ಪರಿಣಾಮವಾಗಿ ಲಕ್ಷಾಂತರ ಜನ ಅದರಲ್ಲೂ ವಿಶೇಷವಾಗಿ ಎಳೆ ಪ್ರಾಯದ ಯುವಕ ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ರಷ್ಯಾದ ಆರೋಗ್ಯ ಸಚಿವ ಡಾ. ಯೆವ್ಗೆನಿ ಶೆಸ್ಟೊಪಲೋವ್ ಅವರು ಕೂಡ ಅಧ್ಯಕ್ಷ ಪುಟಿನ್ ಅವರ ಈ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ನಿಮ್ಮ ಕೆಲಸ ಅಡ್ಡಿಯಾಗಬಾರದು ಎಂದು ಹೇಳಿರುವ ಯೆವೆನ್ಗಿ, ಕುಟುಂಬವನ್ನು ಸಂತಾನವನ್ನು ಬೆಳೆಸುವುದಕ್ಕಾಗಿ ಉಪಹಾರ ಹಾಗೂ ಊಟದ ವಿರಾಮವನ್ನು ಕೂಡ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.  ಕೆಲಸದಿಂದಾಗಿ ಸಮಯವಿಲ್ಲ ಎಂಬುದು ಸರಿಯಾದ ಕಾರಣವಲ್ಲ,  ನೀವು ವಿರಾಮದ ಸಮಯವನ್ನು ಸಂತಾನೋತ್ಪಿತಿ ಕೆಲಸಕ್ಕಾಗಿ ಬಳಸಿ, ಏಕೆಂದರೆ ಜೀವನ ತುಂಬಾ ವೇಗವಾಗಿ ಸಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಯೆವ್ಗೆನಿ ಶೆಸ್ಟೊಪಲೋವ್ ಹೇಳಿದ್ದಾರೆ. 

ಶಿಫ್ಟ್‌ಗಳಲ್ಲಿ ಬಹಳ ದೀರ್ಘಾವಧಿಯವರೆಗೆ ಕೆಲಸ ಮಾಡುವವರಿಗೆ ಈ ಸಲಹೆ ಯಶಸ್ವಿಯಾಗುವುದೇ ಎಂದು ಕೇಳಿದಾಗ, ಇರುವ ಪ್ರತಿಯೊಂದು ಅವಕಾಶವನ್ನು ಜನ ಬಳಸಿಕೊಳ್ಳಬೇಕು, ವಿರಾಮದ ಸಮಯದಲ್ಲಿ ಮಗುವನ್ನು ಮಾಡಬೇಕು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. 

ಆದರೆ ಈ ವಿಚಿತ್ರ ಸಲಹೆಯೂ ಸೇರಿದಂತೆ ರಷ್ಯಾ ಸರ್ಕಾರವೂ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುವ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. 18 ರಿಂದ 40 ವರ್ಷ ವಯಸ್ಸಿನ ಮಹಿಳೆಯರು ತಮ್ಮ ಮರುಉತ್ಪಾದನೆಯ (reproductive) ಸಾಮರ್ಥ್ಯವನ್ನು ತಿಳಿಯಲು ಉಚಿತವಾಗಿ ಫಲವತ್ತತೆ ಪರೀಕ್ಷೆಗೆ ( fertility screenings) ಒಳಗಾಗಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಅಲ್ಲದೇ ಗರ್ಭಪಾತಕ್ಕೆ ಅವಕಾಶ ನಿರ್ಬಂಧಿಸುವುದರ ಜೊತೆ ಧಾರ್ಮಿಕ ಮುಖಂಡರುಗಳ ಮೂಲಕ ಮಾತೃತ್ವಕ್ಕೆ ಆಧ್ಯತೆ ನೀಡಲು ಮಹಿಳೆಯರಿಗೆ ಸಲಹೆ ನೀಡಿ ಮನವೊಲಿಸಲಾಗುತ್ತಿದೆ. ಅಲ್ಲದೇ ಕುಟುಂಬವನ್ನು ಉಳಿಸುವ ಭಾಗವಾಗಿ ವಿಚ್ಚೇದನ ಶುಲ್ಕವನ್ನು ಕೂಡ ಹೆಚ್ಚು ಮಾಡಲಾಗಿದೆ. 

ರಷ್ಯಾದಲ್ಲಿ 25 ವರ್ಷದಲ್ಲೇ  ಜನಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ಜೂನ್‌ನಲ್ಲಿ ಇದೇ ಮೊದಲ ಬಾರಿ ಒಂದು ಲಕ್ಷಕ್ಕಿಂತ ಕಡಿಮೆ ಮಕ್ಕಳು ಜನಿಸಿರುವುದು ಗೊತ್ತಾಗಿದೆ.  ಜನವರಿ ಮತ್ತು ಜೂನ್ 2024 ರ ನಡುವೆ, ರಷ್ಯಾದಲ್ಲಿ ಒಟ್ಟು 599,600 ಮಕ್ಕಳು ಜನಿಸಿದ್ದಾರೆ. 2023ಕ್ಕೆ ಹೋಲಿಸಿದರೆ ಮಕ್ಕಳ ಸಂಖ್ಯೆಯಲ್ಲಿ 16 ಸಾವಿರದಷ್ಟು ಇಳಿಕೆಯಾಗಿದೆ.

click me!