ಅಸ್ಸಲಾಂ ಅಲೈಕುಂ.. ಏರ್‌ ಇಂಡಿಯಾ ಸೇವೆ ಪ್ರಶಂಸಿದ ಪಾಕಿಸ್ತಾನ!

By Kannadaprabha NewsFirst Published Apr 5, 2020, 10:00 AM IST
Highlights

ಭಾರತದ ಬದ್ಧವೈರಿ ಪಾಕಿಸ್ತಾನ, ಏರ್‌ ಇಂಡಿಯಾ ವಿಮಾನದ ಸಿಬ್ಬಂದಿಯನ್ನು ಅಸ್ಸಲಾಂ ಅಲೈಕುಂ ಎಂದು ಸ್ವಾಗತಿಸಿ, ಅವರ ಸೇವೆಯನ್ನು ಪ್ರಶಂಸಿಸಿದ ಘಟನೆ ನಡೆದಿದೆ.

ನವದೆಹಲಿ (ಏ. 05):  ಭಾರತದ ಬದ್ಧವೈರಿ ಪಾಕಿಸ್ತಾನ, ಏರ್‌ ಇಂಡಿಯಾ ವಿಮಾನದ ಸಿಬ್ಬಂದಿಯನ್ನು ಅಸ್ಸಲಾಂ ಅಲೈಕುಂ ಎಂದು ಸ್ವಾಗತಿಸಿ, ಅವರ ಸೇವೆಯನ್ನು ಪ್ರಶಂಸಿಸಿದ ಘಟನೆ ನಡೆದಿದೆ. 

ಕೆಲ ಯೂರೋಪಿಯನ್‌ ನಾಗರಿಕರು ಹಾಗೂ ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಏರ್‌ ಇಂಡಿಯಾ ವಿಮಾನ ಫ್ರಾಂಕ್‌ಫರ್ಟ್‌ಗೆ ತೆರಳುತ್ತಿತ್ತು. ಈ ವೇಳೆ ಪಾಕಿಸ್ತಾನದ ವಾಯುಸೀಮೆಯನ್ನು ಪ್ರವೇಶಿಸುತ್ತಿದ್ದಂತೆ, ಕರಾಚಿಯ ವಾಯು ಸಂಚಾರ ನಿಯಂತ್ರಣ ಕಚೇರಿಯಿಂದ ಅಸ್ಸಲಾಂ ಅಲೈಕುಂ ಎಂದು ವಿಮಾನವನ್ನು ಪಾಕಿಸ್ತಾನ ಸ್ವಾಗತಿಸಿದೆ. ಅಲ್ಲದೇ ಪರಿಹಾರ ಸಾಮಗ್ರಿಗಳನ್ನು ಸಾಗಿಸುವ ವಿಶೇಷ ವಿಮಾನ ಎಂದು ತಿಳಿದು, ಈ ಕಷ್ಟಕಾಲದಲ್ಲೂ ಸೇವೆ ಸಲ್ಲಿಸುತ್ತಿರುವ ನಿಮ್ಮ ಬಗ್ಗೆ ಹೆಮ್ಮೆಯಿದೆ. ಒಳಿತಾಗಲಿ ಎಂದು ಪ್ರಶಂಸಿದರು ಎಂದು ವಿಮಾನದ ಪೈಲೆಟ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ತಬ್ಲೀಘಿಗಳ ಗುಂಡಿಟ್ಟು ಕೊಲ್ಲಿ: ರಾಜ್‌ ಠಾಕ್ರೆ ಕಿಡಿ

' ನಾವು ಪಾಕಿಸ್ತಾನ ಮಾಹಿತಿ ಕೇಂದ್ರದ ಬಳಿ ತಲುಪುತ್ತಿದ್ದಂತೆ ಪಾಕಿಸ್ತಾನ ವಾಯು ಸಂಚಾರ ನಿಯಂತ್ರಣ ಕಚೇರಿ ಸಿಬ್ಬಂದಿಗಳು ನಮ್ಮನ್ನು ಸ್ವಾಗತಿಸಿದರು. ಇಂತದ್ದೊಂದು ಅಪರೂಪದ ಘಟನೆ ನನ್ನ ಇಷ್ಟು ವರ್ಷದ ಸರ್ವಿಸ್‌ನಲ್ಲೇ ಇದೇ ಮೊದಲು' ಎಂದು ಪೈಲಟ್‌ ಹೇಳಿದ್ದಾರೆ. 

' ಪಾಕಿಸ್ತಾನ ಏರ್‌ಸ್ಪೇಸ್ ನಂತರ ಏರ್ ಇಂಡಿಯಾ ವಿಮಾನ ಇರಾನನ್ನು ಪ್ರವೇಶಿಸಿತು. ಅವರೂ ಕೂಡಾ ಯಾವುದೇ ನಿರ್ಬಂಧ ಹೇರದೇ ನಮಗೆ ನೇರವಾಗಿ ಅವಕಾಶ ನೀಡಿದರು. ನಮ್ಮ ಸರ್ವಿಸ್‌ನಲ್ಲಿ ಮಧ್ಯ ಪ್ರಾಚ್ಯ ದೇಶವೊಂದು ಈ ರೀತಿ ನೇರವಾಇ ನಮ್ಮನ್ನು ಬಿಟ್ಟಿದ್ದು ಇದೇ ಮೊದಲು. ಬಹಳ ಅಪರೂಪದ ಸಂದರ್ಭಗಳಲ್ಲಿ ಇರಾನ್ ಈ ಅವಕಾಶ ನೀಡುತ್ತದೆ. ತಮ್ಮ ರಕ್ಷಣಾ ಸೇವೆಗಾಗಿ ಮಾತ್ರ ಈ ಡೈರೆಕ್ಟ್‌ ರೂಟನ್ನು ಬಳಸಲು ಅವಕಾಶ ನೀಡುತ್ತದೆ. ನಾವು ಅಲ್ಲಿಂದ ಹೊರಡುವಾಗ ಅಲ್ಲಿನ ಸಿಬ್ಬಂದಿಗಳು ಕೂಡಾ ಆಲ್ ದಿ ಬೆಸ್ಟ್ ಎಂದು ವಿಶ್ ಮಾಡಿ ಬೀಳ್ಕೊಟ್ಟವು' ಎಂದು ಪೈಲಟ್‌ ಹೇಳಿದ್ದಾರೆ. 


 

click me!