ಸೋಶಿಯಲ್ ಮೀಡಿಯಾದಲ್ಲಿ ನಿಧಿಯೊಳಗಿನಿಂದ ಹಾವು ಹೊರಗೆ ಬಂದಿರುವ ವಿಡಿಯೋ ವೈರಲ್ ಆಗುತ್ತಿದೆ. ಒಬ್ಬ ವ್ಯಕ್ತಿ ಮೆಟಲ್ ಡಿಟೆಕ್ಟರ್ ಬಳಸಿ ಭೂಮಿಯಲ್ಲಿ ಹೂಜಿಯೊಂದನ್ನು ಕಂಡುಹಿಡಿದು ಅದನ್ನು ತೆರೆದಾಗ ಹಾವು ಹೊರಬರುತ್ತದೆ.
ನವದೆಹಲಿ: ನಿಧಿಯ ಸುತ್ತಲೂ ಸರ್ಪಗಾವಲು ಇರುತ್ತೆ ಎಂಬ ಮಾತುಗಳು ನಾವು ಮೊದಲಿನಿಂದಲೂ ಕೇಳಿರುತ್ತೇವೆ. ಇತ್ತೀಚೆಗೆ ಓಡಿಶಾದ ಪುರಿಯ ಜಗನ್ನಾಥ ದೇವಾಲಯದ ನಿಧಿ ತೆರೆಯುವ ಸಂದರ್ಭದಲ್ಲಿ ನುರಿತ ಉರಗತಜ್ಞರು ಹಾಗೂ ಸ್ಥಳೀಯ ಹಾವಾಡಿಗರನ್ನು ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಇದವರೆಗೂ ಸರ್ಕಾರ ಎಷ್ಟು ಮೌಲ್ಯದ ನಿಧಿ ಸಿಕ್ಕಿದೆ ಎಂಬ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಿಧಿಯೊಳಗಿನಿಂದ ಹಾವು ಹೊರಗೆ ಬಂದಿರುವ ವಿಡಿಯೋ ವೈರಲ್ ಆಗುತ್ತಿದೆ. ಭೂಮಿ ಅಗೆಯುತ್ತಿರುವಾಗ ಹೂಜಿ ಆಕಾರದ ವಸ್ತು ಸಿಗುತ್ತದೆ. ಹೂಜಿ ಓಪನ್ ಮಾಡಿದಾಗ ಬುಸ್ಸೆಂದು ಹಾವು ಹೊರಗೆ ಬರುತ್ತದೆ.
ಎರಡು ವಾರಗಳ ಹಿಂದೆ @altindefineavcisi ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ.A magical treasure finding moment ಎಂದು ಬರೆದುಕೊಳ್ಳಲಾಗಿದೆ. ಓರ್ವ ವ್ಯಕ್ತಿ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಏನೋ ಹುಡುಕುತ್ತಿರುತ್ತಾನೆ. ಈ ಸಮಯದಲ್ಲಿ ಮೆಟಲ್ ಡಿಟೆಕ್ಟರ್ ಈ ಪ್ರದೇಶದಲ್ಲಿ ಏನೋ ಇದೆ ಎಂಬ ಸನ್ನೆಯನ್ನು ನೀಡುತ್ತದೆ. ಕೂಡಲೇ ಆ ವ್ಯಕ್ತಿ ಭೂಮಿ ಅಗೆಯಲು ಶುರು ಮಾಡುತ್ತಾನೆ. ಸ್ವಲ್ಪ ಆಳದವರೆಗೆ ಅಗೆಯಲು ಶುರು ಮಾಡುತ್ತಿದ್ದಂತೆ ಹೂಜಿಯಂಥ ವಸ್ತು ಸಿಗುತ್ತದೆ. ನಂತರ ಆ ವ್ಯಕ್ತಿಯನ್ನು ಮಣ್ಣಿನಿಂದ ಹೂಜಿಯನ್ನು ಹೊರಗೆ ತೆಗೆಯುತ್ತಾನೆ.
undefined
ಹೂಜಿಯ ಮೇಲ್ಬಾಗನ್ನು ಕಬ್ಬಿಣದ ಮುಚ್ಚಳದಿಂದ ಬಿಗಿಯಾಗಿ ಮುಚ್ಚಲಾಗಿರುತ್ತದೆ. ಮುಚ್ಚಳದ ಮೇಲೆ ಸಣ್ಣದಾದ ರಂಧ್ರ ಇರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಬಿಗಿಯಾಗಿ ಮುಚ್ಚಲಾಗಿದ್ದ ಮುಚ್ಚಳವನ್ನು ತೆಗೆಯುತ್ತಿದ್ದಂತೆ ಒಳಗಡೆಯಿಂದ ಹಾವು ಹೊರಗೆ ಬರುತ್ತದೆ. ನಂತರ ಹಾವನ್ನು ಹೂಜಿಯಿಂದ ಹೊರಗೆ ತೆಗೆಯಲಾಗುತ್ತದೆ. ನಂತರ ಅದರೊಳಗಿದ್ದ ಕಪ್ಪೆಯನ್ನು ತೆಗೆಯಲಾಗುತ್ತದೆ. ಕಪ್ಪೆ ಬಳಿಕ ಚಿನ್ನದಂತಿರುವ ಉದ್ದದ ಹಾರವನನ್ನು ತೆಗೆಯುತ್ತಾರೆ. ಕೊನೆಗೆ ಹುಂಡಿಯಲ್ಲಿರುವ ನಾಣ್ಯಗಳನ್ನು ಸುರಿಯಲಾಗುತ್ತದೆ. ಹೂಜಿಯಿಂದ ಹಾವು ಹೊರಗೆ ಬರುತ್ತಲೇ ವ್ಯಕ್ತಿ ಒಂದು ಕ್ಷಣ ಭಯಗೊಳ್ಳುತ್ತಾನೆ.
ಈ ವಿಡಿಯೋ 50 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡಿದ್ದಾರೆ. ಕೆಲವರು ತುಂಬಾ ಚಿನ್ನದ ನಾಣ್ಯಗಳು ಸಿಕ್ಕಂತೆ ಕಾಣಿಸುತ್ತಿದೆ. ಅಷ್ಟೊಂದು ಚಿನ್ನ ಏನ್ ಮಾಡಿದ್ದೀರಿ? ಈ ನಿಧಿ ನಿಮಗೆ ಸಿಕ್ಕಿದ್ದು ಎಲ್ಲಿ? ಇದು ಎಷ್ಟು ವರ್ಷದ ಹಳೆಯ ನಿಧಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಆದ್ರೆ ಒಂದಿಷ್ಟು ಮಂದಿ ವಿಡಿಯೋ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ನೋಡುವ ಎಲ್ಲಾ ವಿಡಿಯೋಗಳು ಸತ್ಯ ಆಗಿರಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.