
ಬೀಜಿಂಗ್(ಮಾ.23): ಮೂರು ದಿನಗಳ ಬಳಿಕ ಇದೇ ಮೊದಲ ಬಾರಿ ಚೀನಾದಲ್ಲಿ ಮೊದಲ ದೇಶಿಯ ಕೊರೋನಾ ಪ್ರಕರಣ ದಾಖಲಾಗಿದೆ. ಇನ್ನೇನು ಸೋಂಕು ತಹಬದಿಗೆ ಬರುತ್ತಿದೆ ಅನ್ನುವಷ್ಟರಲ್ಲಿ ಸೋಂಕು ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ. '
ಕಳೆದ ಮೂರು ದಿನಗಳಲ್ಲಿ ಅಲ್ಲಿ ಯಾವುದೇ ದೇಶಿಯ ಸೋಂಕು ಕಂಡು ಬಂದಿರಲಿಲ್ಲ. ಶನಿವಾರ 46 ಮಂದಿಗೆ ಸೋಂಕು ದೃಢವಾಗಿದ್ದು, ಇದರಲ್ಲಿ ಒಂದು ದೇಶಿಯ ಪ್ರಕರಣವಾಗಿದೆ. ಆ ಮೂಲಕ ಒಟ್ಟು ಸೋಂಕಿಯತರ ಸಂಖ್ಯೆ 81,054ಕ್ಕೆ ಮುಟ್ಟಿದೆ. ಹುಬೇ ಪ್ರಾಂತ್ಯದಲ್ಲಿ 5 ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿದ್ದು, ಆ ಮೂಲಕ ಸಾವಿನ ಸಂಖ್ಯೆ 3,261ಕ್ಕೆ ತಲುಪಿದೆ.
ನಂಬರ್ ಗೇಮ್
46- ಶನಿವಾರ ಗೊತ್ತಾದ ಹೊಸ ಪ್ರಕರಣ
6- ಶನಿವಾರದ ಸಾವು
3,261- ಈವರೆಗೆ ಒಟ್ಟು ಸಾವು
81,054- ಸೋಂಕಿತರ ಸಂಖ್ಯೆ
5,549- ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು
72,244- ಗುಣಮುಖರಾದವರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ